ಆರ್ಸಿಬಿ ತಂಡದ ಮ್ಯಾನೇಜ್ಮೆಂಟ್ ನಿಂದ ಕೊಹ್ಲಿ ಅಭಿಮಾನಿಗಳಿಗೆ ಸಿಗಲಿದೆಯೇ ಮತ್ತೊಂದು ಸಿಹಿ ಸುದ್ದಿ. ಏನು ಗೊತ್ತೇ?? ಹೀಗೆ ಆದರೆ ನಿಮಗೆ ಸರೀನಾ??
ನಮಸ್ಕಾರ ಸ್ನೇಹಿತರೇ ಇನ್ನೇನು ಕೆಲವೇ ವಾರಗಳಲ್ಲಿ 2022 ರ ಐಪಿಎಲ್ ಪಂದ್ಯಾವಳಿಗಳು ಪ್ರಾರಂಭವಾಗುವ ಮುನ್ಸೂಚನೆ ಇದಾಗಲೇ ದೊರೆತಿದೆ. ಫೆಬ್ರವರಿ 12 ಹಾಗೂ 13 ರಂದು ಬೆಂಗಳೂರಿನಲ್ಲಿ ಮೆಗಾ ಆಕ್ಷನ್ ನಡೆಯಲಿದೆ. ಈಗ ನಾವು ಮಾತನಾಡುತ್ತಿರುವುದು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕುರಿತಂತೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ವಿರಾಟ್ ಕೊಹ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮೊಹಮ್ಮದ್ ಸಿರಾಜ್ ರವರನ್ನು ತಂಡದಲ್ಲಿ ಉಳಿಸಿಕೊಂಡಿದೆ.
ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಬಾರಿಯ ಐಪಿಎಲ್ ನಲ್ಲಿ ತಾನು ಕೊನೆಯ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂಬುದಾಗಿ ಹೇಳಿ ತಂಡದ ನಾಯಕತ್ವದ ಸ್ಥಾನಕ್ಕೆ ವಿರಾಟ್ ಕೊಹ್ಲಿ ಅವರು ರಾಜೀನಾಮೆ ನೀಡಿದ್ದರು. ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕುತೂಹಲಗಳು ಮೂಡಿದ್ದವು. ಆದರೆ ಈಗ ಅದಕ್ಕೆ ಕೆಲವು ಮೂಲೆಗಳ ಮಾಹಿತಿಗಳ ಪ್ರಕಾರ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇವೆ.
ಹೌದು ಗೆಳೆಯರೇ ನೀವು ಮುಂದೆ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ರವರೇ ಮುಂದುವರೆಯುತ್ತಾರೆ ಎಂಬ ಮಾಹಿತಿ ಬಲವಾಗಿ ಕೇಳಿ ಬರುತ್ತಿದೆ. ಇದಕ್ಕೆ ಒಂದು ಉತ್ತಮ ಕಾರಣ ಇದೆ ಕೂಡ. ಮೊದಲು ಭಾರತದ ಮೂರು ಫಾರ್ಮಾಟ್ ಗಳಲ್ಲಿ ವಿರಾಟ್ ಕೊಹ್ಲಿ ಇರುವರು ನಾಯಕನ ಸ್ಥಾನವನ್ನು ವಹಿಸಿದ್ದರಿಂದಾಗಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ನಿಭಾಯಿಸುವುದು ಅವರಿಗೆ ಕಷ್ಟವಾಗಿತ್ತು. ಆದರೆ ಈಗ ಭಾರತೀಯ ಕ್ರಿಕೆಟ್ ತಂಡದ ನಾಯಕನ ಸ್ಥಾನಕ್ಕೆ ಸಂಪೂರ್ಣವಾಗಿ ರಾಜೀನಾಮೆ ನೀಡಿರುವ ಕಾರಣದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುವುದು ವಿರಾಟ್ ಕೊಹ್ಲಿ ಅವರಿಗೆ ಸುಲಭವಾಗಿದೆ ಏಕೆಂದರೆ ಇದು ನಡೆಯುವುದು ಕೇವಲ ಎರಡು ತಿಂಗಳು ಮಾತ್ರ. ಹೀಗಾಗಿ ಈ ಬಾರಿ ಮತ್ತೊಮ್ಮೆ ವಿರಾಟ್ ಕೊಹ್ಲಿ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ದೃಢವಾಗಿ ಕೇಳಿಬರುತ್ತಿದೆ.
Comments are closed.