ಬಿಗ್ ನ್ಯೂಸ್: ಮನೆಯಲ್ಲಿಯೇ ಕೂತು ಯುವರತ್ನ ನೋಡುವ ಸಮಯ ಬಂದೆ ಬಿಡ್ತು, ಯಾವ ಚಾನೆಲ್ ಯಾವ ದಿನ ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಈಗಾಗಲೇ ಎರಡು ತಿಂಗಳುಗಳು ಕಳೆದು ಹೋಗಿವೆ. ಇಂದಿಗೂ ಕೂಡ ಅವರ ಸಿನಿಮಾಗಳ ಪಾತ್ರಗಳ ಮೂಲಕ ನಮ್ಮ ಮನವನ್ನು ರಂಜಿಸುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ ನಟನೆಯ ಕೊನೆಯ ಸಿನಿಮಾ ವಾಗಿದ್ದು ಯುವರತ್ನ ಚಿತ್ರ ಎಂಬುದು ನಿಮಗೆಲ್ಲ ಗೊತ್ತೇ ಇದೆ. ಈ ಚಿತ್ರವನ್ನು ನೋಡಲು ಅವರ ಅಭಿಮಾನಿಗಳು ಕೂಡ ಸಾಕಷ್ಟು ಕಾತರರಾಗಿದ್ದರು ಆದರೆ ಮಹಾಮಾರಿ ಅಬ್ಬರದಿಂದಾಗಿ ಕೇವಲ ಎರಡು ವಾರಗಳ ಕಾಲ ಮಾತ್ರ ಚಿತ್ರಮಂದಿರಗಳಲ್ಲಿ ಈ ಚಿತ್ರ ಪ್ರದರ್ಶನ ಕಂಡಿತ್ತು.
ನಂತರ ಇದು ಪ್ರಸಾರವನ್ನು ಕಂಡಿದ್ದು ನೇರವಾಗಿ ಅಮೆಜಾನ್ ಪ್ರೈಮ್ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ. ಇವೆರಡು ಭಾಗಗಳಲ್ಲಿ ಕೂಡ ಸಿನಿಮಾವನ್ನು ಮಿಸ್ ಮಾಡಿಕೊಂಡ ಅಭಿಮಾನಿಗಳಿಗೆ ಹಾಗೂ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಯುವರತ್ನ ಚಿತ್ರ ಅತಿಶೀಘ್ರದಲ್ಲಿ ಸಿಹಿಸುದ್ದಿಯನ್ನು ನೀಡಲು ಸಿದ್ಧವಾಗಿದೆ. ಹೌದು ಗೆಳೆಯರೆ ಅತಿಶೀಘ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಯುವರತ್ನ ಚಿತ್ರ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.
ಇದೇ ಜನವರಿ 15ರಂದು ಸಂಜೆ 6.30 ಕ್ಕೆ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಯುವರತ್ನ ಚಿತ್ರವನ್ನು ನೀವು ಉದಯ ಟಿವಿಯಲ್ಲಿ ನೋಡಬಹುದಾಗಿದೆ. ಪುನೀತ್ ರಾಜಕುಮಾರ್ ಅವರನ್ನು ಕಿರುತೆರೆಯಮೇಲೆ ನೋಡಲು ಈಗಾಗಲೇ ಅಭಿಮಾನಿಗಳು ಹಾಗೂ ಕನ್ನಡ ಸಿನಿಮಾ ಅಭಿಮಾನಿಗಳು ಕಾತರರಾಗಿದ್ದರು ಚಿತ್ರದ ಪ್ರಸಾರಕ್ಕಾಗಿ ದಿನಗಣನೆ ಪ್ರಾರಂಭವಾಗಿದೆ. ಜೇಮ್ಸ್ ಚಿತ್ರದ ಬಿಡುಗಡೆ ಯಾವಾಗ ಎಂದು ಇನ್ನು ತಿಳಿದಿಲ್ಲ ಹೀಗಾಗಿ ಯುವ ರತ್ನವನ್ನು ಅವರ ಕೊನೆಯ ಸಿನಿಮಾ ಎಂಬಂತೆ ಕಿರುತೆರೆಯಮೇಲೆ ಆನಂದಿಸಿ ಎಂದು ಅಭಿಮಾನಿಗಳಲ್ಲಿ ಕೋರಿಕೊಳ್ಳುತ್ತೇವೆ. ಯುವರತ್ನ ಚಿತ್ರ ಕಂಡಿತವಾಗಿಯೂ ಅಭಿಮಾನಿಗಳಿಗೆ ಅತ್ಯಂತ ಭಾವನಾತ್ಮಕ ಸಿನಿಮಾವಾಗಿ ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ.
Comments are closed.