ಪೋಸ್ಟ್ ಆಫೀಸ್ ನಲ್ಲಿ ಹೊಸ ಉಳಿತಾಯ ಸ್ಕೀಮ್, ಹೂಡಿಕೆ ಮಾಡಿ ಕೇವಲ 5 ವರ್ಷದಲ್ಲಿ ನಿಮ್ಮ ಕೈಯಲ್ಲಿ 14 ಲಕ್ಷ. ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮ್ಮ ಕೈಯಲ್ಲಿ ಹಣವಿದ್ದರೆ ಅದನ್ನು ಉಳಿತಾಯ ಮಾಡಲು ಬಯಸಿದರೆ ಪೋಸ್ಟ್ ಆಫೀಸ್ ನಲ್ಲಿ ಇಡುವುದು ಉತ್ತಮ ಆಯ್ಕೆ. ಸರ್ಕಾರಿ ಆಧಾರಿತ ಪೋಸ್ಟ್ ಆಫಿಸ್ ನಲ್ಲಿ ಹಣ ಇಟ್ಟರೆ ವಂಚನೆಯಾಗುವ ಸಾಧ್ಯತೆಗಳೂ ಇಲ್ಲ. ಪೋಸ್ಟ್ ಆಫೀಸ್ ನ ಈ ಒಂದು ಉಳಿತಾಯದ ಸ್ಕೀಮ್ ನಿಮಗೆ ಕೇವಲ ಐದೇ ವರ್ಷದಲ್ಲಿ ಇಷ್ಟು ಹಣವನ್ನು ತಂದುಕೊಡಲಿದೆ. ಬನ್ನಿ ಈ ಯೋಜನೆಯ ಬಗ್ಗೆ ಇನ್ನಷ್ಟು ತಿಳಿಯೋಣ.
ಅಂಚೆ ಕಛೇರಿಯು ಉಳಿತಾಯಮಾಡುವವರಿಗಾಗಿ ಹಲವು ಸ್ಕೀಮ್ ಗಳನ್ನು ಹೊಂದಿದೆ. ಬೇರೆ ಬೇರೆ ವಯಸ್ಸಿನವರಿಗೆ ಬೇರೆ ಬೇರೆ ರೀತಿಯ ಉಳಿತಾಯ ಯೋಜನೆಯನ್ನು ಪರಿಚಯಿಸಿದೆ. ನಾವಿಂದು ಹೇಳುತ್ತಿರುವುದು ಕೆಲವೇ ವರ್ಷಗಳಲ್ಲಿ ಲಕ್ಷಗಟ್ಟಲೇ ಹಣವನ್ನು ಪಡೆಯಬಹುದಾದಂತ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಗ್ಗೆ. ಈ ಯೋಜನೆಯಲ್ಲಿ ಶೇ. 7.4 ರ ದರ ಸಿಗಲಿದೆ ಹಾಗೂ ಕೇವಲ 5 ವರ್ಷಗಳಲ್ಲಿ 14 ಲಕ್ಷ ರೂಪಾಯಿಗಳ ದೊಡ್ಡ ಮೊತ್ತವನ್ನು ಪಡೆಯಬಹುದು.
ಹೌದು ಯೋಜನೆಯ ಹೆಸರೇ ಹೇಳುವಂತೆ ಇದು ಹಿರಿಯ ನಾಗರಿಕರಿಗಾಗಿಯೇ ಇರುವ ಯೋಜನೆ. ನಿವೃತ್ತರಾಗಿರುವ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. SCSS ಯೋಜನೆಯಲ್ಲಿ ಹೂಡಿಕೆ ಮಾಡಲು ನಿಮ್ಮ ವಯಸ್ಸು 60 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು. ಈ ಸೀನಿಯರ್ ಸಿಟಿಜನ್ಸ್ ಸ್ಕೀಮ್ ಪ್ರಕಾರ 10 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, ವಾರ್ಷಿಕವಾಗಿ ಶೇ.7.4 ಬಡ್ಡಿದರ ಗಳಿಸಿ, 5 ವರ್ಷಗಳ ನಂತರ ಅಂದರೆ ನಿಮ್ಮ ಸ್ಕೀಮ್ ಮುಗಿದ ಬಳಿಕ 14,28,964 ರೂ.ಗಳನ್ನು ಬಡ್ಡಿ ಹಾಗೂ ಅಸಲನ್ನು ಪಡೆಯಬಹುದು.
ಇನ್ನು ಈ ಯೋಜನೆಯಲ್ಲಿ ನೀವು ಗರಿಷ್ಠ 15 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಇಡುವಂತಿಲ್ಲ. ನಿಮ್ಮ ಖಾತೆ ತೆರೆಯುವ ಮೊತ್ತವು ಒಂದು ಲಕ್ಷ ರೂಪಾಯಿಗಿಂತ ಕಡಿಮೆಯಿದ್ದರೆ, ನೀವು ನಗದು ಪಾವತಿಸಿ ಖಾತೆಯನ್ನು ತೆರೆಯಬಹುದು. ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಇಡುವುದಿದ್ದರೆ ಚೆಕ್ ಅನ್ನು ನೀಡಬೇಕಾಗುತ್ತದೆ. ಅತ್ಯಂತ ಸುರಕ್ಷಿತವೂ ಲಾಭದಾಯಕವೂ ಆದ ಈ ಯೋಜನೆಯನ್ನು ಹಿರಿಯ ನಾಗರಿಕರು ಖಂಡಿತ ಪ್ರಯೋಜನ ಪಡೆದುಕೊಳ್ಳಬಹುದು.
Comments are closed.