ಎದುರಾಳಿಗಳಿಗೆ ಠಕ್ಕರ್ ಮೇಲೆ ಠಕ್ಕರ್ ಕೊಡುತ್ತಿರುವ ಜಿಯೋ, ಹೊಸ ಪ್ಲಾನ್ ಗಳನ್ನು ಮತ್ತೊಮ್ಮೆ ಬಿಡುಗಡೆ, ಎಷ್ಟೆಲ್ಲಾ ಲಾಭ ಹಾಗು ಉಳಿತಾಯ ಗೊತ್ತೇ??

Trending

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ಸಂಸ್ಥೆಗಳ ನಡುವೆ ಒಳ್ಳೆಯ ಆಫರುಗಳನ್ನು ತಮ್ಮ ಗ್ರಾಹಕರಿಗೆ ನೀಡುವ ಪೈಪೋಟಿ ಶುರುವಾಗಿದೆ ಅಂತ ಹೇಳಬಹುದಾಗಿದೆ. ಅದರಲ್ಲೂ ಭಾರತೀಯ ಟೆಲಿಕಾಂ ಸಂಸ್ಥೆಗಳಲ್ಲಿ ಅತ್ಯಂತ ಹೆಚ್ಚು ಯಶಸ್ವಿ ಹಾಗೂ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿರುವ ರಿಲಯನ್ಸ್ ನ ಜಿಯೋ ಸಂಸ್ಥೆಯ ಕುರಿತಂತೆ ಇಂದು ನಾವು ಹೇಳಲು ಹೊರಟಿದ್ದೇವೆ. ಇತ್ತೀಚಿಗಷ್ಟೇ ಜಿಯೋ ಸಂಸ್ಥೆಯ ಹೊಸ ಪ್ರಿಪೇಯ್ಡ್ ಪ್ಲಾನ್ ಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ.

ಹಾಗಾದರೆ ಆ ಪ್ಲ್ಯಾನ್ ನಲ್ಲಿ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನು ನೋಡೋಣ ಬನ್ನಿ. ಜಿಯೋ ಹೊಸ ಪ್ಲಾನ್ ಅನ್ನು ಪರಿಚಯಿಸಿದ್ದು ಇದು ದಿನಕ್ಕೆ 2.5 ಜಿಬಿ ಡಾಟಾ ಲೆಕ್ಕದಲ್ಲಿ ಒಂದು ವರ್ಷದ ವ್ಯಾಲಿಡಿಟಿ ನೀಡುತ್ತದೆ. ಇನ್ನು ಇದರ ರೀಚಾರ್ಜ್ ದರ 2999 ರೂಪಾಯಿಗಳು. ಈ ಪ್ರೀಪೇಯ್ಡ್ ಪ್ಲಾನ್ ರಿಚಾರ್ಜ್ ದರದ ಬಳಕೆದಾರರು ಜಿಯೋಸಿನಿಮಾ ಜಿಯೋ ಟಿವಿ ಜಿಯೋ ಸೆಕ್ಯೂರಿಟಿ ಜಿಯೋ ಕ್ಲೌಡ್ ಗೆ ಉಚಿತವಾಗಿ ಪ್ರವೇಶವನ್ನು ಪಡೆಯಬಹುದಾಗಿದೆ. ಇದರಲ್ಲಿ 499 ರೂಪಾಯಿ ರೀಚಾರ್ಜ್ ಗೆ ಸಿಗುವಂತಹ ವಾರ್ಷಿಕ ಡಿಸ್ನಿ ಹಾಟ್ಸ್ಟಾರ್ ಅಪ್ಲಿಕೇಶನ್ ಕೂಡ ಉಚಿತವಾಗಿ ದೊರೆಯಲಿದೆ.

ಇದೇ ರೀತಿ 3119 ರೂಪಾಯಿ ರೀಚಾರ್ಜ್ ಪ್ಲಾನ್ ಕೂಡ ಒಂದು ವರ್ಷದ ಮಟ್ಟಿಗೆ ಈ ಮೇಲೆ ಹೇಳಿರುವ ಎಲ್ಲಾ ಪ್ರಯೋಜನಗಳನ್ನು ತನ್ನ ಚಂದಾದಾರರಿಗೆ ನೀಡಲಿದೆ. ಹಾಗೂ ಅನ್ಲಿಮಿಟೆಡ್ ಕಾಲ್ ಸೇವೆಗಳು ಉಚಿತ ದಿನಕ್ಕೆ 100 ಎಸ್ಎಂಎಸ್ ಇಷ್ಟು ಮಾತ್ರವಲ್ಲದೆ ದಿನಕ್ಕೆ ಎರಡು ಜಿಬಿ ಡೇಟಾ ಜೊತೆಗೆ ಹೆಚ್ಚುವರಿ 10gb ಡೇಟಾ ಗಳನ್ನು ಕೂಡ ಪಡೆಯುತ್ತಾರೆ. ಇನ್ನೊಂದು ರಿಚಾರ್ಜ್ ಪ್ಲಾನ್ ಆಗಿರುವ 2879 ರೂಪಾಯಿ ಕೂಡ ವಾರ್ಷಿಕ ವಾಗಿ ಚಂದಾದಾರರಿಗೆ ಯೋಜನೆಗಳನ್ನು ನೀಡುತ್ತದೆ. ಆದರೆ ಇದು 2.5 ಜಿಬಿ ಡೇಟಾ ಬದಲಾಗಿ ದಿನಕ್ಕೆ 2gb ಡೇಟಾವನ್ನು ನೀಡುತ್ತದೆ ಅಷ್ಟೇ ವ್ಯತ್ಯಾಸ. ನೀವು ಕೂಡ ಒಂದು ವೇಳೆ ಜಿಯೋ ಗ್ರಾಹಕರಾಗಿದ್ದಾರೆ ಈ ಮೇಲೆ ನೀಡಿರುವ ರಿಚಾರ್ಜ್ ಪ್ಲಾನ್ ಗಳನ್ನು ನಿಮ್ಮ ವಾರ್ಷಿಕ ರಿಚಾರ್ಜ್ ಪ್ಲಾನ್ ಆಗಿ ಬಳಸಿಕೊಳ್ಳಬಹುದಾಗಿದೆ. ಇವುಗಳಲ್ಲಿ ನಿಮಗೆ ಒಳ್ಳೆಯ ಲಾಭಗಳನ್ನು ನೀಡುವ ಪ್ಲಾನ್ ಯಾವುದು ಎಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *