ಸ್ಟೇಜ್ ಮೇಲೆ ಡಾನ್ಸ್ ಮಸ್ತ್ ಡಾನ್ಸ್ ಮಾಡಿದ ಕೃತಿ ಶೆಟ್ಟಿ, ಅಭಿಮಾನಿಗಳು ಮತ್ತೊಮ್ಮೆ ಫಿದಾ. ವಿಡಿಯೋ ಹೇಗಿದೆ ಗೊತ್ತೇ?? ನಾವು ತೋರಿಸ್ತೇವೆ ನೋಡಿ.

Entertainment

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಕರ್ನಾಟಕ ಮೂಲದಿಂದ ಹೋದಂತಹ ಹಲವಾರು ನಟಿಯರು ದೊಡ್ಡಮಟ್ಟದಲ್ಲಿ ಸದ್ದನ್ನು ಮಾಡಿದ್ದಾರೆ. ಅವರಲ್ಲಿ ನೀವು ಹಲವಾರು ಹೆಸರುಗಳನ್ನು ತೆಗೆದುಕೊಳ್ಳಬಹುದು. ಸೌಂದರ್ಯ ಬಿ ಸರೋಜಾದೇವಿ ಐಶ್ವರ್ಯ ರೈ ಶಿಲ್ಪ ಶೆಟ್ಟಿ ರಶ್ಮಿಕ ಮಂದಣ್ಣ ಪೂಜಾ ಹೆಗಡೆ ಹೀಗೆ ಹಲವಾರು ಹೆಸರುಗಳನ್ನು ನೀವು ಹೇಳಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಹೆಸರು ಎಂದರೆ ಅದು ನಮ್ಮ ಮಂಗಳೂರು ಮೂಲದ ಬೆಡಗಿ ಯಾಗಿರುವ ಕೃತಿ ಶೆಟ್ಟಿ. ತೆಲುಗು ಚಿತ್ರರಂಗಕ್ಕೆ ಉಪ್ಪೇನ ಚಿತ್ರದ ಮೂಲಕ ಪಾದಾರ್ಪಣೆ ಮಾಡುವ ಮೂಲಕ ಕೃತಿ ಶೆಟ್ಟಿಯವರು ಮೊದಲ ಚಿತ್ರದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತಾರೆ. ಹೀಗಾಗಲು ತೆಲುಗು ಚಿತ್ರರಂಗದ ಅತ್ಯಂತ ಬಹು ಬೇಡಿಕೆಯಲ್ಲಿರುವ ಯುವ ಉದಯೋನ್ಮುಖ ನಟಿ ಕೃತಿ ಶೆಟ್ಟಿ ಎಂದರೆ ತಪ್ಪಾಗಲಾರದು. ಒಂದಾದ ಮೇಲೊಂದರಂತೆ ಕೃತಿ ಶೆಟ್ಟಿಯವರಿಗೆ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳು
ಅವಕಾಶ ಸಿಗುತ್ತಿದೆ.

ಮುಂದಿನ ದಿನಗಳಲ್ಲಿ ಕೇವಲ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಕೂಡ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಹಾಗೂ ಬಹು ಬೇಡಿಕೆ ನಟಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಇತ್ತೀಚಿಗಷ್ಟೇ ಕೃತಿ ಶೆಟ್ಟಿಯವರ ಡ್ಯಾನ್ಸ್ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೌದು ನಾಗಚೈತನ್ಯ ಹಾಗೂ ನಾಗಾರ್ಜುನ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಬಂಗಾರ್ ರಾಜು ಚಿತ್ರದ ಮ್ಯೂಸಿಕಲ್ ನೈಟ್ಸ್ ನಲ್ಲಿ ನಾಯಕಿಯಾಗಿರುವ ಕೃತಿ ಶೆಟ್ಟಿಯವರು ಅರ್ಜಿ ಹಾಕಿರುವ ವಿಡಿಯೋ ಈಗಾಗಲೇ ದೊಡ್ಡಮಟ್ಟದಲ್ಲಿ ವೈರಲ್ ಆಗಿದ್ದು ಎಲ್ಲರೂ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದೆ.

Leave a Reply

Your email address will not be published. Required fields are marked *