ಬಿಗ್ ನ್ಯೂಸ್: 3 ವರ್ಷದ ಬ್ಯಾಟರಿ ವಾರಂಟಿ ಜೊತೆಗೆ ಹೊಸ ಎಲೆಕ್ಟ್ರಾನಿಕ್ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ. ಬೆಲೆ ಎಷ್ಟು ಕಡಿಮೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಪರಿಸರಸ್ನೇಹಿ ವಾಹನಗಳನ್ನು ನಮ್ಮ ದೇಶದಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ಈಗಾಗಲೇ ಹಲವಾರು ಎಲೆಕ್ಟ್ರಾನಿಕ್ ಸ್ಕೂಟರ್ ಗಳ ಸಂಸ್ಥೆಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಹಾಗೆ ಜನರಿಗೆ ಯಾವುದನ್ನು ಆಯ್ಕೆ ಮಾಡುವುದು ಎಂಬ ಕುರಿತಂತೆ ಕೂಡ ಕುತೂಹಲ ಹಾಗೂ ಗೊಂದಲಗಳು ಜಾಸ್ತಿಯಾಗುತ್ತಿವೆ. ಕುತೂಹಲ ಯಾವ ಎಲೆಕ್ಟ್ರಾನಿಕ್ ಸ್ಕೂಟರ್ ನಲ್ಲಿ ಯಾವ ಫೀಚರ್ ಗಳು ಇವೆ ಎಂಬ ಕುರಿತಂತೆ ಗೊಂದಲಗಳು ಯಾವುದನ್ನು ಖರೀದಿಸಬೇಕು ಎನ್ನುವುದರ ಕುರಿತಂತೆ.
ಹಾಗಿದ್ದರೆ ಇತ್ತೀಚಿಗಷ್ಟೇ ಮಾರ್ಕೆಟ್ ನಲ್ಲಿ ಬಿಡುಗಡೆಯಾಗಿರುವ ಹೊಸ ಎಲೆಕ್ಟ್ರಾನಿಕ್ ಸ್ಕೂಟರ್ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ. ಈ ಎಲೆಕ್ಟ್ರಾನಿಕ್ ಸ್ಕೂಟರ್ ಹೆಸರು ರಫ್ತಾರ್ ಗೆಲಕ್ಸಿ ಎನ್ನುವುದಾಗಿ. ಇದರಲ್ಲಿ 60 ವ್ಯಾಟ್ 25Ah ನ ಲೀಥಿಯಂ ಅಯಾನ್ ಬ್ಯಾಟರಿ ಇದ್ದು ಇದರ ಜೊತೆಗೆ 250 ವ್ಯಾಟ್ ನ ಮೋಟಾರ್ ಕಿ ಕೂಡ ಸಿಗುತ್ತದೆ. ಇದರ ಜೊತೆಗೆ ಪೋರ್ಟೆಬಲ್ ಬ್ಯಾಟರಿ ನೀಡಿರುವುದರಿಂದಾಗಿ ಎಲ್ಲಿ ಕೂಡ ಇದನ್ನು ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಕಂಪನಿ ಬ್ಯಾಟರಿ ಮೇಲೆ ಬರೋಬ್ಬರಿ ಮೂರು ವರ್ಷ ಅಂದರೆ 60000 ಕಿಲೋಮೀಟರ್ ಗಳಷ್ಟು ವಾರಂಟಿಯನ್ನು ನೀಡುತ್ತದೆ. ಇದು ಇನ್ನೂ ಎರಡು ವರ್ಷ ಕೂಡ ಅಧಿಕವಾಗುವ ಸಾಧ್ಯತೆ ಇದೆ. ಇದರ ಮೋಟಾರ್ ಮೇಲೆ ಮೂರುವರ್ಷದ ಗ್ಯಾರಂಟಿ ಹಾಗೂ ಬ್ಯಾಟರಿ ಚಾರ್ಜರ್ ಮೇಲೆ ಒಂದು ವರ್ಷದ ಗ್ಯಾರೆಂಟಿಯನ್ನು ಕೂಡ ನೀಡುತ್ತದೆ. ಕಂಪನಿಯ ಪ್ರಕಾರ ಈ ಬ್ಯಾಟರಿಯನ್ನು ಫುಲ್ ಚಾರ್ಜ್ ಮಾಡಲು ನಾಲ್ಕರಿಂದ ಆರು ಗಂಟೆಗಳು ಬೇಕಾಗಬಹುದು ಅಷ್ಟೇ.
ಈ ವಿಶೇಷವಾದ ಎಲೆಕ್ಟ್ರಾನಿಕ್ ಸ್ಕೂಟರ್ ಕೇವಲ 51,900 ರೂಪಾಯಿ ಬೆಲೆಯಿಂದ ಪ್ರಾರಂಭವಾಗಿ ಮಾರುಕಟ್ಟೆಯಲ್ಲಿ ಚಾಲ್ತಿಗೆ ಬಂದಿದೆ. ರಫ್ತಾರ್ ಗ್ಯಾಲಕ್ಸಿ ಕಂಪನಿಯ ಪ್ರಕಾರ ಒಂದು ಬಾರಿ ಫುಲ್ ಚಾರ್ಜ್ ಮಾಡಿದ ನಂತರ ಬರೋಬ್ಬರಿ 100 ಕಿಲೋಮೀಟರ್ ವರೆಗೆ ಈ ಸ್ಕೂಟರ್ ಚಲಿಸುತ್ತದೆ. ಗಂಟೆಗೆ ಅತ್ಯಂತ ವೇಗ ಎಂದರೆ 25 ಕಿಲೋಮೀಟರ್ ವರೆಗೆ ಹೋಗಬಹುದು. ಇದರ ಇನ್ನಷ್ಟು ವೈಶಿಷ್ಟ್ಯ ವಾದಂತಹ ಫೀಚರ್ ಗಳೆಂದರೆ, ಡಿಸ್ಕ್ ಬ್ರೇಕ್ ಕಳ್ಳತನವನ್ನು ತಡೆಯಬಲ್ಲಂತಹ ಸ್ಮಾರ್ಟ್ ಲಾಕ್ ಸ್ಟೈಲಿಶ್ ಅಲುಮಿನಿಯಂ ಚಕ್ರಗಳು ಡಿಜಿಟಲ್ ಎಮ್ಎಫ್ ಎಲ್ ಇ ಡಿ ಸ್ಮಾರ್ಟ್ ಮೊಬೈಲ್ ಆಪ್ ಎಲ್ ಇ ಡಿ ಪ್ರೊಜೆಕ್ಟರ್ ಲ್ಯಾಂಪ್ ಹೀಗೆ ಹಲವಾರು ಗುಣ ವಿಶೇಷಗಳಿವೆ. ಒಂದು ವೇಳೆ ನೀವು ಎಲೆಕ್ಟ್ರಾನಿಕ್ ಸ್ಕೂಟರ್ ತೆಗೆದುಕೊಳ್ಳುವ ಯೋಚನೆಯನ್ನು ಮಾಡಿದ್ದರೆ ರಫ್ತಾರ್ ಗ್ಯಾಲಕ್ಸಿ ಸ್ಕೂಟರ್ ಪರ್ಫೆಕ್ಟ್ ಚಾಯ್ಸ್ ಎಂದು ಹೇಳಬಹುದು.
Comments are closed.