Neer Dose Karnataka
Take a fresh look at your lifestyle.

ನೀವು ದೇವರನ್ನು ಬೇಡಿಕೊಳ್ಳುತ್ತಿರುವಾಗ ನಿಮ್ಮ ಕಣ್ಣಿನಿಂದ ಕಣ್ಣೀರು ಬಂದರೆ ಏನರ್ಥ ಗೊತ್ತೇ?? ಇದಕ್ಕಿದೆ ವಿಶೇಷವಾದ ಅರ್ಥ. ಏನು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಮ್ಮ ಭೂಮಿಯನ್ನು ವುದು ಮೊದಲು ಕೇವಲ ಅಂಧಕಾರದಿಂದ ಕೂಡಿತ್ತು ಇಲ್ಲಿ ಯಾವ ಜೀವಜಂತುಗಳು ಕೂಡ ಇರಲಿಲ್ಲ. ನಂತರ ಈ ಭೂಮಿ ಮೇಲೆ ಶಿವಲಿಂಗದ ಉದ್ಭವವಾಗಿ ಅದರ ನಂತರ ಎಲ್ಲ ಜೀವಜಂತುಗಳು ಕೂಡ ಹುಟ್ಟಲು ಪ್ರಾರಂಭಿಸುತ್ತವೆ. ಅದಕ್ಕಾಗಿಯೇ ಶಿವನನ್ನು ಆದಿ ಶಿವನನ್ನೇ ಅಂತ್ಯ ಎಂದು ಕರೆಯುತ್ತಾರೆ. ಹುಟ್ಟಿದ ಮೇಲೆ ಪ್ರತಿಯೊಬ್ಬ ಮನುಷ್ಯನು ಕೂಡ ಭಗವಂತನಲ್ಲಿ ನಂಬಿಕೆ ಇಡಬೇಕಾದದ್ದು ಅನಿವಾರ್ಯ ಹಾಗೂ ಆತನ ಪ್ರಾರ್ಥನೆಯಲ್ಲಿ ಲೌಕಿಕ ಜೀವನಕ್ಕಿಂತ ಮಿಗಿಲಾದಂತಹ ಸುಖ ಸಿಗುತ್ತದೆ. ನಮ್ಮಲ್ಲಿ ಹಲವರು ದೇವರ ಬಳಿ ಕಷ್ಟಗಳನ್ನು ಹೇಳಿಕೊಳ್ಳುತ್ತೇವೆ.

ಅಥವಾ ಯಾವುದೋ ಪೂಜೆ ಸಂದರ್ಭದಲ್ಲಿ ನಾವು ದೇವರ ಧ್ಯಾನದಲ್ಲಿ ಮಗ್ನರಾಗಿ ರುತ್ತವೆ. ಈ ಸಂದರ್ಭದಲ್ಲಿ ನಮ್ಮ ಪೂಜೆ ದೇವರಿಗೆ ತಲುಪಿದೆ ಎಂಬುದು ಹೇಗೆ ನಮಗೆ ತಿಳಿಯುತ್ತದೆ ಅದಕ್ಕೂ ಕೂಡ ಭಗವಂತನ ಹಲವಾರು ಸಂಕೇತಗಳನ್ನು ನೀಡುತ್ತಾರೆ. ಅವುಗಳಲ್ಲಿ ಪೂಜೆ ಮಾಡುತ್ತಿರುವ ಸಂದರ್ಭದಲ್ಲಿ ದೀಪದ ಬೆಳಕು ಇನ್ನಷ್ಟು ಪ್ರಕಾಶವಾಗಿ ಬೆಳಗುವುದು ಗೋಮಾತೆ ಬರುವುದು ಅಥವಾ ದೇವರ ಮೈಮೇಲೆ ಪೋಣಿಸಿ ಇರುವಂತಹ ಹೂವು ಕೆಳಗೆ ಬೀಳುವುದು ಹೀಗೆ ಹಲವಾರು ಸಂಕೇತಗಳನ್ನು ನೀವು ದೇವರ ಆಶೀರ್ವಾದ ಎಂದೂ ಕೂಡ ಭಾವಿಸಬಹುದಾಗಿದೆ.

ಇನ್ನು ನೀವು ದೇವರ ಕುರಿತಂತೆ ಪ್ರಾರ್ಥನೆ ಮಾಡುತ್ತಿರಬೇಕಾದರೆ ನಿಮ್ಮ ಕಣ್ಣಿನಿಂದ ನಿಮಗೆ ತಿಳಿಯದಂತೆ ಕಣ್ಣೀರು ಹೊರಗೆ ಬರುತ್ತದೆ. ಹೌದು ಗೆಳೆಯರೇ ಈ ಸಂದರ್ಭದಲ್ಲಿ ದೇವರ ಧ್ಯಾನ ಮಾಡುತ್ತಿರುವ ನೀವು ಭಕ್ತಿಪರವಶರಾಗಿ ಇರುತ್ತೀರಿ. ಈ ಸಂದರ್ಭದಲ್ಲಿ ನಿಮ್ಮ ಕಣ್ಣಿಂದ ನೀರು ಬರುತ್ತಿದೆ ಎಂದರೆ ನಿಮ್ಮ ಕಷ್ಟ ಅಥವಾ ನಿಮ್ಮ ಕೋರಿಕೆಗಳು ಆ ಭಗವಂತನಿಗೆ ಮುಟ್ಟಿದೆ ಎಂದೂ ಅದಕ್ಕೆ ಭಗವಂತ ಶೀಘ್ರದಲ್ಲೇ ಪರಿಹಾರವನ್ನು ಕೂಡ ನೀಡಲಿದ್ದಾರೆ ಎಂಬುದರ ಸಂಕೇತ. ನಿಷ್ಕಲ್ಮಶವಾಗಿ ದೇವರ ಪ್ರಾರ್ಥನೆ ಮಾಡುವುದರಿಂದ ದೇವರ ಅನುಗ್ರಹ ಖಂಡಿತವಾಗಿಯೂ ಪಡೆಯುತ್ತೀರಿ. ಈ ಮೇಲೆ ಹೇಳಿರುವ ಸಂಕೇತಗಳು ದೇವರು ನಿಮ್ಮ ಪ್ರಾರ್ಥನೆ ಹಾಗೂ ಭಕ್ತಿಯನ್ನು ಮೆಚ್ಚಿ ನಿಮ್ಮ ಜೀವನದಲ್ಲಿ ಶುಭವನ್ನು ತರಲಿದ್ದಾರೆ ಎಂಬುದರ ಸಂಕೇತವಾಗಿದೆ.

Comments are closed.