ಇದ್ದಕ್ಕಿದ್ದ ಹಾಗೆ ಗರಂ ಆದ ಜೂನಿಯರ್ ಸಮಂತಾ, ನೆಟ್ಟಿಗರಿಗೆ ಒಮ್ಮೆಲೇ ಚಳಿ ಬಿಡಿಸಿದ್ದು ಹೇಗೆ ಗೊತ್ತೇ?? ಅಷ್ಟಕ್ಕೂ ನಡೆದ್ದದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಟಾಲಿವುಡ್ ಈಗ ಅತಿ ಹೆಚ್ಚು ಸುದ್ದಿಯಲ್ಲಿರುವ ಇಂಡಸ್ಟ್ರಿ. ಇಲ್ಲಿ ರಾಜಮೌಳಿಯವರ ಹೊಸ ಸಿನಿಮಾ ಬಿಡುಗಡೆಯಾಗುತ್ತಿರುವ ಕಾರಣ ಹೆಚ್ಚು ಚರ್ಚೆಯಾಗುತ್ತಿದೆ. ಇದರ ಜೊತೆ ಸಮಂತಾ ಹೆಸರು ಸಹ ಆಗಾಗ ಸದ್ದು ಮಾಡುತ್ತಿರುತ್ತದೆ. ಆದರೇ ಈಗ ಸದ್ದು ಮಾಡುತ್ತಿರುವ ಹೆಸರು ಜೂನಿಯರ್ ಸಮಂತಾ. ಹೌದು ಟಾಲಿವುಡ್ ಇಂಡಸ್ಟ್ರಿಯಲ್ಲಿ ಜೂನಿಯರ್ ಸಮಂತಾ ಎಂದು ಬಿರುದು ಗಳಿಸಿರುವ ಈ ನಟಿಯ ಹೆಸರು ಆಶು ರೆಡ್ಡಿ.
ಆಗಾಗ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಈ ಯುವ ನಟಿ , ಆಗಾಗ ಫೋಟೋಶೂಟ್ ಮಾಡಿಸಿಕೊಂಡು, ಆ ಫೋಟೋಗಳನ್ನ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪ್ರಕಟಿಸುತ್ತಿರುತ್ತಾರೆ. ಅವರು ಇತ್ತಿಚೆಗಷ್ಟೇ ಚಲ್ ರಂಗ ಮೋಹನ್ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇವರು ಬಿಗ್ ಬಾಸ್ ಸೀಸನ್ ನ ಸ್ಪರ್ಧಿಯಾಗಿಯೂ ಗಮನ ಸೆಳೆದಿದ್ದರು. ಆದರೇ ಇವರು ಪೋಸ್ಟ್ ಮಾಡುತ್ತಿದ್ದ ಫೋಟೋಗಳಿಗೆ ನೆಟ್ಟಿಗರು ಕೆಲವು ಕೀಳಾದ ಕಮೆಂಟುಗಳನ್ನ ಮಾಡುತ್ತಿದ್ದರು. ಅವು ಸಹಜವಾಗಿಯೇ ನಟಿ ಜೂನಿಯರ್ ಸಮಂತಾ ಅಲಿಯಾಸ್ ಅಶು ರೆಡ್ಡಿಗೆ ಬೇಸರ ತರಿಸಿತ್ತು. ಆ ಕಾರಣಕ್ಕಾಗಿಯೇ ಈಗ ಅವರು ನೇರವಾಗಿ ಅಭಿಮಾನಿಗಳಿಗೆ ಚಳಿ ಬಿಡಿಸಿದ್ದಾರೆ.
ಹೊಸ ಸಿನಿಮಾಗಾಗಿ ಸಖತ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿ, ಆ ಫೋಟೋಗಳನ್ನ ಪೋಸ್ಟ್ ಮಾಡುವ ಸಂದರ್ಭದಲ್ಲಿ ಕೀಟಲೆ ಮಾಡುವ ನೆಟ್ಟಿಗರಿಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ. ಹಾಟ್ ನೆಸ್ ಇರುವುದು ನನ್ನ ತೊಡೆಯಲ್ಲಲ್ಲ ಬದಲು ನಿಮ್ಮ ದೃಷ್ಠಿಗಳಲ್ಲಿ ಎಂದು ಹೇಳಿದ್ದಾರೆ. ಹೆಣ್ಣನ್ನ ಯಾವಾಗಲೂ ತಿನ್ನುವ ದೃಷ್ಠಿಯಿಂದ ನೋಡಬೇಡಿ. ಬದಲಿಗೆ ಆಕೆಯ ಸೌಂದರ್ಯವನ್ನ ಸವಿಯಿರಿ ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಜೂನಿಯರ್ ಸಮಂತಾ ಅಲಿಯಾಸ್ ಅಶು ರೆಡ್ಡಿ ಹವಾ ಟಾಲಿವುಡ್ ನಲ್ಲಿ ಜೋರಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.