ಮದುವೆಯಾದ ಮೇಲೆ ಹೊಸ ವರಸೆ ಆರಂಭಿಸಿದ ಕತ್ರಿನಾ, ಗಂಡನ ಮನೆಯಲ್ಲಿ ಕತ್ರಿನಾ ಏನೆಲ್ಲಾ ಮಾಡುತ್ತಿದ್ದಾರೆ ಗೊತ್ತೇ?? ಸೂಪರ್ ಎಂದ ನೆಟ್ಟಿಗರು.

Entertainment

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಸುದ್ದಿ ಆಗಿರುವಂತಹ ವಿಷಯವೆಂದರೆ ಅದು ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ಸೀಕ್ರೆಟ್ ಮದುವೆ ಎಂದು ಹೇಳಬಹುದಾಗಿದೆ. ಇವರಿಬ್ಬರ ಮದುವೆ ಆಗುವ ತನಕವೂ ಕೂಡ ಇವರಿಬ್ಬರು ಮದುವೆಯಾಗುತ್ತಿದ್ದಾರೆ ಎಂಬುದಾಗಿ ಯಾರಿಗೂ ತಿಳಿದಿರಲಿಲ್ಲ. ಈಗಾಗಲೇ ಹಲವಾರು ಚಿತ್ರಗಳು ಕೈಯಲ್ಲಿದ್ದರೂ ಬಹುಬೇಡಿಕೆಯ ನಾಯಕಿಯಾಗಿ ಬಾಲಿವುಡ್ ಚಿತ್ರರಂಗದಲ್ಲಿ ಮಿಂಚುತ್ತಿದ್ದರು ಕೂಡ ವಿಕಿ ಕೌಶಲ್ ಅವರನ್ನು ಮದುವೆಯಾಗಿ ಕತ್ರಿನಾ ಕೈಫ್ ರವರು ಎಲ್ಲರಿಗೂ ಆಶ್ಚರ್ಯವನ್ನು ಮೂಡಿಸಿದ್ದರು.

ನಿಮಗೆಲ್ಲ ತಿಳಿದಿರುವಂತೆ ಕತ್ರಿನಾ ಕೈಫ್ ಅವರು ಮೂಲತಹ ಲಂಡನ್ ನವರು. ಈಗ ಮದುವೆಯಾದ ನಂತರ ವಿಕ್ಕಿ ಕೌಶಲ್ ರವರ ಮೂಲವಾಗಿರುವ ಪಂಜಾಬಿ ಶೈಲಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಪಂಜಾಬ್ ಶೈಲಿಯಂತೆ ಮಾತನಾಡಲು ಕೂಡ ಈಗಾಗಲೇ ಕಲಿಯುತ್ತಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಈ ಹಿಂದೆ ಮದುವೆ ಆದ ಸಂದರ್ಭದಲ್ಲಿ ತಮ್ಮ ಮದುವೆ ವಿಡಿಯೋವನ್ನು 100 ಕೋಟಿ ರೂಪಾಯಿಗೆ ಪ್ರಖ್ಯಾತ ಓಟಿಟಿ ಸಂಸ್ಥೆಗೂ ಕೂಡ ಮಾರಿದ್ದಾರೆ ಎಂಬುದಾಗಿ ಕೂಡ ಕೇಳಿಬಂದಿತ್ತು. ಆದರೆ ಈಗ ಕೇಳಿಬರುತ್ತಿರುವ ಸುದ್ದಿ ಬೇರೆನೆ.

ಅದೇನೆಂದರೆ ಮದುವೆ ಆದನಂತರ ಕತ್ರಿನಾ ಕೈಫ್ ಅವರು ತಮ್ಮ ಪತಿ ಆಗಿರುವ ವಿಕ್ಕಿ ಕೌಶಲ್ ರವರ ಜೊತೆಗೆ ಮೊದಲ ಬಾರಿಗೆ ಸಂಕ್ರಾಂತಿಯನ್ನು ಆಚರಿಸುತ್ತಿದ್ದಾರೆ. ಪಂಜಾಬ್ ಕಡೆಗಳಲ್ಲಿ ಈ ಹಬ್ಬವನ್ನು ಲೋಹ್ರಿ ಎಂಬುದಾಗಿ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಪಂಜಾಬ್ ಮೂಲದ ತಿಂಡಿ-ತಿನಿಸುಗಳನ್ನು ಕೂಡ ಅಡುಗೆ ಮಾಡಲು ವಿಕಿ ಕೌಶಲ್ ರವರ ತಾಯಿಯಾಗಿರುವ ವೀಣಾ ಕೌಶಲ್ ರವರ ಜೊತೆಗೆ ಕಲಿಯುತ್ತಿದ್ದಾರೆ ನಮ್ಮ ಕತ್ರಿನಾ ಕೈಫ್. ಇದು ಈಗಾಗಲೇ ದೊಡ್ಡಮಟ್ಟದಲ್ಲಿ ಸುದ್ದಿ ಯನ್ನು ಮಾಡುತ್ತಿದೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ತಮ್ಮ ಗಂಡನ ಜೊತೆಗೆ ವಿಶೇಷವಾದ ಫೋಟೋವನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *