ನೀವು ಬೇರೆ ಜಾತಿಯವರನ್ನು ಮದುವೆಯಾಗಬೇಕು ಎಂದುಕೊಂಡಿದ್ದೀರಾ? ಅಥವಾ ಆಗಿದ್ದೀರಾ?? ಸರ್ಕಾರದಿಂದ ಮತ್ತೊಮ್ಮೆ ಹಣ ಸಹಾಯ.

Trending

ನಮಸ್ಕಾರ ಸ್ನೇಹಿತರೇ ನಮ್ಮ ದೇಶದಲ್ಲಿ ಲವ್ ಮ್ಯಾರೇಜ್ ಆಗುವುದಕ್ಕೇ ಇನ್ನೂ ಹಲವು ಕುಟುಂಬಗಳು ಸಮ್ಮತಿ ಸೂಚಿಸುತ್ತಿಲ್ಲ, ಅದರಲ್ಲೂ ಅಂತರ್ಜಾತಿ ವಿವಾಹ ಎಮ್ದರೆ ಮುಗಿದೇ ಹೋಯಿತು. ಅದೆಷ್ಟೋ ಕುಟುಂಬಗಳು ಈ ಬಗ್ಗೆ ಜಗಳಾಡಿಕೊಂಡು, ಮಕ್ಕಳ ಭವಿಷ್ಯವನ್ನೂ ನೋಡದೇ ಅವರ ಪ್ರೀತಿಯನ್ನು ಕೊನೆಗೊಳಿಸಿಬಿಡುತ್ತಾರೆ. ಆದರೆ ವಯಸ್ಸಿಗೆ ಬಂದ ಗಂಡು ಹೆಣ್ಣು ಅವರ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಹೀಗಾಗಿ ಇಂಥ ಜೋಡಿಗೆ ಬೆಂಬಲಕ್ಕೆ ನಿಲ್ಲುವುದು ಸರ್ಕಾರ!

ಹೌದು ಅಂತರ್ಜಾತಿ ವಿವಾಹವಾದವರಿಗೆ ಬೆಂಬಲ ನೀಡುತ್ತಿರುವ ಸರ್ಕಾರ ಅಂಥವರಿಗೆ ಧನ ಸಹಾಯವನ್ನೂ ಕೂಡ ನೀಡುತ್ತಿದೆ. ಡಾ.ಅಂಬೇಡ್ಕರ್ ಫೌಂಡೇಶನ್ ಯೋಜನೆಯ ಅಡಿಯಲ್ಲಿ ಅಂತರ್ಜಾತಿ ವಿವಾಹಕ್ಕೆ ಮನ್ನಣೆ ನೀಡಿ ಧನ ಸಹಾಯ ಮಾಡಲಾಗುತ್ತದೆ. ಈ ಯೋಜನೆಯ ಪ್ರಕಾರ ಹೀಗೆ ಮದುವೆಯಾದವರಿಗೆ 2 ಲಕ್ಷದ 50 ಸಾವಿರ ರೂಪಾಯಿಗಳನ್ನು ನೀಡಿ ಅವರ ಆರ್ಥಿಕ ಭದ್ರತೆಗೆ ಸಹಾಯ ಮಾಡಲಾಗುತ್ತದೆ. ಈ ಯೋಜನೆಯ ಪ್ರಯೋಜನವನ್ನು ಕೇವಲ ಅಂತರ್ಜಾತಿ ವಿವಾಹ ಆಗುವವರು ಮಾತ್ರ ಪಡೆದುಕೊಳ್ಳಬಹುದು.

ವಿವಾಹವಾದ ಒಬ್ಬರು ದಲಿತ ಸಮುದಾಯದವರಾಗಿರಬೇಕು ಮತ್ತು ಇನ್ನೊಬ್ಬರು ದಲಿತ ಸಮುದಾಯದ ಹೊರಗಿನವರಾಗಿರಬೇಕು. ಅಂತರ್ಜಾತಿ ವಿವಾಹವನ್ನು ಹಿಂದೂ ವಿವಾಹ ಕಾಯಿದೆ 1995 ರ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಇನ್ನು ಈ ಯೋಜನೆಯ ಲಾಭವು ಮೊದಲ ಬಾರಿಗೆ ಮದುವೆಯಾಗುವ ನವವಿವಾಹಿತ ದಂಪತಿಗೆ ಮಾತ್ರ ಲಭ್ಯವಿದೆ. ಎರಡನೇ ಅಥವಾ ಅದಕ್ಕಿಂತ ಹೆಚ್ಚು ಬಾರಿ ಮದುವೆಯಾಗುವವರಿಗೆ ಸರ್ಕಾರದಿಂದ ಯಾವುದೇ ರೀತಿಯ ಧನ ಸಹಾಯ ಸಿಗುವುದಿಲ್ಲ. ಅಂತರ್ಜಾತಿ ವಿವಾಹವಾದ ಬಳಿಕ ಡಾ. ಅಂಬೇಡ್ಕರ್ ಪ್ರತಿಷ್ಠಾನಕ್ಕೆ ಅರ್ಜಿ ಸಲ್ಲಿಸಬೇಕು. ಮದುವೆಯಾದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಿದರೆ ಮಾತ್ರ ಈ ಆರ್ಥಿಕ ಸಹಾಯ ಸಿಗುತ್ತದೆ.

Leave a Reply

Your email address will not be published. Required fields are marked *