Neer Dose Karnataka
Take a fresh look at your lifestyle.

ಭಾರತೀಯರಿಗೆ ವಾಟ್ಸಾಪ್ ಶಾಕ್, ಕೇವಲ ಒಂದು ತಿಂಗಳಿನಲ್ಲಿ 17 ಲಕ್ಷ ಭಾರತೀಯರ ವಾಟ್ಸಾಪ್ ಖಾತೆಗಳು ಬ್ಯಾನ್ ಕಾರಣ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಜನರ ಜೀವನದಲ್ಲಿ ಪ್ರಮುಖ ಅಂಗವಾಗಿದೆ. ಪ್ರತಿಯೊಂದು ವಿಧದಲ್ಲೂ ಕೂಡ ಸೋಶಿಯಲ್ ಮೀಡಿಯಾ ಎನ್ನುವುದು ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ಏರ್ಪಟ್ಟಿದೆ. ಒಂದು ಕಾಲದಲ್ಲಿ ಅಂದರೆ ಪ್ರಾಚೀನ ಕಾಲದಲ್ಲಿ ಸಂದೇಶವನ್ನು ಕಳಿಸಲು ಪಾರಿವಾಳವನ್ನು ಅಥವಾ ದೂತರನ್ನು ಕಳುಹಿಸಲಾಗುತ್ತಿತ್ತು. ಅದಾದ ನಂತರ ಅಂಚೆ ಕಚೇರಿಗಳು ಪ್ರಾರಂಭವಾಗಿ ಪತ್ರಗಳನ್ನು ಕಳುಹಿಸಲಾಗುತ್ತಿತ್ತು.

ಅದಾದ ನಂತರ ನಿಮಗೆಲ್ಲರಿಗೂ ತಿಳಿದಿರುವಂತೆ ಮೊಬೈಲ್ ಸೇವೆಗಳು ಪ್ರಾರಂಭವಾದ ಮೇಲೆ ನಾರ್ಮಲ್ ಮೆಸೇಜ್ ಗಳನ್ನು ಕೂಡ ಕಳುಹಿಸಲಾಗುತ್ತಿತ್ತು. ಅದಾ ನಂತರ ಟೆಕ್ನೋಲಜಿ ಎನ್ನುವುದು ಸಾಕಷ್ಟು ಮುಂದುವರೆದು ವಾಟ್ಸಪ್ ಎನ್ನುವ ಅಪ್ಲಿಕೇಶನ್ ಪ್ರಾರಂಭವಾಗುತ್ತದೆ. ವಾಟ್ಸಾಪ್ ಬಂದಿದ್ದೆ ಬಂದಿದ್ದು ಎಲ್ಲರೂ ವಾಟ್ಸಾಪ್ ಗೆ ಶರಣಾಗಿ ಅದರಲ್ಲೇ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ವಾಟ್ಸಪ್ ನಲ್ಲಿ ಹಲವಾರು ಪ್ರಮುಖ ವಿಚಾರಗಳನ್ನು ಶೇರ್ ಮಾಡಿಕೊಳ್ಳುವುದು ಯಾರಿಗೆ ಸಂದೇಶವನ್ನು ಕಳುಹಿಸಲು ಇದ್ದರೆ ಅದರಲ್ಲಿ ಸಂದೇಶವನ್ನು ಕಳಿಸುತ್ತಾರೆ. ಕೆಲವು ವರ್ಷಗಳ ಹಿಂದಷ್ಟೇ ಈ ಸಂಸ್ಥೆಯನ್ನು ಸಂಪೂರ್ಣವಾಗಿ ಫೇಸ್ಬುಕ್ ನಿರ್ಮಾತೃ ಆಗಿರುವ ಮಾರ್ಕ್ ಜುಕರ್ಬರ್ಗ್ ಖರೀದಿಸಿದ್ದಾರೆ.

ಇತ್ತೀಚಿಗೆ ಬಂದಿರುವ ಸುದ್ದಿಯ ಪ್ರಕಾರ ನವೆಂಬರ್ ತಿಂಗಳಲ್ಲಿ 17 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸಪ್ ಖಾತೆಗಳು ನಿಷೇಧ ಗೊಂಡಿದೆ. ಹಾಗಿದ್ದರೆ ಇಷ್ಟೊಂದು ಖಾತೆಗಳು ನಿಷೇಧ ವಾಗುವುದಕ್ಕೆ ಕಾರಣವೇನೆಂಬುದನ್ನು ನಾವು ನಿಮಗೆ ತಿಳಿಸುತ್ತೇವೆ ಬನ್ನಿ. ಹೌದು ಗೆಳೆಯರೇ ಐಟಿ ನಿಯಮ 2021 ರ ಪ್ರಕಾರ ವಾಟ್ಸಾಪ್ ನ ನಿಯಮಗಳನ್ನು ಉಲ್ಲಂಘಿಸಿದವರ ಖಾತೆಗಳನ್ನು ನಿಷೇಧ ಗೊಳಿಸಲಾಗಿದೆ. ಬಳಕೆದಾರರು ನೀಡಿರುವ ದೂರಿನ ಅನ್ವಯ ಯಾರೆಲ್ಲ ಶರತ್ತು ಹಾಗೂ ನಿಯಮಗಳನ್ನು ಉಲ್ಲಂಘಿಸಿದ್ದಾರೋ ಅವರ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಸರಿಸುಮಾರು ಒಟ್ಟು 17,59,000 ಖಾತೆಗಳು ನಿಷೇಧಕ್ಕೆ ಒಳಗಾಗಿದೆ. ಈ ಖಾತೆಯನ್ನು ಮತ್ತೊಮ್ಮೆ ಪ್ರಾರಂಭಿಸುವ ಅವಕಾಶವನ್ನು ಬಳಕೆದಾರರಿಗೆ ನೀಡಲಾಗಿಲ್ಲ ಆದರೆ ಮುಂದಿನ ದಿನಗಳಲ್ಲಿ ಈ ಕುರಿತಂತೆ ಆಯ್ಕೆಗಳನ್ನು ತರುವ ಯೋಜನೆ ಇದೆ ಎಂದು ಕೇಳಿಬರುತ್ತಿದೆ.

Comments are closed.