ಬೆಡ್ ರೂಮಿಗೆ ಹೊಸ ನಂತರ ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿದರೇ ದಾಂಪತ್ಯ ಸುಖಕರ. ಇಲ್ಲದಿದ್ದರೆ ಕಷ್ಟ ಸ್ವಾಮಿ ಜೀವನ.
ನಮಸ್ಕಾರ ಸ್ನೇಹಿತರೇ ಇತ್ತೀಚಿನ ಬ್ಯುಸಿ ದುನಿಯಾದಲ್ಲಿ ಗಂಡ ಹೆಂಡತಿಯರಿಗೆ ಎರಡು ನಿಮಿಷ ನೆಮ್ಮದಿಯಾಗಿ ಕೂತ್ಕೊಂಡು ಪ್ರೀತಿ ಮಾಡಲು ಕೂಡ ಸಮಯ ಸಿಗುವುದಿಲ್ಲ. ಗಂಡ ಕೆಲಸದಲ್ಲಿ ನಿರತರಾಗಿದ್ದಾರೆ ಹೆಂಡತಿ ಮನೆಯೊಳಗಡೆ ಮನೆಯ ಜವಾಬ್ದಾರಿಗಳನ್ನು ಸಂಭಾಳಿಸಲು ನಿರತರಾಗಿರುತ್ತಾರೆ. ಇನ್ನು ಮನೆಗೆ ಬಂದಾಗ ರಾತ್ರಿಯ ಸಮಯದಲ್ಲಿ ನೇರವಾಗಿ ಬೆಡ್ರೂಮ್ಗೆ ಹೋದಾಗಲೇ ಇಬ್ಬರಿಗೂ ಕೂಡ ಸಮಯ ಸಿಗುತ್ತದೆ. ಆದರೆ ಈ ಸಂದರ್ಭದಲ್ಲಿ ದಂಪತಿಗಳು ಮಾಡುವ ಕೆಲವೊಂದು ತಪ್ಪಿನ ನಿರ್ಧಾರದಿಂದಾಗಿ ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆಗಳಿರುತ್ತವೆ. ಇಂದಿನ ವಿಚಾರದಲ್ಲಿ ನಾವು ಗಂಡ-ಹೆಂಡತಿ ಇಬ್ಬರೂ ಕೂಡ ಬೆಡ್ ರೂಮ್ ಗೆ ಹೋಗಿ ಮಲಗುವ ಮುನ್ನ ಅನುಸರಿಸಬೇಕಾದ ವಿಚಾರಗಳ ಕುರಿತಂತೆ ಹೇಳಲು ಹೊರಟಿದ್ದೇವೆ. ಈ ಅಂಶಗಳನ್ನು ಪಾಲಿಸಿದರೆ ಖಂಡಿತವಾಗಿ ನಿಮ್ಮ ದಾಂಪತ್ಯ ಜೀವನದಲ್ಲಿ ನೆಮ್ಮದಿ ಹಾಗೂ ಸುಖ-ಶಾಂತಿ ಎನ್ನುವುದು ದೀರ್ಘಕಾಲದವರೆಗೆ ಸ್ಥಾಪಿತವಾಗಿರುತ್ತದೆ.
ಮೊದಲಿಗೆ ಬೆಡ್ ರೂಮ್ ಒಳಗೆ ಬಂದಾಕ್ಷಣ ನೀವು ನಿಮ್ಮ ಪ್ರೊಫೆಷನಲ್ ಅಂದರೆ ಕೆಲಸದ ಕುರಿತಂತೆ ಇರುವಂತಹ ಎಲ್ಲಾ ಕಾರ್ಯಗಳನ್ನು ಮರೆತು ನಿಮ್ಮ ಸಂಗಾತಿಯೊಂದಿಗೆ ಕ್ವಾಲಿಟಿ ಸಮಯಗಳನ್ನು ಕಳೆಯಬೇಕು. ನಿಮ್ಮ ಸಂಗಾತಿಯ ಕಣ್ಣಿನಲ್ಲಿ ಕಣ್ಣನಿಟ್ಟು ಗಂಟೆಗಟ್ಟಲೆ ರೋಮ್ಯಾಂಟಿಕ್ ಆಗಿ ಮಾತನಾಡಿ. ಅಪ್ಪಿತಪ್ಪಿಯೂ ಕೂಡ ಕೆಲಸದ ಕುರಿತಂತೆ ಈ ಸಂದರ್ಭದಲ್ಲಿ ಯೋಜನೆಯನ್ನು ಕೂಡ ಮಾಡಬೇಡಿ. ಈ ಅಂಶಗಳನ್ನು ನೀವು ಪಾಲಿಸುವುದರಿಂದಾಗಿ ನಿಮ್ಮಿಬ್ಬರ ನಡುವೆ ಒಳ್ಳೆಯ ಬಾಂಡಿಂಗ್ ಏರ್ಪಡುತ್ತದೆ.
ಎರಡನೆಯದಾಗಿ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ಸಮಯದಲ್ಲಿ ಮೊಬೈಲ್ ಫೋನ್ ಎನ್ನುವುದು ಸಮಯವನ್ನು ಮುಗಿಸುವಂತಹ ಯಂತ್ರವಾಗಿ ಬಿಟ್ಟಿದೆ. ಇತ್ತೀಚಿನ ದಿನಗಳಲ್ಲಂತೂ ಬೆಡ್ ರೂಮಿಗೆ ಬಂದಾಕ್ಷಣವೇ ಗಂಡ ಹೆಂಡತಿ ಇಬ್ಬರೂ ಕೂಡ ಮೊಬೈಲ್ ಅನ್ನು ಹಿಡಿದುಕೊಂಡು ಸೋಶಿಯಲ್ ಮೀಡಿಯಾ ಗಳನ್ನು ನೋಡುತ್ತಲೇ ಇರುತ್ತಾರೆ. ಹೀಗಾಗಿ ಬೆಡ್ ರೂಮಿಗೆ ಬಂದಾಕ್ಷಣವೇ ರಾತ್ರಿಯಲ್ಲಿ ಮೊಬೈಲ್ ಅನ್ನು ಸ್ವಿಚ್ ಆಫ್ ಇಲ್ಲ ಸೈಲೆಂಟ್ ಮಾಡಿಡಬೇಕು. ಹೇಗೆ ಮಾಡಿರುವುದರಿಂದ ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವಿನ ರೋಮ್ಯಾಂಟಿಕ್ ಸಮಯಗಳು ಇನ್ನಷ್ಟು ಹೆಚ್ಚಾಗುತ್ತದೆ.
ಮೂರನೇದಾಗಿ ನಿಮ್ಮ ಮಕ್ಕಳು ದೊಡ್ಡವರಾಗಿದ್ದಾರೆ ಅವರನ್ನು ಬೇರೆಯ ರೂಮಿನಲ್ಲಿ ಇರಲು ಅಥವಾ ಮಲಗಲು ಬಿಡಿ. ಮಕ್ಕಳು ನಿಮ್ಮ ನಡುವೆ ಇರುವುದರಿಂದಾಗಿ ನಿಮ್ಮ ನಡುವೆ ಇರುವಂತಹ ರೊಮ್ಯಾಂಟಿಕ್ ಸಂಬಂಧ ಎನ್ನುವುದು ಕೊರತೆಯಿಂದ ಕೂಡಿರುತ್ತದೆ. ಹೀಗಾಗಿ ಅಗತ್ಯ ಇಲ್ಲದೆ ಇದ್ದರೂ ಕೂಡ ಮಕ್ಕಳನ್ನು ನಿಮ್ಮ ಜೊತೆಗೆ ಮಲಗಿಸಿ ಕೊಳ್ಳುವುದು ಬೇಡ. ಇಲ್ಲದಿದ್ದರೆ ನೀವು ರಾತ್ರಿಯ ಸಂದರ್ಭದಲ್ಲಿ ಮಕ್ಕಳನ್ನು ಮಲಗಿಸಿದ ಮೇಲೆ ಬೇರೆ ರೂಮಿಗೆ ಹೋಗಿ ನಿಮ್ಮ ಸಮಯವನ್ನು ಕಳೆಯಬಹುದು ರೋಮ್ಯಾಂಟಿಕ್ ಆಗಿ ಮಾತನಾಡಬಹುದು.
ನಾಲ್ಕನೆಯದಾಗಿ ದಿನವಿಡಿ ಗಂಡ-ಹೆಂಡತಿ ಎಷ್ಟೇ ಕೆಲಸಗಳಲ್ಲಿ ಬ್ಯುಸಿ ಆಗಿದ್ದರೂ ಕೂಡ ರಾತ್ರಿ ತಮ್ಮ ಬೆಡ್ ರೂಮಿಗೆ ಹೋಗುವಾಗ ಒಟ್ಟಿಗೆ ಹೋಗಬೇಕು. ಈ ಸಂದರ್ಭದಲ್ಲಿ ನೀವು ನಿಮ್ಮ ರೋಮ್ಯಾಂಟಿಕ್ ಸಮಯಗಳನ್ನು ಕಳೆಯಲು ಪ್ರಶಸ್ತವಾಗಿರುತ್ತದೆ. ಇಷ್ಟು ಮಾತ್ರವಲ್ಲದೆ ಮಲಗುವ ಸಂದರ್ಭದಲ್ಲಿ ಕೂಡ ಒಬ್ಬರ ತೋಳಿನಲ್ಲಿ ಒಬ್ಬರು ಬಿಗಿಯಾಗಿ ಮಲಗುವುದರಿಂದಾಗಿ ಇಬ್ಬರ ನಡುವಿನ ಪ್ರೇಮ ಭರಿದ ದಾಂಪತ್ಯ ಜೀವನ ಎನ್ನುವುದು ಇನ್ನಷ್ಟು ಪ್ರಕಾಶಮಾನವಾಗಿರುತ್ತದೆ.
ಕೊನೆದಾಗಿ ಬೆಡ್ ರೂಮಿಗೆ ಹೋದ ನಂತರ ನಿಮಗೆ ತಿಳಿದಿರುವ ಹಾಗೆ ದಾಂಪತ್ಯ ಜೀವನ ಎನ್ನುವುದು ದೈಹಿಕ ಸಂಬಂಧವನ್ನು ಹೊಂದುವವರೆಗೂ ಕೂಡ ಅಷ್ಟೊಂದು ಪ್ರೀತಿ ಎನ್ನುವುದು ಕಂಡುಬರುವುದಿಲ್ಲ. ಹೀಗಾಗಿ ಪ್ರತಿಯೊಬ್ಬ ಸಂಗತಿಗೂ ಕೂಡ ಅವರದೇ ಆದಂತಹ ದೈಹಿಕ ಅಗತ್ಯತೆ ಗಳಿರುತ್ತವೆ. ಹೀಗಾಗಿ ಅವುಗಳನ್ನು ಪೂರೈಸಲು ಸಂಪೂರ್ಣವಾಗಿ ಪ್ರಯತ್ನಪಟ್ಟು ನಿಮ್ಮ ಸಂಗಾತಿಯನ್ನು ದೈಹಿಕ ರೀತಿಯಲ್ಲಿ ಕೂಡ ಖುಷಿಯಾಗಿರಿಸಿಕೊಳ್ಳಿ. ಈ ವಿಚಾರಗಳನ್ನು ಪ್ರತಿಯೊಬ್ಬ ದಂಪತಿಗಳು ಕೂಡ ಸುಖವಾದ ದಾಂಪತ್ಯ ಜೀವನಕ್ಕಾಗಿ ಅನುಸರಿಸಲೇಬೇಕು.
Comments are closed.