ಕೇವಲ ರೂ.99 ಗಳಲ್ಲಿ ನಿಮ್ಮ ಮನೆ ಕಣ್ಗಾವಲು ಮಾಡಲಿದೆ ಏರ್ಟೆಲ್ ಹೇಗೆ ಗೊತ್ತೇ??ನಾವು ತಿಳಿಸುತ್ತೇವೆ ನೋಡಿ.
ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ತನ್ನ ಅತ್ಯುತ್ತಮ ಸೇವೆಗಾಗಿ ಅತೀಹೆಚ್ಚು ಗ್ರಾಹಕರನ್ನು ಹೊಂದಿರುವ ಟೆಲಿಕಾಂ ಕಂಪನಿ ಏರ್ಟೆಲ್. ಇದೀಗ ಇಮ್ಮ ಮೊಬೈಲ್ ನಲ್ಲಿ ಮಾತ್ರವಲ್ಲ ಮನೆಯ ರಕ್ಷಣೆಗೂ ಸಜ್ಜಾಗಿದೆ ಏರ್ಟೆಲ್. ಎರ್ಟೆಲ್ ಕಂಪನಿ ಹೊಸ ಉಪ-ವ್ಯವಹಾರಕ್ಕೂ ಕಾಲಿಡುತ್ತಿದೆ. ಮನೆಯ ಕಣ್ಗಾವಲು ಸೇವೆಯನ್ನು ಒದಗಿಸಲಿದೆ. ಏರ್ಟೆಲ್ ಈಗಾಗಲೇ ದೆಹಲಿ-ಎನ್‌ಸಿಆರ್‌ನಲ್ಲಿ ಎಕ್ಸ್-ಸೇಫ್ ಬ್ರಾಂಡ್‌ನ ಅಡಿಯಲ್ಲಿ ಮನೆಗಳಿಗಾಗಿ ಹೊಸ ಕಣ್ಗಾವಲು ಸೇವೆಯಯನ್ನು ಆರಂಭಿಸಿ ಆರಂಭಿಕ ಪರೀಕ್ಷೆಯು ಯಶಸ್ಸನ್ನು ಕಂಡಿದೆ.
ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಪೈಲೆಟ್ ರೂಪದಲ್ಲಿ ಈ ಸೇವೆಯನ್ನು ಒದಗಿಸಲಾಗುತ್ತಿದೆ. ಇನ್ನು ಇದರ ದರ ತಿಂಗಳಿಗೆ 99 ರೂಪಾಯಿಗಳು ಮಾತ್ರ. 999 ರೂಪಾಯಿಗಳನ್ನು ಪಾವತಿಸಿ ವಾರ್ಷಿಕ ಚಂದಾದಾರರೂ ಆಗಬಹುದು. ಇನ್ನು ಏರ್ಟೆಲ್ ನಲ್ಲಿ ಬಳಸಲಾಗುವ ಸರ್ವೆಲೆನ್ಸ್ ಕ್ಯಾಮರಾಗಳು ಹೆಚ್ ಡಿ ಗುಣಮಟ್ಟವನ್ನು ಹೊಂದಿದ್ದು ಅದರಲ್ಲಿ, ಪ್ರೈವೆಸ ಶಟರ್, X-ಸೇಫ್ ಸೊಲ್ಯೂಷನ್ಸ್ H.265 ಕಂಪ್ರೆಷನ್, IP67 ರೇಟಿಂಗ್, 360-ಡಿಗ್ರಿ ವೀಕ್ಷಣೆ, ಕಲರ್ ನೈಟ್ ವಿಶನ್, ಮತ್ತು ಹ್ಯೂಮನ್ ಡಿಟೆಕ್ಟನ್ ಮೊದಲಾದ ಅದ್ಭುತ ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಇನ್ನು ಒಳಾಂಗಣ ಮತ್ತು ಹೊರಾಂಗಣ ಎರಡೂ ರೀತಿಯ ಕ್ಯಾಮರಾಗಳನ್ನು ಅಭಿವೃದ್ಧಿಪಡಿಸಲಾಗಿದೆ. ನಿಮ್ಮ ಬಳಿ ಸ್ಮಾರ್ಟ್ ಫೋನ್ ಒಂದಿದ್ದರೆ ಸಾಕು, ಯಾವ ಕ್ಯಾಮರಾ ಕಣ್ಗಾವಲಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೀವು ಎಲ್ಲಿ ಬೇಕಾದರೂ ಕುಳಿತು ನೋಡಬಹುದು. ಇವುಗಳಷ್ಟೇ ಅಲ್ಲದೇ ಕ್ಲೌಡ್ ಸ್ಟೋರೇಜ್ ನಲ್ಲಿ ಫೂಟೆಜ್ ಗಳನ್ನು ಸಂಗ್ರಹಿಸಲಾಗುತ್ತದೆ. ಹಾಗಾಗಿ ಫೂಟೇಜ್ ಸಂಗ್ರಹಿಸುವ ಸ್ಥಳಾವಕಾಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಇನ್ನು ಗ್ರಾಹಕರು ಕ್ಯಾಮರಾಕ್ಕೆ ಒಂದು ಬಾರಿ ವೆಚ್ಚ ಭರಿಸಿದರೆ ಸಾಕು, ನಂತರ ವಾರ್ಷಿಕ ಚಂದಾದಾರಿಕೆಯಲ್ಲಿ ಸ್ಟೋರೇಜ್ ಸೌಲಭ್ಯ ಒದಗಿಸಲಾಗುತ್ತದೆ. ಸ್ಮಾರ್ಟ್ ಹೋಮ್ ಗ್ಯಾಜೆಟ್ ಗಳು ಇತ್ತೀಚಿಗೆ ಹೆಚ್ಚು ಫೇಮಸ್ ಆಗುತ್ತಿರುವ ಹಿನ್ನೆಲೆಯಲ್ಲಿ ಏರ್ಟೆಲ್ ನ ಈ ನೂತನ ಪ್ರಯತ್ನಕ್ಕೆ ಗ್ರಾಹಕರ ಸಹಮತ ಸಿಗುವುದರಲ್ಲಿ ನೋ ಡೌಟ್.
Comments are closed.