Neer Dose Karnataka
Take a fresh look at your lifestyle.

ಗರುಡ ಪುರಾಣದ ಪ್ರಕಾರ ವ್ಯಕ್ತಿಯ ಮರಣಾನಂತರ ಆತ್ಮ ಎಲ್ಲಿಗೆ ಹೋಗುತ್ತದೆ ಗೊತ್ತಾ?? ಗರುಡ ಪುರಾಣದಲ್ಲಿದೆ ಇದಕ್ಕೆ ಉತ್ತರ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಜನನ ಹಾಗೂ ಮರಣಗಳೆರೆಡು ಒಂದೇ ನಾಣ್ಯದ ಎರಡು ಮುಖಗಳು. ಮನುಷ್ಯ ಹುಟ್ಟಿದ ನಂತರ ಒಂದಲ್ಲಾ ಒಂದು ದಿನ ಈ ಲೋಕ ಬಿಟ್ಟು ಹೋಗಲೇಬೇಕು. ಆದರೇ ವ್ಯಕ್ತಿಯ ಮರಣ ನಂತರ ಆತನ ಆತ್ಮ ಎಲ್ಲಿ ಹೋಗುತ್ತದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ. ಇದಕ್ಕೆ ಗರುಡ ಪುರಾಣದಲ್ಲಿ ಸಂಪೂರ್ಣ ಉತ್ತರ ನೀಡಲಾಗಿದೆ.

ಗರುಡ ಪುರಾಣದ ಪ್ರಕಾರ ವ್ಯಕ್ತಿ ಮರಣ ಹೊಂದಿದ ನಂತರ ಕೆಲವು ಸಮಯ ಆತ್ಮ ಪ್ರಜ್ಞಾಹೀನ ಸ್ಥಿತಿಗೆ ತಲುಪುತ್ತದೆ. ನಂತರ ಎಚ್ಚರಗೊಂಡು ಹದಿಮೂರು ದಿನಗಳವರೆಗೆ ತನ್ನ ಕುಟುಂಬ, ಸಂಭಂದಿಕರು, ಅತ್ಯಾಪ್ತರ ಜೊತೆಯೇ ಮಾತನಾಡಲು ಹಪಹಪಿಸುತ್ತದೆಯಂತೆ. ಆದರೇ ಮತ್ತೇ ತನ್ನ ದೇಹವನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ದುಖಿಃಸುತ್ತದೆಯಂತೆ. ಇದರ ನಂತರ ಯಮಧೂತರು ಬಂದು ಆತ್ಮವನ್ನು ಯಮಲೋಕಕ್ಕೆ ಕರೆದೊಯ್ಯುತ್ತಾರೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ.

ವ್ಯಕ್ತಿಯ ಹದಿಮೂರು ದಿನಗಳ ಕಾರ್ಯವಾದ ನಂತರ ಮನುಷ್ಯನ ಆತ್ಮ, ಆತನ ಹೆಬ್ಬೆರೆಳಿನ ಆಕಾರಕ್ಕೆ ಬರುತ್ತದೆಯಂತೆ. ಈ ಸ್ಥಿತಿಯಲ್ಲಿ ಮನುಷ್ಯ ತಾನು ಜೀವನದಲ್ಲಿ ಮಾಡಿದ ಕರ್ಮಗಳ ಫಲಾಫಲವನ್ನ ಅನುಭವಿಸುತ್ತಾನಂತೆ. ಈ ಪ್ರಕ್ರಿಯೆ ಧೀರ್ಘವಾಗಿದ್ದು ಹನ್ನೆರೆಡೆರಿಂದ ಹದಿಮೂರು ತಿಂಗಳು ಬೇಕಾಗುತ್ತದೆಯಂತೆ. ಈ ವೇಳೆಯಲ್ಲಿ ಹಲವಾರು ಲೋಕಗಳನ್ನ ದಾಟಿ, ಯಮಲೋಕವನ್ನ ಆತ್ಮ ತಲುಪುತ್ತದೆ ಎಂದು ಹೇಳಲಾಗಿದೆ. ಇನ್ನು ಜೀವಿತಾವಧಿಯಲ್ಲಿ ಅತ್ಯುತ್ತಮ ಕಾರ್ಯಗಳನ್ನು ಮಾಡಿದವರು ಮಾತ್ರವೇ ದೇವಲೋಕವನ್ನು ಪ್ರವೇಶಿಸುವವರು. ಉಳಿದವರು ಪ್ರೇತಾತ್ಮಗಳಾಗಿ ಲೋಕಗಳನ್ನ ಸುತ್ತುತ್ತಲೇ ಇರುತ್ತಾರೆ ವಿನಃ, ಎಲ್ಲಿಯೂ ಸ್ಥಿರವಾಗಿರುವುದಿಲ್ಲ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.