Neer Dose Karnataka
Take a fresh look at your lifestyle.

ನೀವು ಮಾಡುವ ಈ ಚಿಕ್ಕ ತಪ್ಪುಗಳೇ ನಿಮ್ಮ ಸೋಲಿಗೆ ಕಾರಣ, ಈ ತಪ್ಪುಗಳನ್ನು ಮಾಡದೆ ಇದ್ದರೇ ಖಂಡಿತಾ ಯಶಸ್ಸು ಸಿಗುತ್ತದೆ, ಯಾವ್ಯಾವು ಗೊತ್ತೇ?

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಗುರಿಯನ್ನು, ಅದನ್ನು ಈಡೇರಿಸುವ ಕನಸನ್ನು ಹೊಂದಿರುತ್ತಾರೆ. ಕೆಲವರು ಆ ನಿಟ್ಟಿನಲ್ಲಿ ಹಗಲು ರಾತ್ರಿ ಕಷ್ಟಪಟ್ಟರೆ, ಕೆಲವರು ಅದನ್ನು ಈಡೇರಿಸುವ ಮಾರ್ಗವೇ ಗೊತ್ತಿಲ್ಲದೇ ಗುರಿ ಮುಟ್ಟುವಲ್ಲಿ ಹಿಂದುಳಿಯುತ್ತಾರೆ. ಜೊತೆಗೆ ಅವರು ಮಾಡುವ ಕೆಲವು ತಪ್ಪುಗಳು ಅವರನ್ನು ಯಶಸ್ಸಿನ ದಾರಿಯಿಂದ ದೂರಉಳಿಯುವಂತೆ ಮಾಡುತ್ತದೆ. ಹಾಗಾದರೆ ಯಶಸ್ಸುಗಳಿಸಲು ನೀವು ಮಾಡಬಾರದ ತಪ್ಪುಗಳುಗಳು ಯಾವವು ನೋಡೋಣ.

ಮೊದಲನೆಯದಾಗಿ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ ಅಥವಾ ಯಾವುದನ್ನಾದರೂ ಮಾಡದೇ ಇರಲು ಸಾಮಾನ್ಯ ನೆಪ ಹೇಳುವುದು ಸರಿಯಲ್ಲ. ಏನಾದರೂ ಹೇಳಿ ಮಾಡಬೇಕಾದ ಕೆಲಸದಿದ ತಪ್ಪಿಸಿಕೊಳ್ಳಬೇಡಿ. ಇನ್ನು ಎಲ್ಲರೂ ಒಂದಿಲ್ಲೊಂದು ಕೆಲಸದಲ್ಲಿ ಬ್ಯುಸಿಯಾಗಿತ್ತು ಹೆಚ್ಚು ಒತ್ತಡವನ್ನು ಎದುರಿಸಬೇಕಾಗುತ್ತದೆ. ಆದರೆ ಇದರ ಬಗ್ಗೆಯೇ ಹೆಚ್ಚು ಯೋಚನೆ ಮಾಡುತ್ತಾ ಕುಳಿತುಕೊಳ್ಳುವ ಬದಲು ಯಶಸ್ಸನ್ನು ಸಾಧಿಸಲು ಏನು ಮಾಡಬೇಕು ಎನ್ನುವುದರ ಬಗ್ಗೆ ಗಮನಹರಿಸಬೇಕು.

ನಮ್ಮ ಬಗ್ಗ್ಗೆಯಾಗಲೀ, ನಮ್ಮ ಜೀವನದ ಬಗ್ಗೆಯಾಗಲಿ, ಅಥವಾ ನಾವು ಯಶಸ್ಸು ಸಾಧಿಸಲು ಇತರರು ಅಡ್ಡಿಯಾಗಿದ್ದಾರೆ ಎಂದಾಗಲಿ ದೂರುವುದು ಸರಿಯಲ್ಲ, ಎಲ್ಲರ ಜೀವನದಲ್ಲಿಯೂ ಸಮಸ್ಯೆಗಳಿರುತ್ತವೆ. ಆದರೆ ದೂರುವುದು ಯಾವುದಕ್ಕೂ ಪರಿಹಾರವಲ್ಲ, ಸಮಸ್ಯೆಗೆ ಪರಿಹಾರ ಹುಡುಕಬೇಕೆ ಹೊರತು ಯೋಚಿಸುವುದಲ್ಲ. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕಾರಣವನ್ನು ಹುಡುಕುವುದು ತಪ್ಪು, ಹಾಗೆಯೇ ಎಲ್ಲವನ್ನೂ ತಾನೇ ಮಾಡುತ್ತೇನೆ ಎನ್ನುವುದು ಕೂಡ. ಜೊತೆಗೆ ನಮಗೆ ನಾವು ಚೌಕಟ್ಟನ್ನು ಹಾಕಿಕೊಂಡ ನನ್ನ ಮಿತಿ ಇಷ್ಟೇ ಇದಕ್ಕಿಂತ ಮಿಗಿಲಾಗಿ ಏನು ಮಾಡಲು ಸಾಧ್ಯವಿಲ್ಲ ಎಂದು ಕೊಳ್ಳುವುದೂ ಕೂಡ ನಿಮ್ಮ ಗುರಿ ತಲುಪುವುದಕ್ಕೆ ಅಡ್ಡಿಯಾಗುತ್ತದೆ.

ನಿಮ್ಮ ಜೀವನದಲ್ಲಿ ನೀವು ಸಾಧಿಸಬೇಕೆಂದಿರುವ ವಿಷಯಗಳ ಪಟ್ಟಿಯನ್ನು ಮಾಡಿ. ಜೀವನದಲ್ಲಿ ಅನೇಕ ವಿಷಯಗಳಿವೆ, ದೊಡ್ಡದು ಚಿಕ್ಕದ್ದು, ಎಲ್ಲವನ್ನೂ ಸಾಧಿಸುವ ಕಡೆ ಹೆಚ್ಚು ಗಮನ ಹರಿಸಿ ಸಣ್ಣ ಸಣ್ಣ ಸಾಧನೆಯನ್ನೂ ಆನಂದಿಸಬೇಕು. ನಿಮ್ಮ ವೈಫಲ್ಯದ ಬಗ್ಗೆ ಹೆದರಬೇಡಿ. ವೈಫಲ್ಯ ಗೊತ್ತಿದ್ದರೆ ಮಾತ್ರ ಸಾಧನೆಯ ಸವಿಯನ್ನೂ ಅನುಭವಿಸಲು ಸಾಧ್ಯ. ನಮ್ಮಿಂದ ಎಲ ಪರಿಸ್ಥಿತಿಯನ್ನೂ ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವುದನ್ನು ನೆನಪಿಡಿ.

ಸಾಧನೆ ಮಾಡುವಾಗ ಕೆಲವೊಮ್ಮೆ ಕೆಲವು ನಮ್ಮ ಕೈಮೀರಿ ಹೋಗುತ್ತದೆ ಅದಕ್ಕೆ ತಲೆಕೆಡಿಸಿಕೊಳ್ಳದೇ ಮತ್ತೆ ಗುರಿ ಮುಟ್ಟಲು ಪ್ರಯತ್ನಿಸಿ. ಜೀವನದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಎರೆಡು ವಿಚಾರಗಳು ಇರುತ್ತದೆ. ಆದ್ದರಿಂದ, ನಿಮ್ಮ ಜೀವನದಲ್ಲಿ ಸಂಭವಿಸುವ ನಕಾರಾತ್ಮಕ ವಿಷಯಗಳ ಬಗ್ಗೆ ಹೆಚ್ಚು ಚಿಂತೆ ಮಾಡಬೇಡಿ. ಇನ್ನು ನಿಮ್ಮಲ್ಲಿ ಏನಿದೆಯೋ ಅದರ ಬಗ್ಗೆ ನೀವು ಕೃತಜ್ಞರಾಗಿರಬೇಕು. ಸಮಸ್ಯೆಗಳ ಬಗ್ಗೆ ನೀವು ಕೋಪಗೊಳ್ಳುವ ಬದಲು ಅಥವಾ ಚಿಂತಿಸುವುದರ ಬದಲು, ನಿಮಗಾಗಿರುವ ಒಳ್ಳೆಯದರ ಬಗ್ಗೆ ಖುಷಿಪಡಿ. ಇಂಥ ಕೆಲವು ತಪ್ಪುಗಳನ್ನು ಮಾಡದೇ ಇದ್ದಲ್ಲಿ ನೀವು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ.

Comments are closed.