ಪುಷ್ಪ ಚಿತ್ರಕ್ಕಾಗಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹಾಗೂ ಮತ್ತಿತರರಿಗೆ ಸಿಕ್ಕಿರುವ ಸಂಭಾವನೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪಾ ಚಿತ್ರ ಬಿಡುಗಡೆಯಾಗಿ ಈಗಾಗಲೇ ಬಾಕ್ಸಾಫೀಸ್ ನಲ್ಲಿ ದೊಡ್ಡಮಟ್ಟದ ಕಲೆಕ್ಷನ್ ಮಾಡುತ್ತಿದೆ. ಅದರಲ್ಲೂ ಈಗಾಗಲೇ 2021 ರ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲು ಅರ್ಜುನ್ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪುಷ್ಪ ಚಿತ್ರದ ಮೊದಲ ಭಾಗವೇ ಇಷ್ಟೊಂದು ದೊಡ್ಡ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದ್ದು ಚಿತ್ರದ ಮೊದಲ ಹಂತದ ಯಶಸ್ಸು ಎಂದು ಹೇಳಬಹುದಾಗಿದೆ.
ಈಗಾಗಲೇ ಕೆಜಿಎಫ್ ಚಿತ್ರದ ಹಿಂದಿ ಗಳಿಕೆಯನ್ನು ಹಿಂದಿಕ್ಕಿರುವ ಪುಷ್ಪ ಚಿತ್ರ ಹಿಂದಿ ಪ್ರಾಂತ್ಯದಲ್ಲಿ 75 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ. ಒಟ್ಟಾರೆಯಾಗಿ ವಿಶ್ವಾದ್ಯಂತ 400ಕೋಟಿ ಸರಿಸುಮಾರು ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ ಎಂದು ಅಧಿಕೃತವಾಗಿ ಘೋಷಣೆ ಹೊರಬಿದ್ದಿದೆ. ಇನ್ನು ಈಗ ಕುತೂಹಲ ಹುಟ್ಟಿರುವುದು ಪುಷ್ಪ ಚಿತ್ರಕ್ಕಾಗಿ ಚಿತ್ರದ ನಟ-ನಟಿಯರು ನಿರ್ದೇಶಕರು ಪಡೆದಿರುವ ಸಂಭಾವನೆ ಕುರಿತಂತೆ. ಚಿತ್ರದಲ್ಲಿ ಅಲ್ಲು ಅರ್ಜುನ ರಶ್ಮಿಕ ಮಂದಣ್ಣ ಸುನಿಲ್ ಫಹಾದ್ ಫಾಸಿಲ್ ಸಮಂತ ಮತ್ತು ನಿರ್ದೇಶಕ ಸುಕುಮಾರ್ ಅವರು ಪ್ರಮುಖವಾಗಿ ಕಾಣಿಸಿಕೊಂಡಿರುವ ಹೆಸರು.
ಮೊದಲನೇದಾಗಿ ಹೇಳುವುದಾದರೆ ಅಲ್ಲು ಅರ್ಜುನ್ ರವರು ಬರೋಬ್ಬರಿ 18 ರಿಂದ 20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತದೆ. ಇದು ಒಂದು ಭಾಗಕ್ಕೆ ತೆಗೆದುಕೊಂಡಿರುವುದಾ ಅಥವಾ ಎರಡು ಪಾರ್ಟ್ ಗೆ ಸೇರಿ ತೆಗೆದುಕೊಂಡಿರುವುದಾ ಎಂದು ತಿಳಿದು ಬಂದಿಲ್ಲ. ರಶ್ಮಿಕ ಮಂದಣ್ಣ ನವರು ಎಂಟರಿಂದ ಹತ್ತು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಕೇಳಿಬರುತ್ತಿದೆ. ಇದು ಎರಡು ಪಾರ್ಟ್ ಗೆ ಸೇರಿ ತೆಗೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ ಏಕೆಂದರೆ ತೆಲುಗು ಚಿತ್ರರಂಗದಲ್ಲಿ ಮೂರು ಕೋಟಿ ರೂಪಾಯಿ ಮೇಲೆ ನಟಿಯರಿಗೆ ಸಂಭಾವನೆ ಸಿಗುವುದಿಲ್ಲ. ನಟಿ ಸಮಂತಾ ರವರಿಗೆ ಐಟಂ ಡ್ಯಾನ್ಸ್ ಮಾಡಿದ್ದಕ್ಕಾಗಿ ಬರೋಬ್ಬರಿ 1.5 ರಿಂದ 2 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆಯಂತೆ. ಫಹಾದ್ ಫಾಸಿಲ್ ರವರಿಗೆ 3.5 ರಿಂದ 4ಕೋಟಿ ರೂಪಾಯಿ ಸುನೀಲ್ ರವರಿಗೆ 1.5 ರಿಂದ 2 ಕೋಟಿ ರೂಪಾಯಿ. ಎಲ್ಲರಿಗಿಂತ ಹೆಚ್ಚಾಗಿ ಚಿತ್ರದ ನಿರ್ದೇಶಕ ನಾಗಿರುವ ಕುಮಾರ್ ಅವರಿಗೆ ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ದೊರೆತಿದೆ. ಇಷ್ಟೊಂದು ಸಂಭಾವನೆ ಸಿಕ್ಕಿದೆ ಎಂದರೆ ಚಿತ್ರದ ಗಳಿಕೆ ಕೂಡ ಅದರ ದುಪ್ಪಟ್ಟಾಗಬಹುದೆಂದು ಅಂದಾಜಿಸಲಾಗಿದೆ.
Comments are closed.