ಸೌತ್ ಆಫ್ರಿಕಾದ ಏಕದಿನ ಸರಣಿಯಲ್ಲಿ ಮುಂದಿನ ಭವಿಷ್ಯ ಎಂದು ಎಲ್ಲರ ಗಮನಸೆಳೆಯುತ್ತಿರುವ ಭಾರತದ ಮೂವರು ಆಟಗಾರರು ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತ ಹಾಗೂ ದಕ್ಷಿಣ ಆಫ್ರಿಕಾದ ಮಹತ್ವದ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಏಕದಿನ ಸರಣಿ ನಾಳೆಯಿಂದ ಆರಂಭವಾಗಲಿದೆ. ಟೆಸ್ಟ್ ಸರಣಿ ಆರಂಭಕ್ಕಿಂತಲೂ ಮುನ್ನ ಭಾರತ ತಂಡದಲ್ಲಿ ಸಾಕಷ್ಟು ಗೊಂದಲಗಳು ಇದ್ದವು. ಆದರೇ ಆ ಗೊಂದಲ ಬಗೆಹರಿಸಿ, ಮೊದಲ ಟೆಸ್ಟ್ ನಲ್ಲೇ ಭಾರತ ತಂಡ ದಿಗ್ವಿಜಯ ಸಾಧಿಸಿತ್ತು. ಈಗ ಏಕದಿನ ಸರಣಿಯಲ್ಲಿಯೂ ಅಂತಹದೇ ಪ್ರದರ್ಶನ ಹೊರಹೊಮ್ಮಬೇಕಿದೆ. ಆದರೇ ಭಾರತ ತಂಡದಲ್ಲಿ ಹೊಸ ಆಟಗಾರರು ತಂಡ ಕೂಡಿ ಕೊಂಡಿರುವುದರಿಂದ , ಈ ಆಟಗಾರರು ಗಮನ ಸೆಳೆಯುತ್ತಿದ್ದಾರೆ. ಬನ್ನಿ ಆ ಮೂವರು ಆಟಗಾರರು ಯಾರು ಎಂಬುದನ್ನ ತಿಳಿಯೋಣ.
1.ರುತುರಾಜ್ ಗಾಯಕ್ವಾಡ್ : ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕಗಳ ಮೇಲೆ ಶತಕ ಸಿಡಿಸಿ ಭಾರತ ತಂಡಕ್ಕೆ ಆಯ್ಕೆಯಾಗಿರುವ ರುತುರಾಜ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಆಫ್ರಿಕಾದ ಬೌನ್ಸಿ ಪಿಚ್ ಗಳಲ್ಲಿ ರುತುರಾಜ್ ಬ್ಯಾಟ್ ಬೀಸುತ್ತಾರೆ ಎಂಬುದನ್ನ ಎಲ್ಲರೂ ಕಾದು ನೋಡುತ್ತಿದ್ದಾರೆ.
2.ವೆಂಕಟೇಶ್ ಅಯ್ಯರ್ – ಹಾರ್ದಿಕ್ ಪಾಂಡ್ಯ ಸ್ಥಾನವನ್ನ ನಿಭಾಯಿಸಬಲ್ಲ ಮತ್ತೊಬ್ಬ ಆಟಗಾರ ಎಂದರೇ ಅದು ವೆಂಕಟೇಶ್ ಅಯ್ಯರ್. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವ ಹಾಗೂ ಹತ್ತು ಓವರ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ವೆಂಕಟೇಶ್ ಅಯ್ಯರ್ ಮೊದಲ ಪಂದ್ಯದಲ್ಲೇ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ. ಇವರ ಪ್ರದರ್ಶನದ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ.
3.ಪ್ರಸಿದ್ಧ್ ಕೃಷ್ಣ – ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ್, ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ಪದಾರ್ಪಣೆ ಮಾಡಿ ಉತ್ತಮ ಪ್ರದರ್ಶನ ನೀಡಿದ್ದರು. ಸದ್ಯ ವೇಗದ ಬೌಲರ್ ಗಳಿಗೆ ನೆರವಾಗುವ ಆಫ್ರಿಕಾದ ಪಿಚ್ ಗಳಲ್ಲಿ ಪ್ರಸಿದ್ಧ್ ಹೇಗೆ ಬೌಲಿಂಗ್ ಮಾಡುತ್ತಾರೆ ಎಂಬುದನ್ನ ಈಗ ಎಲ್ಲರೂ ಕಾದು ನೋಡುತ್ತಿದ್ದಾರೆ. ನೀಳಕಾಯದ ವೇಗದ ಬೌಲರ್ ಪ್ರಸಿದ್ಧ್ ಅವಕಾಶ ಸಿಕ್ಕರೇ ಖಂಡಿತ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಯಿದೆ.
Comments are closed.