ಪುಷ್ಪ ಸಿನಿಮಾ ಬಾರಿ ಯಶಸ್ಸು ಪಡೆದ ನಂತರ ಇದೇ ಮೊದಲ ಬಾರಿಗೆ ಪುಷ್ಪ 2 ಸಿನಿಮಾದ ಬಗ್ಗೆ ಮಾತನಾಡಿದ ಚೆಲುವೆ ರಶ್ಮಿಕಾ. ಹೇಳಿದ್ದೇನು ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಯಾವುದೇ ಭಾರತದ ಪ್ರಮುಖ ಚಿತ್ರರಂಗದಲ್ಲಿ ಕೇಳಿದರು ಕೂಡ ಕೇಳಿಬರುತ್ತಿರುವ ಒಂದೇ ಒಂದು ಸಿನಿಮಾದ ಹೆಸರೆಂದರೆ ಅದು ಪುಷ್ಪ. ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ರವರು ನಾಯಕನಾಗಿ ಕಾಣಿಸಿಕೊಂಡಿದ್ದು ಈಗಾಗಲೇ ವಿಶೇಷವಾಗಿ ಹಿಂದಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಬಿಸಿನೆಸ್ ಮಾಡಿದೆ. ಚಿತ್ರದಲ್ಲಿ ಕನ್ನಡದ ಪ್ರತಿಭೆಗಳು ಆಗಿರುವ ರಶ್ಮಿಕಾ ಮಂದಣ್ಣ ಹಾಗೂ ಡಾಲಿ ಧನಂಜಯ್ ಕೂಡ ನಟಿಸಿದ್ದರು. ರಶ್ಮಿಕ ಮಂದಣ್ಣ ಚಿತ್ರದ ನಾಯಕಿ ಶ್ರೀವಲ್ಲಿ ಪಾತ್ರದಲ್ಲಿ ನಟಿಸಿದರೆ ಈ ಕಡೆ ಡಾಲಿ ಧನಂಜಯ್ ಜಾಲಿ ರೆಡ್ಡಿ ಅನ್ನುವ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪುಷ್ಪ ಚಿತ್ರದ ಯಶಸ್ಸು ಕೇವಲ ಅಲ್ಲು ಅರ್ಜುನ್ ರವರ ಜನಪ್ರಿಯತೆಯನ್ನು ಮಾತ್ರವಲ್ಲದೆ ನಾಯಕಿಯಾಗಿರುವ ರಶ್ಮಿಕ ಮಂದಣ್ಣ ನವರ ಜನಪ್ರಿಯತೆಯನ್ನು ಕೂಡ ಬಹುಭಾಷೆಗಳಲ್ಲಿ ವಿಸ್ತರಿಸಿದೆ. ಇತ್ತೀಚಿಗಷ್ಟೆ ರಶ್ಮಿಕಾ ಮಂದಣ್ಣ ನವರು ಪುಷ್ಪಾ ಚಿತ್ರದ ಯಶಸ್ಸಿಗೆ ಕಾರಣರಾದ ಅಂತಹ ಎಲ್ಲಾ ಸಿನಿಮಾ ಪ್ರೇಕ್ಷಕರಿಗೆ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಧನ್ಯವಾದಗಳು ತಿಳಿಸಿದ್ದಾರೆ.

ಈ ಪ್ರೋತ್ಸಾಹದಿಂದಾಗಿ ಇನ್ನಷ್ಟು ಪರಿಶ್ರಮಪಟ್ಟು ಕೆಲಸ ಮಾಡುವುದಕ್ಕೆ ನಮಗೆ ಸ್ಫೂರ್ತಿ ಆಗಿದೆ ಎಂಬುದಾಗಿ ಕೂಡ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪುಷ್ಪ 2ರ ಕುರಿತಂತೆ ಕೂಡ ರಶ್ಮಿಕ ಮಂದಣ್ಣ ನವರು ಮಾತನಾಡಿದ್ದಾರೆ. ಹೌದು ಗೆಳೆಯರೇ ಪುಷ್ಪ 2ರ ಕುರಿತಂತೆ ಮಾತನಾಡಿರುವ ರಶ್ಮಿಕ ಮಂದಣ್ಣ ನವರು ಈ ಚಿತ್ರ ಖಂಡಿತವಾಗಿಯೂ ಪುಷ್ಪ ಕ್ಕಿಂತ ದೊಡ್ಡದು ಹಾಗೂ ಉತ್ತಮವಾಗಿರಲಿದೆ ಎಂಬುದಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಪುಷ್ಪ ಚಿತ್ರ ಈಗಾಗಲೇ ಜಾಗತಿಕವಾಗಿ 300 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ. ಪುಷ್ಪ ಚಿತ್ರದ ಮುಂದುವರಿದ ಭಾಗ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿಗಳು ದೊಡ್ಡಮಟ್ಟದಲ್ಲಿ ಹರಿದಾಡುತ್ತಿದೆ

Leave a Reply

Your email address will not be published. Required fields are marked *