ವಿಜಯ್ ಅಂದು ಮಾಡಿದ್ದನ್ನು ಇನ್ನು ಮರೆಯಲು ಆಗುತ್ತಿಲ್ಲ ಎಂದು ಊಹಿಸಿದ ರೀತಿ ದಳಪತಿ ವಿಜಯ್ ಬಗ್ಗೆ ಹೇಳಿಕೆ ನೀಡಿದ ಪ್ರಿಯಾಂಕಾ ಚೋಪ್ರಾ. ಏನಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಹಾಗೂ ಹಾಲಿವುಡ್ ನ್ನು ಆಳಿದ ಹಾಗೂ ಆಳುತ್ತಿರುವ ನಟಿಯರೆಲ್ಲಾ ತಮ್ಮ ಸಿನಿ ಕರಿಯರ್ ನ್ನು ಆರಂಭಿಸಿದ್ದು ದಕ್ಷಿಣ ಭಾರತದ ಭಾಷೆಗಳ ಸಿನಿಮಾದಿಂದ ಎನ್ನುವುದು ಸತ್ಯ. ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಹೀಗೆ ಎಲ್ಲರೂ ತಮ್ಮ ಕರಿಯರ್ ಆರಂಭಿಸಿದ್ದು ದಕ್ಷಿಣ ಭಾರತದ ಭಾಷೆಯ ಸಿನಿಮಾಗಳಿಂದಲೇ. ಅದರಲ್ಲೂ ಸದ್ಯ ಹಾಲಿವುಡ್ ನಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ಸಹ ತಮ್ಮ ಸಿನಿ ಜರ್ನಿಯನ್ನು ಆರಂಭಿಸಿದ್ದು ತಮಿಳು ಸಿನಿಮಾ ಮೂಲಕ.
ಹೌದು ವಿಶ್ವ ಸುಂದರೌ ಸ್ಪರ್ಧೆ ಗೆದ್ದ ಪಿಂಕಿ ಮೊದಲು ಬಣ್ಣ ಹಚ್ಚಿದ್ದು ತಮಿಳು ಸಿನಿಮಾ ತಮಿಳನ್ ಮೂಲಕ. ಆ ಸಿನಿಮಾ ಹಿರೋ ಇಳಯ ದಳಪತಿ ವಿಜಯ್. ಈಗ ತಮ್ಮ ಹಳೇ ಜೀವನವನ್ನ ಮೆಲುಕು ಹಾಕಿರುವ ಪ್ರಿಯಾಂಕಾ ಇಳಯ ದಳಪತಿ ವಿಜಯ್ ರಿಂದ ತಾವು ಚಿತ್ರರಂಗದಲ್ಲಿ ಸಾಕಷ್ಟು ಕಲಿತೆ ಎಂದು ಹೇಳಿಕೊಂಡಿದ್ದಾರೆ. ಹೌದು ಆರಂಭದ ದಿನಗಳಲ್ಲಿ ನಾನು ನಟನೆ ಎಂದರೇ, ಒಳ್ಳೆಯ ಬಟ್ಟೆ ಹಾಕಿಕೊಂಡು, ಮೇಕಪ್ ಮಾಡಿಕೊಳ್ಳುವುದು ಎಂದು ಅಂದುಕೊಂಡಿದ್ದೆ.
ಆದರೇ ಸೆಟ್ ನಲ್ಲಿ ಹೋದಾಗಲೇ ತಿಳಿಯಿತು, ನಟನೆ ಎಂಬುದು ಎಷ್ಟು ಕಷ್ಟ ಎಂದು. ಸಹ ನಟ ವಿಜಯ್ ನನಗೆ ನಟನೆಯ ಪಾಠ ಹೇಳಿ ಕೊಟ್ಟರು. ತಮಿಳು ಭಾಷೆಯನ್ನು ಕಲಿಸಿಕೊಟ್ಟರು. ದೊಡ್ಡ ಸ್ಟಾರ್ ನಟರಾದರೂ, ಬಹಳ ಸರಳವಾಗಿರುತ್ತಿದ್ದರು. ಅದಲ್ಲದೇ ಅವರಿಂದ ಕಲಿತ ಮತ್ತೊಂದು ಪಾಠವೆಂದರೇ, ಅದು ನಮ್ಮ ನಟನೆ ಮುಗಿದ ನಂತರ ನಾವು ನಮ್ಮ ವ್ಯಾನಿಟಿಗೆ ಹೋಗಬಾರದು. ಬದಲಿಗೆ ತಂತ್ರಜ್ಞರ ಜೊತೆ, ಕಲಾವಿದರ ಜೊತೆ ಸಮಯ ಕಳೆಯಬೇಕು. ನಮ್ಮ ಪಾತ್ರದ ಚಿತ್ರೀಕರಣ ಮುಗಿದರೂ, ನಾವು ಚಿತ್ರೀಕರಣದ ಸ್ಥಳದಲ್ಲಿಯೇ ಇರಬೇಕು. ಆಗ ಮಾತ್ರ ನಮ್ಮ ಚಿತ್ರದ ಮೇಲೆ ನಮಗೆ ಹೆಮ್ಮೆ ಮೂಡುತ್ತದೆ. ಈ ಪಾಠವನ್ನೇ ನಾನು ಅಂದಿನಿಂದಲೂ ರೂಢಿಸಿಕೊಂಡು ಬಂದಿದ್ದೇನೆ. ಹಾಗಾಗಿಯೇ ನನ್ನ ಸಿನಿ ಕರಿಯರ್ ಜರ್ನಿಯ ಗ್ರಾಫ್ ಇಷ್ಟು ಬೇಗ ಮೇಲೆ ಹೋಯಿತು ಎಂದು ಪಿಗ್ಗಿ ಹೇಳಿಕೊಂಡಿದ್ದಾರೆ. ಬಾಲಿವುಡನಲ್ಲಿ ಮಿಂಚಿದ ಪ್ರಿಯಾಂಕಾ ಹಾಲಿವುಡ್ ನಲ್ಲಿಯೂ ಸಹ ಮಿಂಚಲಿ ಎಂದು ಹಾರೈಸೋಣ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.