ಪ್ರಭಾಸ್ ಸಿನಿಮಾ ರಾಧೇಶ್ಯಾಮ್ ನೇರವಾಗಿ ಓಟಿಟಿ ಯಲ್ಲಿ ಬಿಡುಗಡೆ ಮಾಡಲು ಆಫರ್ ಮಾಡಿದ್ದು ಎಷ್ಟು ಗೊತ್ತೇ?? ಯಪ್ಪಾ ಒಂದು ಸಿನೆಮಾಗೆ ಇಷ್ಟೊಂದಾ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಮಹಾಮಾರಿಯ ಸಂಖ್ಯೆ ದೇಶಾದ್ಯಂತ ಮತ್ತೆ ತಾಂಡವವಾಡುತ್ತಿದೆ. ಮಹಾಮಾರಿಯ ಪರಿಣಾಮದಿಂದಾಗಿ ಈಗಾಗಲೇ ವರ್ಷದ ಮೊದಲ ಭಾಗದಲ್ಲಿ ಬಿಡುಗಡೆ ಆಗಬೇಕಾಗಿದ್ದ ಶಾಹಿದ್ ಕಪೂರ್ ನಟನೆಯ ಜರ್ಸಿ ಹಾಗೂ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ಕೂಡ ತಮ್ಮ ಬಿಡುಗಡೆ ದಿನಾಂಕವನ್ನು ಮುಂದೂಡಿದೆ. ಇನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್ ರವರ ರಾಧೇಶ್ಯಾಮ್ ಚಿತ್ರದ ಬಿಡುಗಡೆ ದಿನಾಂಕ ಕೂಡ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.
ಯಾಕೆಂದರೆ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ರಾಧೇಶ್ಯಾಮ್ ಚಿತ್ರಕ್ಕೆ ಉತ್ತರದ ಹಲವಾರು ರಾಜ್ಯಗಳು ಚಿತ್ರಮಂದಿರಗಳನ್ನು ಸಂಪೂರ್ಣವಾಗಿ ಮುಚ್ಚಿರುವುದು ತೊಡಕಾಗಿದೆ. ಈಗಾಗಲೇ 50% ಚಿತ್ರಮಂದಿರಗಳನ್ನು ಓಪನ್ ಮಾಡಿರುವ ರಾಜ್ಯಗಳು ಕೂಡ ಮಹಾಮಾರಿಯ ಕಾರಣದಿಂದಾಗಿ ಪ್ರಕರಣದ ಸಂಖ್ಯೆಗಳು ಹೆಚ್ಚಾದರೆ ಪೂರ್ಣವಾಗಿ ಚಿತ್ರಮಂದಿರಗಳನ್ನು ಮುಚ್ಚುವ ಯೋಜನೆ ಹಾಕಿಕೊಂಡಿದ್ದಾರೆ. ಹೀಗಾಗಿ ದೊಡ್ಡ ದೊಡ್ಡ ಚಿತ್ರಗಳಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಷ್ಟಗಳು ಮಹಾಮಾರಿ ಯಿಂದಾಗಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ರೊಮ್ಯಾಂಟಿಕ್ ಥ್ರಿಲ್ಲರ್ ಆಗಿರುವ ರಾಧೇಶ್ಯಾಮ್ ಚಿತ್ರದ ಕುರಿತಂತೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸುದ್ದಿಗಳು ಹರಿದಾಡುತ್ತಿವೆ.

ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲು ಸಾಧ್ಯವಾಗದೇ ಇರುವ ಕಾರಣ ಓಟಿಟಿ ಮಾಧ್ಯಮದ ದೈತ್ಯ ಸಂಸ್ಥೆ ಗಳಾಗಿರುವ ನೆಟ್ ಫ್ಲಿಕ್ಸ್ 300 ಕೋಟಿಗೆ ಹಾಗೂ ಅಮೆಜಾನ್ ಪ್ರೈಮ್ 350 ಕೋಟಿ ರೂಪಾಯಿ ಆಫರನ್ನು ರಾಧೇಶ್ಯಾಮ್ ಚಿತ್ರತಂಡಕ್ಕೆ ನೇರವಾಗಿ ತಮ್ಮ ತಮ್ಮ ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆಮಾಡಲು ನೀಡಿವೆ. ಆದರೆ ಸಿಕ್ಕಿರುವ ಮಾಹಿತಿಗಳ ಪ್ರಕಾರ ರಾಧೇಶ್ಯಾಮ್ ಚಿತ್ರ ಚಿತ್ರಮಂದಿರಗಳಲ್ಲಿ ನೋಡುವುದಕ್ಕೆ ತಯಾರಾಗುವುದರಿಂದ ಅಭಿಮಾನಿಗಳಿಗೆ ನಿರಾಸೆ ಮಾಡುವ ಯಾವ ಇರಾದೆಯಿಲ್ಲ ನೇರವಾಗಿ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂಬುದಾಗಿ ತಿಳಿಸಿದೆ. ಇದನ್ನು ಕೇಳಿ ಈಗ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.