ಎಲಾನ್ ಮಸ್ಕ್ ರವರನ್ನು ಮೀರಿಸಲು ಹೊರಟ ಮುಕೇಶ್ ಅಂಬಾನಿ, ಮತ್ತೊಂದು ದಿಟ್ಟ ಹೆಜ್ಜೆ. ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಶ್ರೀಮಂತರು ಯಾವಾಗಲೂ ವಾಸ್ತವದಲ್ಲಿ ಯೋಚಿಸುತ್ತಿರುವುದಿಲ್ಲ, ಭವಿಷ್ಯವನ್ನ ಯೋಚಿಸುತ್ತಾರೆ ಎಂಬದು ನಾಣ್ಣುಡಿ. ಈಗ ಅಂತಹದೇ ಮಾತು ಪುನರಾವರ್ತನೆಯಾಗಿದೆ. ಎಲೆಕ್ಟ್ರಿಕ್ ಕಾರುಗಳ ಮೂಲಕ ಮನೆಮಾತಾಗಿರುವ ಎಲಾನ್ ಮಸ್ಕ್ ಗೆ ಟಾಂಗ್ ಕೊಡಲು ಈಗ ಭಾರತದ ಶ್ರೀಮಂತ ಮುಖೇಶ್ ಅಂಬಾನಿ ಯೋಚಿಸುತ್ತಿದ್ದಾರಂತೆ. ಹೌದು ಈ ಜಿಯೋ ಎಂಬ ಟೆಲಿಕಾಂ ಕಂಪನಿ ಸ್ಥಾಪಿಸಿ ಭಾರತಾದ್ಯಂತ ಮನೆಮಾತಾಗಿದ್ದರು.
ಯಾವುದೇ ಹೊಸ ಉದ್ಯಮ ಸ್ಥಾಪಿಸಲು ಐದಾರು ವರ್ಷಗಳ ಕಾಲ ಹಿನ್ನಲೆ ಕೆಲಸ ಮಾಡುವ ಮುಖೇಶ್ ಅಂಬಾನಿ ಜಿಯೋ ಸಿಮ್ ತರುವ ಮೂಲಕ ಭಾರತದ ಟೆಲಿಕಾಂ ಕ್ಷೇತ್ರವನ್ನೇ ಬದಲು ಮಾಡಿದರು. ಈಗ ಸಂಪೂರ್ಣ ಜಗತ್ತೇ ಇಲೆಕ್ಟ್ರಿಕ್ ವಾಹನಗಳತ್ತ ಸಾಗುತ್ತಿದೆ. ಎಲಾನ್ ಮಸ್ಕ್ ರವರ ಕಂಪನಿಯ ಟೆಸ್ಲಾ ಕಾರುಗಳು ಸಂಪೂರ್ಣ ಜಗತ್ತನ್ನೇ ಆವರಿಸುತ್ತಿರುವ ಕಾವ ಸನ್ನಿಹಿತವಾಗಿದೆ. ಈಗ ಎಲಾನ್ ಮಸ್ಕ್ ಗೆ ಟಕ್ಕರ್ ಕೊಡಲು ಅಂಬಾನಿ ಮುಂದಾಗಿದ್ದಾರೆ.
ಹೌದು ಎಲೆಕ್ಟ್ರಿಕ್ ಕಾರುಗಳಿಗೆ ಬಳಸಲಾಗುವ ಬ್ಯಾಟರಿಗಳಾದ , ಬ್ಯಾಟರಿ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿರುವ ಸೋಡಿಯಂ ಐಯಾನ್ ಬ್ಯಾಟರಿ ತಂತ್ರಜ್ಞಾನದ ಫ್ಯಾರಡಿಯನ್ ಕಂಪನಿಯನ್ನ ಸದ್ಯ ಮುಖೇಶ್ ಅಂಬಾನಿ ಖರೀದಿಸಿದ್ದಾರೆ. ಮುಖೇಶ್ ಅಂಬಾನಿಯವರ ಕಂಪನಿಯಾಗಿರುವ ರಿಲಯನ್ಸ್ ಇಂಡಸ್ಟ್ರಿಸ್ ಅಂಗಸಂಸ್ಥೆಯಾದ ರಿಲಯನ್ಸ್ ಎನರ್ಜಿ ನ್ಯೂ ಸೋಲಾರ್ ಲಿಮಿಟೆಡ್ ಖರೀದಿಸಿದೆ. ಕಡಿಮೆ ವೆಚ್ಚ ಹಾಗೂ ಅತಿ ಹೆಚ್ಚು ಬಾಳಿಕೆ ಬರುವ ಈ ಬ್ಯಾಟರಿಗಳು ಭವಿಷ್ಯದ ದಿನಗಳಲ್ಲಿ ಅತಿ ಹೆಚ್ಚು ಮಾರಾಟವಾಗುವ ಸಾಧ್ಯತೆ ಇದೆ.
ಯಾವಾಗಲೂ ಭವಿಷ್ಯದ ತಂತ್ರಜ್ಞಾನಗಳ ಬಗ್ಗೆ ಯೋಚಿಸುವ ಮುಖೇಶ್ ಅಂಬಾನಿ, ಈಗ ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಲಿಥಿಯಂ – ಐಯಾನ್ ಮತ್ತು ಲೀಡ್ ಆಸಿಡ್ ಬ್ಯಾಟರಿ ಕಂಪನಿ ಅಂಬಾನಿ ತೆಕ್ಕೆಗೆ ಬಿದ್ದಿರುವುದರಿಂದ ಭವಿಷ್ಯದ ದಿನಗಳಲ್ಲಿ ಈ ಬ್ಯಾಟರಿಗಳು ಜಿಯೋ ರೀತಿಯಲ್ಲೇ ಸೇಲಾಗುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.