Neer Dose Karnataka
Take a fresh look at your lifestyle.

ಕಳೆದ ವರ್ಷ ಧೀಢೀರ್ ಎಂದು ಕ್ರಿಕೇಟ್ ಗೆ ನಿವೃತ್ತಿ ಘೋಷಿಸಿದ ಟಾಪ್ – 5 ಆಟಗಾರರು ಯಾರ್ಯಾರು ಗೊತ್ತೇ?? ಇನ್ನು ಹಲವಾರು ವರ್ಷ ಇರಬಹುದಾಗಿತ್ತು.

ನಮಸ್ಕಾರ ಸ್ನೇಹಿತರೇ 2021 ಕೆಲವರಿಗೆ ಅದೃಷ್ಠದ ವರ್ಷವಾದರೇ, ಮತ್ತೆ ಕೆಲವರಿಗೆ ಬೇಸರದ ವರ್ಷ. ಆದರೇ ಕ್ರಿಕೇಟ್ ಜಗತ್ತಿನ ಪಾಲಿಗೂ ಹಲವಾರು ಸಿಹಿಕಹಿಗಳು ಸಿಕ್ಕಿವೆ. ಇನ್ನು ಈ ವರ್ಷದಲ್ಲಿ ಅನೀರಿಕ್ಷಿತ ಎಂಬಂತೆ ಕೆಲವು ಆಟಗಾರರು ಅಂತರಾಷ್ಟ್ರೀಯ ಕ್ರಿಕೇಟ್ ಗೆ ನಿವೃತ್ತಿ ಘೋಷಿಸಿದರು. ಅಂತಹ ಟಾಪ್ – 5 ಆಟಗಾರರು ಯಾರು ಎಂಬುದನ್ನ ತಿಳಿಯೋಣ ಬನ್ನಿ.

ಟಾಪ್ 5 – ಕ್ವಿಂಟನ್ ಡಿ ಕಾಕ್ : ದಕ್ಷಿಣ ಆಫ್ರಿಕಾದ 29 ವರ್ಷ ವಯಸ್ಸಿನ ವಿಕೇಟ್ ಕೀಪರ್ ಡಿ ಕಾಕ್ , ಸೆಂಚೂರಿಯನ್ ಪಂದ್ಯದ ನಂತರ ಏಕಾಏಕಿ ಟೆಸ್ಟ್ ಕ್ರಿಕೇಟ್ ನಿಂದ ನಿವೃತ್ತಿ ಘೋಷಿಸಿದ್ದರು. ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲೆಂದು ಆಫ್ರಿಕಾದ ಅನುಭವಿ ಬ್ಯಾಟ್ಸಮನ್ ಟೆಸ್ಟ್ ಕ್ರಿಕೇಟ್ ಗೆ ನಿವೃತ್ತಿ ಹೇಳಿರುವುದು ಸಂಚಲನ ಮೂಡಿಸಿತು.

ಟಾಪ್ 4 : ಉನ್ಮುಖ್ತ್ ಚಾಂದ್ – ಭಾರತ ಅಂಡರ್ 19 ವಿಶ್ವಕಪ್ ವಿಜೇತ ತಂಡದ ನಾಯಕ ಉನಮುಖ್ತ್ ಚಾಂದ್ ಆಗಸ್ಟ್ ನಲ್ಲಿ ಅಂತರಾಷ್ಟ್ರೀಯ ಕ್ರಿಕೇಟ್ ಗೆ ನಿವೃತ್ತಿ ಘೋಷಿಸಿದರು. ಅವರಿಗ ಅಮೇರಿಕಾ ತಂಡದ ಕ್ರಿಕೇಟ್ ನ ನಾಯಕರಾಗಿದ್ದಾರೆ.

ಟಾಪ್ 3 : ಅಸ್ಗರ್ ಅಫ್ಘಾನ್ – ಅಫಘಾನಿಸ್ತಾನ ಕ್ರಿಕೇಟ್ ತಂಡದ ಪ್ರತಿಭಾನ್ವಿತ ಆಟಗಾರ ಅಸ್ಗರ್ ವಿಶ್ವಕಪ್ ಟೂರ್ನಿ ಮಧ್ಯೆಯೇ ಅಂತರಾಷ್ಟ್ರೀಯ ಕ್ರಿಕೇಟ್ ಗೆ ವಿದಾಯ ಹೇಳಿದರು. ಇದು ಬಹಳ ಭಾವನಾತ್ಮಕ ಕ್ಷಣವಾಗಿತ್ತು.

ಟಾಪ್ 2.ಮಹಮದುಲ್ಲಾ : ಬಾಂಗ್ಲಾದೇಶದ ಪ್ರತಿಭಾನ್ವಿತ ಆಟಗಾರ ಮಹಮದುಲ್ಲಾ ಧೀಡೀರ್ ಎಂದು ಟೆಸ್ಟ್ ಕ್ರಿಕೇಟ್ ನಿಂದ ನಿವೃತ್ತಿ ಹೇಳಿದರು. ಇದು ಬಾಂಗ್ಲಾದೇಶದ ಕ್ರಿಕೇಟ್ ಅಭಿಮಾನಿಗಳಿಗೆ ದಿಗ್ಭ್ರಮೆ ಮೂಡಿಸಿತು.

ಟಾಪ್ 1. ಎಬಿ ಡಿ ವಿಲಿಯರ್ಸ್ : ದಕ್ಷಿಣ ಆಫ್ರಿಕಾಗಿಂತಲೂ ಕರ್ನಾಟಕದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಎಬಿ ಡಿ ವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೇಟ್ ಗೆ ವಿದಾಯ ಘೋಷಿಸಿದರು. ಎಬಿಡಿ ಇರಾ ಕೊನೆಗೂ ಮುಕ್ತಾಯವಾದಂತಾಯಿತು. ಈ ಬಗ್ಗೆ ನಿಮ್ಮ ಮುಕ್ತ ಅಭಿಫ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.