ಕೊನೆಗೂ ಸಿಕ್ತು ಅಸಲಿ ಕಾರಣ, 18 ವರ್ಷಗಳ ದಾಂಪತ್ಯದಲ್ಲಿ ವಿಚ್ಚೇದನ ಪಡೆದುಕೊಳ್ಳಲು ಕಾರಣವೇನಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತೀಯ ಚಿತ್ರರಂಗದಲ್ಲಿ ಸೆಲೆಬ್ರಿಟಿ ಜೋಡಿಗಳು ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುವಲ್ಲಿ ಸಾಕಷ್ಟು ಮಗ್ನರಾಗಿದ್ದಾರೆ ಎಂದು ಹೇಳಬಹುದು. ಅದೇನೋ ಗೊತ್ತಿಲ್ಲ ಈ ಲಾಕ್ಡೌನ್ ಸಂದರ್ಭದಲ್ಲೇ ಇಂತಹ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಈಗ ಈ ಲಿಸ್ಟಿಗೆ ಮತ್ತೊಂದು ಸೇರ್ಪಡೆ ಎನ್ನುವಂತೆ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ರಜನಿಕಾಂತ್ ರವರ ಮಗಳಾಗಿರುವ ಐಶ್ವರ್ಯ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟನಾಗಿರುವ ಧನುಶ್ ರವರು ತಮ್ಮ 18 ವರ್ಷದ ವಿವಾಹ ಸಂಬಂಧಕ್ಕೆ ಫುಲ್ ಸ್ಟಾಪ್ ನೀಡಿದ್ದಾರೆ.
ಈ ವಿಚಾರವನ್ನು ಮೊದಲಿಗೆ ನಿನ್ನೆ ಧನುಶ್ ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡುವುದರ ಮುಖಾಂತರ ಜಗತ್ತಿಗೆ ತಿಳಿಸಿದ್ದಾರೆ. ಐಶ್ವರ್ಯ ಹಾಗೂ ಧನುಷ್ ಚಿಕ್ಕಂದಿನಿಂದಲೂ ಕೂಡ ಸ್ನೇಹಿತರಾಗಿದ್ದರು. ಸ್ನೇಹ ಪ್ರೀತಿಗೆ ತಿರುಗಿ 2004 ರಂದು ನವೆಂಬರ್ 18ರಂದು ಇಬ್ಬರು ಮದುವೆಯಾಗುತ್ತಾರೆ. ಧನುಶ್ ರವರು ಚಿತ್ರರಂಗದಲ್ಲಿ ನಾಯಕನಾಗಿ ನಿರ್ಮಾಪಕನಾಗಿ ಗುರುತಿಸಿಕೊಂಡರೆ ಐಶ್ವರ್ಯ ರವರು ನಿರ್ದೇಶಕಿ ಹಾಗೂ ಗಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರಿಗೆ ಯಾತ್ರಾ ಹಾಗೂ ಲಿಂಗಾ ಎನ್ನುವ ಎರಡು ಮಕ್ಕಳಿದ್ದಾರೆ. ಇನ್ನಿಬ್ಬರು ಕೂಡ ವಿವಾಹ ವಿಚ್ಛೇದನದ ಕುರಿತಂತೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
18ವರ್ಷಗಳಿಂದ ಪೋಷಕರಾಗಿ ದಂಪತಿಗಳಾಗಿ ಸ್ನೇಹಿತರಾಗಿ ಜೊತೆಯಲ್ಲಿದ್ದೆವು. ಈ ಪಯಣದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬೆಳೆದೆವು. ಈಗ ಇಬ್ಬರೂ ಬೇರೆ ಬೇರೆ ದಾರಿಗಳಲ್ಲಿ ನಿಂತಿದ್ದೇವೆ. ಹೀಗಾಗಿ ನಾನು ಮತ್ತು ಐಶ್ವರ್ಯ ಇಬ್ಬರೂ ಕೂಡ ಒಪ್ಪಿಗೆಯಿಂದಲೇ ಬೇರೆ ಆಗುತ್ತಿದ್ದೇವೆ. ಈ ಸಮಯದಲ್ಲಿ ಪರಸ್ಪರ ವೈಯಕ್ತಿಕವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ ಎಂಬುದಾಗಿ ಹೇಳುವ ಮೂಲಕ ಇಬ್ಬರ ನಡುವಿನ ವಿಚಾರಗಳು ಮ್ಯಾಚ್ ಆಗುತ್ತಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿ ವಿಚ್ಚೇದನ ಪಡೆದುಕೊಳ್ಳುತ್ತಿದ್ದ್ದಾರೆ ಎಂಬುದು ತಿಳಿದು ಬಂದಿದೆ. ಇದೇ ವಿಚಾರವನ್ನು ಧನುಷ್ ಆಗುವ ಐಶ್ವರ್ಯ ಇಬ್ಬರೂ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇವರಿಬ್ಬರ ವೈಯಕ್ತಿಕ ನಿರ್ಧಾರಗಳನ್ನು ಸಮಾಜವಾಗಿ ನಾವು ಗೌರವಿಸಬೇಕಾಗಿದೆ.
Comments are closed.