ಕಡಲೇಕಾಯಿ ಖರೀದಿ ಮಾಡೋಕೆ ಬಂದು ಕಳ್ಳತನ ಮಾಡಿದಕ್ಕೆ, ಶೇಂಗಾ ವ್ಯಾಪಾರಿ ಏನು ಮಾಡಿದ ಗೊತ್ತೇ?? ವೈರಲ್ ಆದ ವಿಡಿಯೋ ಹೇಗಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಈ ಸಾಮಾಜಿಕ ಜಾಲತಾಣ ಎನ್ನುವುದೇ ಹಾಗೆ ಹಲವಾರು ವಿಚಾರಗಳ ಮೂಲಕ ಜನಸಾಮಾನ್ಯರನ್ನು ರಂಜಿಸುತ್ತಲೇ ಇರುತ್ತದೆ. ಕೆಲವೊಮ್ಮೆ ದುಃಖವನ್ನು ನೀಡಿದರೆ ಕೆಲವೊಮ್ಮೆ ಹೊಟ್ಟೆ ಹುಣ್ಣಾಗುವಷ್ಟು ನಗುವನ್ನು ನೀಡುತ್ತದೆ. ಇಂದು ನಾವು ಹೇಳಲು ಹೊರಟಿರುವ ವಿಚಾರ ಸೇರು ಸವಾಸೇರು ಎನ್ನುವ ಮಾತಿಗೆ ಪೂರಕವಾಗಿರುವಂತಹ ಅಂಶವಾಗಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಇದೊಂದು ವಿಡಿಯೋ ಇತ್ತೀಚಿಗೆ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಜನರ ನಗುವಿಗೆ ಕಾರಣವಾಗಿದೆ ಎಂದರೆ ಎಲ್ಲರೂ ನಂಬಲೇಬೇಕು.
ಅದೇನೆಂದರೆ ಒಬ್ಬ ವ್ಯಕ್ತಿ ಮಾರುಕಟ್ಟೆಯಲ್ಲಿ ಹೋಗುತ್ತಿರುತ್ತಾನೆ. ಆಗ ಆತನಿಗೆ ಶೇಂಗಾ ಮಾರುತ್ತಿರುವ ಒಬ್ಬ ವ್ಯಾಪಾರಿ ಕಾಣುತ್ತಾನೆ. ಆತನ ಬಳಿಗೆ ಹೋಗಿ ಶೇಂಗಾವನ್ನು ಕೊಡಲು ಹೇಳುತ್ತಾನೆ. ಆಗ ವ್ಯಾಪಾರಿ ಶೇಂಗಾವನ್ನು ಅಳತೆ ಮಾಡುತ್ತಿರಬೇಕಾದರೆ ಇತ್ತ ಈ ಮನುಷ್ಯ ಆತನ ಕಣ್ಣುತಪ್ಪಿಸಿ ಸ್ವಲ್ಪ ಶೇಂಗಾವನ್ನು ತನ್ನ ಕಿಸೆಯೊಳಗೆ ಹಾಕಲು ಆರಂಭಿಸುತ್ತಾನೆ. ಇದು ಆ ವ್ಯಾಪಾರಿಯ ಕಣ್ಣಿಗೆ ಬೀಳುತ್ತದೆ. ಇದಾದ ನಂತರ ಆತ ಮಾಡಿದ ಕೆಲಸವೇ ಎಲ್ಲರ ನಗುವಿಗೆ ಕಾರಣವಾಗಿದ್ದು. ಇದಕ್ಕೆ ನಾವು ಹೇಳಿದ್ದು ಸೇರಿಗೆ ಸವ್ವಾಸೇರು ಎನ್ನುವುದಾಗಿ.
ಇದನ್ನು ನೋಡಿದ ಆ ವ್ಯಾಪಾರಿ ಶೇಂಗಾವನ್ನು ಚೀಲಕ್ಕೆ ತುಂಬಿಸುವಾಗ ಖರೀದಿಸಲು ಬಂದಿದ್ದ ವ್ಯಕ್ತಿಯ ಗಮನವನ್ನು ಬೇರೆ ಕಡೆಗೆ ಸೆಳೆಯುತ್ತಾನೆ. ಆಗ ಚೀಲಕ್ಕೆ ಹಾಕಬೇಕಿದ್ದ ಶೇಂಗಾ ದಲ್ಲಿ ತೂಕವನ್ನು ಕಡಿಮೆ ಮಾಡಿ ಅರ್ಧ ಪ್ರಮಾಣವನ್ನು ಮಾತ್ರ ಆತನಿಗೆ ನೀಡುತ್ತಾನೆ. ಈ ವಿಡಿಯೋದ ಮೂಲಕ ಒಬ್ಬರಿಗೆ ನಾವು ಮೋಸ ಮಾಡಲು ಹೋದರೆ ನಮಗೂ ಕೂಡ ಅದೇ ವಾಪಸ್ಸು ಸಿಗುತ್ತದೆ ಎಂಬುದನ್ನು ಕಲಿಯುವಂತಹ ನೀತಿ ಪಾಠ ದೊರೆಯುತ್ತದೆ. ಈಗಾಗಲೇ ನೆಟ್ಟಿಗರ ಮನಸ್ಸನ್ನು ಗೆದ್ದಿರುವ ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ನೀವು ಕೂಡ ಈ ವಿಡಿಯೋ ನೋಡಬಹುದಾಗಿದೆ. ವೀಡಿಯೋ ನೋಡಿದ ನಂತರ ನಿಮ್ಮ ಅಭಿಪ್ರಾಯವನ್ನು ಚಲಿಸುವುದನ್ನು ಮಾತ್ರ ಮರಿಬೇಡಿ.
Comments are closed.