ಸಮಂತಾ ರವರ ಜೊತೆ ವಿಚ್ಛೇದನ ಪಡೆದ ಬಳಿಕ ನಾಗ ಜೊತೆ ಖಾಸಗಿ ವಿಮಾನದಲ್ಲಿ ಕಾಣಿಸಿಕೊಂಡ ಈ ಸುಂದರಿ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಟಾಲಿವುಡ್ ನ ಸ್ಟಾರ್ ದಂಪತಿ ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇಧನ ಆಗಿರುವುದು ನಿಮಗೆಲ್ಲಾ ತಿಳಿದಿರುವ ವಿಷಯ. ಫೇಮಸ್ ವೆಬ್ ಸೀರಿಸ್ ಫ್ಯಾಮಿಲಿ ಮ್ಯಾನ್ – 2 ನಲ್ಲಿ ಸಮಂತಾ ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೇ ವಿಚ್ಛೇದನಕ್ಕೆ ಮೂಲ ಕಾರಣವಾಯಿತು ಎಂಬ ಗುಸುಗುಸು ಟಾಲಿವುಡ್ ವಲಯದಲ್ಲಿ ಕೇಳಿ ಬರುತ್ತಿದೆ. ಈ ನಡುವೆ ವಿಚ್ಛೇದನದ ನಂತರ ಸ್ವಾಭಿಮಾನಿಯಾಗಿ ಬದುಕುತ್ತಿರುವ ಸಮಂತಾ ಫಿಲ್ಮ್ ಇಂಡಸ್ಟ್ರಿಯಲ್ಲಿ ಸಖತ್ ಬ್ಯುಸಿ. ಟಾಲಿವುಡ್ ಮಾತ್ರವಲ್ಲದೇ ಬಾಲಿವುಡ್ ಚಿತ್ರರಂಗದಲ್ಲಿಯೂ ಸಹ ಸಮಂತಾಗೆ ವಿಪುಲ ಅವಕಾಶಗಳು ಸಿಗುತ್ತಿವೆ.
ಆದರೇ ಪ್ರತಿಷ್ಠಿತ ಅಕ್ಕಿನೇನಿ ಕುಟುಂಬದ ನಾಗಚೈತನ್ಯ ಮಾತ್ರ ವಿಚ್ಛೇಧನದ ನಂತರ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಕಳೆದ ವಾರ ತಮ್ಮ ಖಾಸಗಿ ವಿಮಾನದಲ್ಲಿ ಕುಟುಂಬದೊಂದಿಗೆ ನಾಗಚೈತನ್ಯ ಕಾಣಿಸಿಕೊಂಡರು. ಆದರೇ ಅಲ್ಲಿ ಎಲ್ಲರೂ ಮೂಗಿನ ಮೇಲೆ ಕೈ ಬೆರಳು ಇಡುವಂತಹ ಘಟನೆಯೊಂದು ನಡೆಯಿತು. ಹೌದು ನಾಗಾರ್ಜುನ ಪುತ್ರ , ನಾಗಚೈತನ್ಯ ಹೊಸ ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಆಕೆ ಯಾರು ಎಂಬುದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ.
ಅಷ್ಟಕ್ಕೂ ನಾಗಚೈತನ್ಯ ಜೊತೆ ಖಾಸಗಿ ವಿಮಾನದಲ್ಲಿ ಸುತ್ತಾಡಿದ ಸುಂದರಿ ಬೇರೆ ಯಾರೂ ಅಲ್ಲ, ತೆಲುಗಿನ ಫೇಮಸ್ ನಟಿ ಲಹರಿ ಶರಿ. ಈಕೆ ಟಾಲಿವುಡ್ ಚಿತ್ರರಂಗದಲ್ಲಿ ಬಹಳಷ್ಟು ಫೇಮಸ್ ಆದವಳು. ಅಪಾರ ಅಭಿಮಾನಿಗಳನ್ನು ಸಹ ಹೊಂದಿದ್ದಾಳೆ. ನಟಿಯಾಗಿ, ನಿರೂಪಕಿಯಾಗಿ ಮಾತ್ರವಲ್ಲದೇ ಬಿಗ್ ಬಾಸ್ ಮನೆಯ ಸ್ಪರ್ಧಿಯಾಗಿಯೂ ಸಹ ಗಮನಸೆಳೆದಿದ್ದರು. ಸದ್ಯ ಸಮಂತಾ ದೂರವಾದ ಮೇಲೆ ಏಕಾಂಗಿಯಾಗಿರುವ ನಾಗಚೈತನ್ಯ ಸದ್ಯ ಲಹರಿ ಶರಿ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಲಹರಿ ಶರಿ ಅಕ್ಕಿನೇನಿ ಕುಟುಂಬದ ಮುಂದಿನ ಸೊಸೆಯಾಗಲಿದ್ದಾರಾ ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.