ವಯಸ್ಸು 38 ಆದರೂ ಕೂಡ ಯುವ ನಟಿಯ ಜೊತೆ ಪ್ರೀತಿಯಲ್ಲಿರುವ ನಟ ಸಿಂಬು, ಆ ಚೆಲುವೆ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಇಡೀ ಭಾರತೀಯ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರೇಮಸಂಬಂಧ ಕೆಲವೊಮ್ಮೆ ಮುರಿದು ಹೋದರೆ ಇನ್ನು ಕೆಲವೊಮ್ಮೆ ಹೊಸದಾಗಿ ಪ್ರಾರಂಭವಾಗುತ್ತಿವೆ. ಕೆಲವರಿಗೆ ಮದುವೆಯಾದರೆ ಕೆಲವರಿಗೆ ವಿವಾಹ ವಿಚ್ಛೇದನ ನಡೆಯುತ್ತಿದೆ. ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಹೊಸ ಲವ್ ಸ್ಟೋರಿ ಕುರಿತಂತೆ. ಅದರಲ್ಲೂ ಕೂಡ ನಾವು ಇಂದು ಮಾತನಾಡಲು ಹೊರಟಿರುವುದು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ಹಾಗೂ ನಟಿಯ ನಡುವಿನ ಲವ್ ಸ್ಟೋರಿ ಕುರಿತಂತೆ ಹೇಳಲು ಹೊರಟಿದ್ದೇವೆ.
ಹೌದು ನಾವು ಮಾತನಾಡಲು ಹೊರಟಿರುವುದು ತಮಿಳು ಚಿತ್ರರಂಗದ ಎವರ್ಗ್ರೀನ್ ಬ್ಯಾಚುಲರ್ ನಟ ಸಿಂಬು ರವರ ಕುರಿತು. ಹೌದು ನಟ ಸಿಂಬು ರವರ ಹೆಸರು ಈ ಹಿಂದೆ ಹಲವಾರು ಬಾರಿ ನಯನತಾರಾ ಹಾಗೂ ಹನ್ಸಿಕಾ ಮೋಟ್ವಾನಿ ರವರ ಜೊತೆಗೆ ಕೇಳಿಬಂತು ಆದರೆ ಯಾವುದೂ ಕೂಡ ಅಷ್ಟೊಂದು ಪಕ್ಕ ಆಗಿರಲಿಲ್ಲ. ಆದರೆ ಈಗ ನಟ ಸಿಂಬು ರವರು ಒಬ್ಬ ನಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಮಾತ್ರವಲ್ಲದೆ ಜೊತೆಯಾಗಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಹೌದು ಗೆಳೆಯರೇ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯವಾಗಿರುವ ನಿಧಿ ಅಗರ್ವಾಲ್ ರವರು ಸಿಂಬು ರವರ ಪ್ರೀತಿ ಯಾಗಿದ್ದಾರೆ. ಇಬ್ಬರು ನಡುವೆ ಪ್ರೀತಿಯನ್ನುವುದು ಈಶ್ವರನ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಪ್ರಾರಂಭವಾಗಿದೆ. ಈಗ ಇಬ್ಬರು ಕೂಡ ಒಂದೇ ಮನೆಯಲ್ಲಿ ವಾಸಿಸಿಕೊಂಡು ಲಿವ್ ಇನ್ ಸಂಬಂಧದಲ್ಲಿದ್ದು ಎರಡು ವರ್ಷಗಳ ನಂತರ ಮದುವೆಯಾಗುವ ಯೋಜನೆಯಲ್ಲಿದ್ದಾರೆ. ಈಗಾಗಲೇ ಮಾನಾಡು ಚಿತ್ರದ ಯಶಸ್ಸಿನಲ್ಲಿ ರುವ ಸಿಂಬು ರವರು ಹಾಗೂ ಹಲವಾರು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಿಧಿ ಅಗರ್ವಾಲ್ ಅವರು ಈ ಕುರಿತಂತೆ ಎಲ್ಲೂ ಕೂಡ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಈ ಕುರಿತಂತೆ ಮುಂದಿನ ದಿನಗಳಲ್ಲಿ ಕಾಯ್ದು ನೋಡಬೇಕಾಗಿದೆ.
Comments are closed.