ನಿಮ್ಮ ಕನಸಿನಲ್ಲಿ ಚಿನ್ನ ವಜ್ರ ಕಂಡರೆ ಅದಕ್ಕೇನು ಅರ್ಥ ಗೊತ್ತಾ?? ಸುಮ್ಮನೆ ಕಾಣಿಸುವುದಿಲ್ಲ ಚಿನ್ನ ವಜ್ರ. ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ನಾವು ಚಿನ್ನವನ್ನು ಖರೀಧಿಸಿದಂತೆಯೂ ಅಥವಾ ಚಿನ್ನವನ್ನು ತೊಟ್ಟಂತೆಯೋ ಕನಸನ್ನು ಕಾಣುತ್ತೇವೆ. ಆದರೆ ಇದು ಆಭರಣಗಳನ್ನು ಕೊಳ್ಳಬೇಕೆಂಬ ಆಸೆಯಿಂದ ಬಿದ್ದ ಕನಸು ಎಂದು ಸುಮ್ಮನಾಗುತ್ತೇವೆ. ಆದರೆ ಸ್ವಪ್ನ ಶಾಸ್ತ್ರದ ಪ್ರಕಾರ ಇದಕ್ಕೆಲ್ಲ ಬೇರೆಯದೇ ಅರ್ಥವಿದೆ. ಹೀಗೆ ಬಿದ್ದ ಕನಸು ನಿಮ್ಮ ಮುಂದಿನ ದಿನಗಳಲ್ಲಿ ನಡೆಯಬಹುದಾದ ಹಲವು ವಿಷಯಗಳನ್ನು ಹೇಳುತ್ತದೆ. ಹಾಗಾದರೆ ನಿಮ್ಮ ಕನಸ್ಸಿನ ಬಗ್ಗೆ ಏನನ್ನುತ್ತೆ ಸ್ವಪ್ನ ಶಾಸ್ತ್ರ ನೋಡೋಣ ಬನ್ನಿ.
ಕನಸಿನಲ್ಲಿ ಚಿನ್ನ ಬೆಳ್ಳಿ, ವಜ್ರದಂಥ ವಸ್ತುಗಳನ್ನು ಕಂಡರೆ ಅದು ನಿಮ್ಮ ಮುಂಡಿನ ಜೀವನದಲ್ಲಿ ಬರುವ ದೊಡ್ಡ ಖರ್ಚಿನ ಸಂಕೇತವಾಗಿರುತ್ತದೆ. ಹೌದು ನಿಮ್ಮ ಮನೆಯಲ್ಲಿ ವಿವಾಹವೋ ಅಥವಾ ಇನ್ಯಾವುದೋ ಮಂಗಳ ಕಾರ್ಯ ನಡೆಯುತ್ತದೆ, ಅದಕ್ಕೆ ನೀವು ಹಣ ಹೊಂದಿಸಬೇಕೆಂದು ಅರ್ಥ. ಹಾಗಾಗಿ ಇಂಥ ಕನಸು ಕಂಡವರು ತಮ್ಮ ಬಜೆಟ್ ಪ್ಲಾನಿಂಗ್ ಶುರುಮಾಡಬಹುದು.
ಹಾಗೆಯೇ ಕನಸಿನಲ್ಲಿ ನಿಮ್ಮ ಚಿನ್ನಾಭರಣಗಳನ್ನು ಯಾರಾದರೂ ಕದಿಯುವಂತೆ ಕಂಡರೆ ನೀವು ನಿಜಕ್ಕೂ ಜಾಗ್ರತೆಯಿಂದ ಇರಬೇಕು. ಇದು ನಿಮ್ಮ ಶ್ರತ್ರು ಅಥವಾ ಎದುರಾಳಿ ನಿಮ್ಮ ಮೇಲೆನೋ ಮಸಲತ್ತು ಮಾಡುತ್ತಿದ್ದಾರೆ ಎಂಬುದರ ಮುನ್ಸೂಚನೆಯಾಗಿದೆ. ಹಾಗೆಯೆ ನೀವು ಚಿನ್ನ ಖರೀಧಿಸುವ ಕನಸು ಬಿದ್ದಿದ್ದರೆ ಅದು ನಿಮ್ಮ ಅದೃಷ್ಟದ ಸಂಕೇತವಾಗಿದೆ. ನಿಮ್ಮ ಮುಂದಿನ ದಿನಗಳ ಬಗ್ಗೆ ಹೇಳುವ ಸೂಚನೆ ಅದಾಗಿದೆ.
ಇನ್ನು ಕನಸಿನಲ್ಲಿ ಚಿನ್ನದ ಆಭರಣವನ್ನು ಉಡುಗೊರೆ ನೀಡುವಂತೆ ಕಂಡರೆ ಅದು ಉತ್ತಮ ಚಿಹ್ನೆಯೂ ಹೌದು. ನಿಮ್ಮ ವ್ಯವಹಾರದಲ್ಲಿ, ಉದ್ಯೋಗದಲ್ಲಿ ಭಡ್ತಿ ಪಡೆಯುತ್ತೀರಿ ಎಂದರ್ಥ. ಈ ನಿಟ್ಟಿನಲ್ಲಿ ನೀವು ಹೆಚ್ಚು ಕಾರ್ಯಪ್ರವೃತ್ತವಾಗಬೇಕು ಎನ್ನುವ ಸೂಚನೆ ಅದು. ಇನ್ನು ಕನಸಿನಲ್ಲಿ ಆಭರಣಗಳನ್ನು ಧರಿಸಬೇಕೆಂಬಂತೆ ಕಂಡರೆ ಇದು ಶುಭವಲ್ಲ, ಯಾವುದಾದರೂ ಸಂಬಂಧ ಉರಿಯಬಹುದು ಅಥವಾ ಉದ್ಯೋಗದಲ್ಲಿ ಸಮಸ್ಯೆಯಾಗಬಹುದು ಎಂಬುದರ ಸೂಚನೆ ಇದು. ಹಾಗಾಗಿ ಈ ವಿಷಯದಲ್ಲಿ ಎಚ್ಚರವಹಿಸಬೇಕು.
Comments are closed.