Neer Dose Karnataka
Take a fresh look at your lifestyle.

ಭಾರತ ಹಾಗೂ ಸೌತ್ ಆಫ್ರಿಕಾ ಟೆಸ್ಟ್ ಸರಣಿ ಮುಗೀತು: ಏಕದಿನ ಸರಣಿ ಯಾವಾಗ ಆರಂಭ?? ಎಷ್ಟು ಗಂಟೆಗೆ?? ಉಳಿದ ಎಲ್ಲಾ ಮಾಹಿತಿ.

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೇಟ್ ತಂಡ ಬಹು ದೊಡ್ಡ ನೀರಿಕ್ಷೆಯ ಮೂಟೆಯೊಂದಿಗೆ, ಹೊಸ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪಯಣ ಬೆಳೆಸಿತ್ತು. ನೀರಿಕ್ಷೆಯಂತೆ ಸೆಂಚೂರಿಯನ್ ನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಗೆಲುವು ದಾಖಲಿಸಿದ್ದರೂ, ನಂತರ ನಡೆದ ಎರಡು ಟೆಸ್ಟ್ ಗಳಲ್ಲಿ ಹೀನಾಯವಾಗಿ ಸೋತು ಸರಣಿಯನ್ನು ತಪ್ಪಿಸಿಕೊಂಡಿತು. ಈಗ ಸೋತ ತಪ್ಪಿಗೆ ನಾಯಕ ವಿರಾಟ್ ಕೊಹ್ಲಿ ಸಹ ಟೆಸ್ಟ್ ಕ್ರಿಕೇಟ್ ತಂಡದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮೊದಲೇ ರೋಹಿತ್ ಶರ್ಮಾ ಗಾಯಾಳುವಾದ ಕಾರಣ ಉಪನಾಯಕ ಕೆ.ಎಲ್.ರಾಹುಲ್ ಪೂರ್ಣ ಪ್ರಮಾಣದ ನಾಯಕತ್ವದ ಜವಾಬ್ದಾರಿಯನ್ನ ಹೊತ್ತಿದ್ದಾರೆ. ಸೋತ ಮನಸ್ಸುಗಳನ್ನ ಜೊತೆಯಾಗಿಟ್ಟುಕೊಂಡು, ಹೊಸ ಕೋಚ್ ರಾಹುಲ್ ದ್ರಾವಿಡ್ ರವರ ಮಾರ್ಗದರ್ಶನದಲ್ಲಿ, ನಾಯಕ ಕೆ.ಎಲ್.ರಾಹುಲ್ ಏಕದಿನ ಕ್ರಿಕೇಟ್ ಸರಣಿಯಲ್ಲಿ ಭಾರತ ತಂಡವನ್ನ ಮುನ್ನಡೆಸಬೇಕಾದ ಜವಾಬ್ದಾರಿಯನ್ನ ಹೊತ್ತಿದ್ದಾರೆ. ಏಕದಿನ ಸರಣಿ ಗೆದ್ದು, ಟೆಸ್ಟ್ ಸರಣಿಯಲ್ಲಿ ಸೋತ ನೋವನ್ನ ಮರೆತು ತವರಿಗೆ ವಾಪಸ್ ಆಗಬೇಕಾಗಿದೆ.

ಏಕದಿನ ಸರಣಿ ಇದೇ ಜನೇವರಿ 19 ರಿಂದ ಆರಂಭವಾಗಲಿದೆ. ಮೊದಲ ಹಾಗೂ ಏರಡನೇ ಪಂದ್ಯಗಳು ಪಾರ್ಲ್ ನ ಬೋಲಾಂಡ್ ಪಾರ್ಕ್ ನಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ ಎರಡು ಘಂಟೆಗೆ ಆರಂಭವಾಗಲಿದೆ. ಮೂರನೇ ಪಂದ್ಯ ಜನೇವರಿ 23 ರಂದು ಕೇಪಟೌನ್ ನಲ್ಲಿ ಮಧ್ಯಾಹ್ನ ಎರಡು ಘಂಟೆಗೆ ಆರಂಭವಾಗಲಿದೆ. ಭಾರತ ತಂಡ ಏಕದಿನ ಸರಣಿಗೆ ಈಗಾಗಲೇ ತಂಡವನ್ನು ಪ್ರಕಟಿಸಿದ್ದು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ವಾಷಿಂಗ್ಟನ್ ಸುಂದರ್ ಹಾಗೂ ಗಾಯಾಳು ಮಹಮದ್ ಸಿರಾಜ್ ಬದಲಿಗೆ , ಜಯಂತ್ ಯಾದವ್ ಹಾಗೂ ನವದೀಪ್ ಸೈನಿಗೆ ಅವಕಾಶ ನೀಡಿದೆ. ಕನ್ನಡಿಗರಾದ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ಕೆ.ಎಲ್.ರಾಹುಲ್ ಭಾರತ ಕ್ರಿಕೇಟ್ ತಂಡವನ್ನ ಹೇಗೆ ಮರಳಿ ಗೆಲುವಿನ ಲಯಕ್ಕೆ ಮರಳಿಸುತ್ತಾರೆಂಬುದೇ ಸದ್ಯ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.