Neer Dose Karnataka
Take a fresh look at your lifestyle.

ಅಣ್ಣನ 5ನೇ ಮಗುವಿಗೆ ಜನ್ಮ ನೀಡಿದ ತಂಗಿ, ಅತ್ತಿಗೆ ಕೂಡ ಖುಷಿಯಾಗಿದ್ದಾರೆ, ಗರ್ಭಿಣಿ ಅತ್ತಿಗೆ ಜೊತೆ ಫೋಟೋಶೂಟ್ ಮಾಡಿದ್ರು. ವಿಷಯ ಏನ್ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಅಥವಾ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅಣ್ಣತಂಗಿಯರ ಸಂಬಂಧವನ್ನು ನಾವು ಮೊದಲಿನಿಂದಲೂ ಕೂಡ ಪವಿತ್ರವಾದ ಸಂಬಂಧ ಎಂದು ಭಾವಿಸಿಕೊಂಡು ಬಂದಿದ್ದೇವೆ. ಇದು ಕೇವಲ ನಮ್ಮ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಬಹುತೇಕ ಕಡೆಗಳಲ್ಲಿ ಕೂಡ ಸಹೋದರ ತನ್ನ ಸಹೋದರಿಗಾಗಿ ಅಥವಾ ಸಹೋದರಿ ತನ್ನ ಸಹೋದರನಿಗಾಗಿ ಏನು ಮಾಡಲು ಬೇಕಾದರೂ ಕೂಡ ಸಿದ್ಧರಾಗಿರುತ್ತಾರೆ.

ಆದರೆ ಇಂದಿನ ವಿಚಾರದಲ್ಲಿ ನಡೆದಿರುವ ಘಟನೆಯನ್ನು ಕೇಳಿದರೆ ನೀವು ಕೂಡ ಆಶ್ಚರ್ಯ ಪಡುತ್ತೀರಿ. ಹೌದು ಅಮೇರಿಕಾದ ವಾಷಿಂಗ್ಟನ್ ನಲ್ಲಿರುವ ಒಬ್ಬ ಸಹೋದರಿ ತನ್ನ ಅಣ್ಣನಿಗಾಗಿ ಆತನ 5ನೇ ಮಗುವಿಗೆ ಜನ್ಮ ನೀಡಿದ್ದಾಳೆ. ಈ ವಿಚಿತ್ರ ಘಟನೆ ಕುರಿತಂತೆ ನಿಮಗೆ ಸವಿವರವಾಗಿ ಹೇಳುತ್ತೇವೆ ಲೇಖನಿಯನ್ನು ಕೊನೆಯವರೆಗೂ ತಪ್ಪದೇ ಓದಿ. ಆ ಸಹೋದರಿಗೆ ಕೂಡ ಈಗಾಗಲೇ ಮದುವೆಯಾಗಿದ್ದು ಮೂರು ಮಕ್ಕಳು ಇದ್ದವು. ಇತ್ತ ಆಕೆಯ ಸಹೋದರನಿಗೆ ಕೂಡ ಮದುವೆಯಾಗಿದ್ದು ನಾಲ್ಕು ಮಕ್ಕಳು ಈಗಾಗಲೇ ಇದ್ದು.

ಆದರೆ ಆ ಸಹೋದರನ ಪ್ರಕಾರ ಅವನಿಗೆ ಐದು ಮಕ್ಕಳು ಆದರೆ ಆತನ ಫ್ಯಾಮಿಲಿ ಪರ್ಫೆಕ್ಟ್ ಆಗಿರುತ್ತದೆ ಎಂಬ ಭಾವನೆ ಇತ್ತು. ಇದಕ್ಕಾಗಿ ಆತ ಹಾಗೂ ಆತನ ಪತ್ನಿ ಇಬ್ಬರು ಕೂಡ ಪ್ರಯತ್ನ ಪಡುತ್ತಾರೆ ಆದರೆ ಅದು ವಿಫಲವಾಗುತ್ತದೆ. ಈ ಸಂದರ್ಭದಲ್ಲಿ ಆತನ ಸಹೋದರಿ ಮುಂದೆ ಬಂದು ಅಣ್ಣನ ಐದನೇ ಮಗುವಿಗೆ ನಾನು ತಾಯಿ ಆಗುತ್ತೇನೆಂಬ ಪ್ಲಾನಿಂಗ್ ಮಾಡಲು ಪ್ರಾರಂಭಿಸುತ್ತಾಳೆ. ಹೌದು ಏಕೆ ಅಣ್ಣ ಹಾಗೂ ಅತ್ತಿಗೆಯ ಬಾಡಿಗೆ ತಾಯಿಯಾಗಿ ಮಗುವನ್ನು ನೀಡುತ್ತಾಳೆ. ಇದರಲ್ಲಿ ಅಣ್ಣ ಹಾಗೂ ಅತ್ತಿಗೆಯ ಅಂಡಾಣುವನ್ನು ಪಡೆದು ತಾನು ಆ ಮಗುವಿಗೆ ಗರ್ಭದಲ್ಲಿ ಜನನವನ್ನು ನೀಡುತ್ತಾಳೆ.

ಹಲವಾರು ಸಂದರ್ಭಗಳಲ್ಲಿ ಈ ತರಹದ ಪರಿಸ್ಥಿತಿಯಲ್ಲಿ ಗೊತ್ತಿಲ್ಲದ ಮಹಿಳೆ ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ ಇಲ್ಲಿ ಅಣ್ಣನಿಗಾಗಿ ಸ್ವಂತ ತಂಗಿ ಮಗುವನ್ನು ಬಾಡಿಗೆ ತಾಯಿಯಾಗಿ ಹೆತ್ತಿದ್ದಾಳೆ ಎಂದು ಹೇಳಬಹುದಾಗಿದೆ. ಸಹೋದರನ ಹೆಸರು ಇವಾನ್ ಶೆಲಿ ಹಾಗೂ ಆತನಿಗೆ 35 ವರ್ಷ. ಆತನ ಪತ್ನಿ ಕೆಲ್ಸೆಯಾ ಗೆ 33 ವರ್ಷ. ಅವಳಿಗೆ 5ನೇ ಮಗುವನ್ನು ಹೆರಲು ಸಾಕಷ್ಟು ಮೆಡಿಕಲ್ ಸಮಸ್ಯೆಗಳಿಂದ ಕಾರಣದಿಂದಾಗಿ ಆಕೆಯ 5ನೇ ಮಗುವನ್ನು ಪಡೆಯುವ ಕನಸಿಗೆ ಸಾಕಾರವಾಗಿ ನಿಂತಿದ್ದು ಆತನ ಸಹೋದರಿ ಆದಂತಹ 27ವರ್ಷದ ಹಿಲ್ದೆ ಪೆರಿಂಗರ್.

ತಂಗಿ ಗರ್ಭಿಣಿಯಾದ ಸಂದರ್ಭದಲ್ಲಿ ಏನೆಲ್ಲ ಖರ್ಚು ಉಂಟಾಗಿತ್ತೋ ಅದೆಲ್ಲವನ್ನು ಕೂಡ ಅಣ್ಣನೇ ಭರಿಸಾದ್ದ. ಇಬ್ಬರು ದಂಪತಿಗಳು ಕೂಡ 5ನೇ ಮಗುವನ್ನು ಪಡೆಯಲು ಹಲವಾರು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದರು ಆದರೆ ಸ್ವಾಭಾವಿಕ ರೀತಿಯಲ್ಲಿ ಮಗುವನ್ನು ಪಡೆಯಲು ಸಾಧ್ಯವೇ ಇರಲಿಲ್ಲ. ಹೀಗಾಗಿ ತಮ್ಮ ತಂಗಿಯ ಮೂಲಕ ಮೆಡಿಕಲ್ ಸೈನ್ಸ್ ಮಾರ್ಗದಲ್ಲಿ ಮುಂದೆ ನಡೆದು 5ನೇ ಮಗುವನ್ನು ಪಡೆದಿದ್ದಾರೆ. 5ನೇ ಮಗು ಜನ್ಮ ತಾಳು ಬಿದ್ದಂತೆ ಮನೆಯವರ ಮುಖದಲ್ಲಿ ಸಂತೋಷ ಮನೆ ಮಾಡಿರುವುದಂತೂ ಸುಳ್ಳಲ್ಲ. ಇನ್ನು ಈ ಕಥೆ ನೀವು ಕೇಳಿದ್ರಲ್ಲ ಅಣ್ಣನಿಗಾಗಿ ಬಾಡಿಗೆ ತಾಯಿ ಆದಂತಹ ತಂಗಿಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನು. ಅಣ್ಣನ ಮಗುವಿಗೆ ತಾಯಿಯಾದ ತಂಗಿ ಇದು ಸರಿಯಾ ತಪ್ಪಾ. ಈ ವಿಚಾರದ ಕುರಿತಂತೆ ತಪ್ಪದೇ ನಿಮ್ಮ ಒಪಿನಿಯನ್ ಅನ್ನು ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.

Comments are closed.