ಆಕೆಗೆ 48 ವರ್ಷ, ಈತನಿಗೆ 36 ಆದರೂ ಪ್ರೀತಿ ಮಾಡಿ ಒಟ್ಟಿಗೆ ಬಾಳಿದರು. ಕೋಟ್ಯಧಿಪತಿಗಳಿಗಿದ್ದರೂ ಈಗ ಬ್ರೇಕ್ ಅಪ್ ಆಗಿದ್ದು ಯಾಕೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗವೆಂದರೆ ಸಾಕಷ್ಟು ಹಂಗಾಮ ಡ್ರಾಮಾ ನಾಟಕಗಳನ್ನು ಒಳಗೊಂಡಿರುವಂತಹ ಚಿತ್ರರಂಗ ಎನ್ನುವುದು ನಿಮಗೆಲ್ಲಾ ಗೊತ್ತಿರುವ ವಿಚಾರವಾಗಿದೆ. ಇಲ್ಲಿ ಮದುವೆಗಳು ಹಾಗೂ ಬ್ರೇಕಪ್ ಗಳು ಮತ್ತು ವಿವಾಹ ವಿಚ್ಛೇದನಗಳು ಆಗುತ್ತಲೇ ಇರುತ್ತವೆ. ಅದರಲ್ಲಿ ಇತ್ತೀಚಿಗಂತೂ ನೀವು ಇಂತಹ ಹಲವಾರು ಸುದ್ದಿಗಳನ್ನು ಕೇಳಿರುತ್ತೀರಿ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಮಲೈಕ ಅರೋರ ಹಾಗೂ ಅರ್ಜುನ್ ಕಪೂರ್ ಅವರ ಕುರಿತು. ಇವರಿಬ್ಬರ ಸಂಬಂಧದ ಕುರಿತಂತೆ ಎಲ್ಲರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಟ್ರೋಲ್ ಮಾಡುತ್ತಲೇ ಇರುತ್ತಿದ್ದರು.
ಯಾಕೆಂದರೆ ಮಲೈಕ ಅರೋರ ರವರು 48 ವರ್ಷದ ವಯಸ್ಸಿನವರಾದರೆ ಅರ್ಜುನ್ ಕಪೂರ್ ರವರು ಕೇವಲ 36 ವರ್ಷದ ವಯಸ್ಸಿನವರಾಗಿದ್ದರು. ತಮಗಿಂತ ಹನ್ನೆರಡು ವರ್ಷ ವಯಸ್ಸಿನ ಹಿರಿಯ ಮಹಿಳೆಯನ್ನು ಪ್ರೇಯಸಿಯಾಗಿ ಆಯ್ಕೆ ಮಾಡಿರುವುದನ್ನು ಹಲವಾರು ಜನರು ಸೋಶಿಯಲ್ ಮೀಡಿಯಾದಲ್ಲಿ ಟೀಕಿಸಿದ್ದರು. ಇದಕ್ಕೆ ಅರ್ಜುನ್ ಕಪೂರ್ ಅವರು ಈ ಹಿಂದೆ ಇದೇ ಟ್ರೋಲ್ ಮಾಡುವ ಜನರು ನನ್ನ ಬಳಿ ಸೆಲ್ಫಿಗಾಗಿ ಬರುತ್ತಾರೆ ಅವರು ಫೇಕ್ ಜನರು ಎಂಬುದಾಗಿ ಹೇಳಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಮೂಲದಿಂದ ಬಂದಿರುವ ಸುದ್ದಿ ಪ್ರಕಾರ ಮಲೈಕ ಅರೋರ ಹಾಗೂ ಅರ್ಜುನ್ ಕಪೂರ್ ರವರು ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬುದಾಗಿ ಕೇಳಿಬರುತ್ತಿದೆ. ಕೊನೆಯ ಬಾರಿಗೆ ಇವರಿಬ್ಬರು ಹೊಸವರ್ಷದ ಮುನ್ನ ವಾಗಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದು ತಿಳಿದುಬಂದಿದ್ದು ಮಲೈಕ ಅರೋರ ಅವರು ಮಿಸ್ ಯು ಅರ್ಜುನ್ ಎಂಬುದಾಗಿ ಕ್ಯಾಪ್ಟನ್ ಹಾಕಿದ್ದರು.
ಇವರಿಬ್ಬರು ಬ್ರೇಕಪ್ ಮಾಡಿಕೊಂಡಿರುವ ಕಾರಣವನ್ನು ಎಲ್ಲೂ ಕೂಡ ಇವರಿಬ್ಬರು ಬಾಯಿ ಬಿಟ್ಟುಕೊಂಡಿಲ್ಲ ಹಾಗೂ ಇದಕ್ಕೆ ಸರಿಯಾದ ಕಾರಣವೂ ಕೂಡ ತಿಳಿದುಬಂದಿಲ್ಲ ಆದರೆ, ಮಲೈಕ ಅರೋರ ರವರ ಮನೆಯ ಪಕ್ಕದಲ್ಲೇ ಇರುವ ಅರ್ಜುನ್ ಕಪೂರ್ ಅವರ ಸಹೋದರಿ ಆಗಿರುವ ರಿಯಾ ಕಪೂರ್ ಅವರ ಮನೆಗೆ ಅರ್ಜುನ್ ಕಪೂರ್ ರವರು ಊಟಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಅರ್ಜುನ ರವರು ಮಲೈಕ ಅರೋರ ರವರ ಮನೆಯ ಕಡೆ ತಿರುಗಿ ಕೂಡ ನೋಡಿಲ್ಲ. ಇನ್ನು ಇತ್ತ ಮಲೈಕ ಅರೋರ ಅವರು ಕೂಡ ಒಂಟಿಯಾಗಿ ಇದ್ದಾರೆ ಅರ್ಜುನ್ ಕಪೂರ್ ಅವರು ಅವರ ಮನೆಗೆ ಕೂಡ ಹೋಗಿಲ್ಲ ಎಂಬುದಾಗಿ ತಿಳಿದುಬಂದಿದೆ. ಕಾರಣ ಏನೆಂಬುದು ಮುಂದಿನ ದಿನಗಳಲ್ಲಿ ತಿಳಿದುಬರಬೇಕಾಗಿದೆ. ಸಲ್ಮಾನ್ ಖಾನ್ ಅವರ ಸಹೋದರ ಆಗಿರುವ ಅರ್ಬಾಜ್ ಖಾನ್ ರವರಿಗೆ ವಿವಾಹ ವಿಚ್ಛೇದನವನ್ನು ನೀಡಿ ಮಲೈಕ ಅರೋರ ರವರು ತಮಗಿಂತ 12 ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಅವರೊಂದಿಗೆ ಲಿವ್ ಇನ್ ಸಂಬಂಧದಲ್ಲಿದ್ದರು ಈಗ ಈ ಸಂಬಂಧವು ಕೂಡ ಬ್ರೇಕ್ ಅಪ್ ನಲ್ಲಿ ಅಂತ್ಯವಾಗುವ ಕಾಲ ಸನ್ನಿಹಿತವಾಗಿದೆ.
Comments are closed.