Neer Dose Karnataka
Take a fresh look at your lifestyle.

1983 ಚಿತ್ರ ಸೋತ ನಂತರ ಮೊದಲ ಬಾರಿಗೆ ಮಾತನಾಡಿ ಕಿಂಗ್ ಕೊಹ್ಲಿ ಗೆ ಸಲಹೆ ನೀಡಿದ ಕಪಿಲ್ ದೇವ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಾಯಕ ವಿರಾಟ್ ಕೊಹ್ಲಿಯ ಪರ್ವಕಾಲ ಟೀಮ್ ಇಂಡಿಯಾದಲ್ಲಿ ಅಂತ್ಯವಾಗಿದೆ. 2014 ರಿಂದ ನಾಯಕನಾಗಿದ್ದ ಕೊಹ್ಲಿಯ ಚಕ್ರಾಧಿಪತ್ಯ ಅಂತ್ಯವಾದ ಕಾರಣ , ಇನ್ನು ಮುಂದೆ ವಿರಾಟ್ ಕೊಹ್ಲಿ ಕೇವಲ ಆಟಗಾರನಾಗಿ ಮಾತ್ರ ಮುಂದುವರೆಯಬೇಕಿದೆ. ಈಗ ವಿರಾಟ್ ಕೊಹ್ಲಿ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ಮೊದಲಿನ ರೀತಿ ಅಗ್ರೇಸ್ಸಿವ್ನೆಸ್ ನ್ನು ಕೇವಲ ಬ್ಯಾಟಿನಿಂದ ಮಾತ್ರ ತೋರಿಸಬೇಕೆ ಹೊರತು ಮೈದಾನದಲ್ಲ. ಅದಲ್ಲದೇ ಅವರ ಬ್ಯಾಟ್ ನಿಂದ ಇನ್ನು ಮುಂದೆ ರನ್ನುಗಳ ಹೊಳೆ ಹರಿಯಬೇಕು. ಹಾಗಾದಾಗ ಮಾತ್ರ ತಂಡದಲ್ಲಿ ಸ್ಥಾನ ಶಾಶ್ವತವಾಗುತ್ತದೆ. ಈ ಬಗ್ಗೆ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ವಿರಾಟ್ ಕೊಹ್ಲಿಗೆ ಅತ್ಯಮೂಲ್ಯ ಸಲಹೆಯೊಂದನ್ನ ನೀಡಿದ್ದಾರೆ.

ಕೊಹ್ಲಿ ಆರಂಭದಲ್ಲಿ ತಂಡಕ್ಕೆ ಆಗಮಿಸಿದಾಗ ಹೆಚ್ಚು ಅಗ್ರೆಸ್ಸಿವ್ ಆಗಿದ್ದರು. ನಂತರದ ದಿನಗಳಲ್ಲಿ ವಿರಾಟ್ ತಮ್ಮ ವರ್ತನೆಯನ್ನು ಬದಲಿಸಿಕೊಂಡರು. ಈಗ ವಿರಾಟ್ ತಂಡದಲ್ಲಿ ಕೇವಲ ಆಟಗಾರ, ತಾನೇ ಬೆಳೆಸಿದ ಆಟಗಾರನ ಕೈ ಕೆಳಗೆ ಆಡಬೇಕಾಗುತ್ತದೆ, ಹಾಗಾಗಿ ಮೊದಲು ತಮ್ಮ ಅಹಂನ್ನು ಕಟ್ಟಿಡಬೇಕಾಗುತ್ತದೆ. ಸುನೀಲ್ ಗವಾಸ್ಕರ್ ನನ್ನ ನಾಯಕತ್ವದಡಿಯಲ್ಲಿ ಆಡಿದ್ದರು. ನಾನು ಶ್ರೀಕಾಂತ್ ಹಾಗೂ ಅಜರುದ್ದೀನ್ ನಾಯಕತ್ವಡಿಯಲ್ಲಿ ಆಡಿದ್ದೆ. ಸಚಿನ್,ಸೌರವ್,ರಾಹುಲ್ ಧೋನಿಯವರ ನಾಯಕತ್ವವದಡಿಯಲ್ಲಿ ಆಡಿದ್ದರು.

ಧೋನಿ ವಿರಾಟ್ ನಾಯಕತ್ವದಡಿಯಲ್ಲಿ ಆಡಿದರು. ಈಗ ವಿರಾಟ್ ಮತ್ತೊಬ್ಬರ ನಾಯಕತ್ವದಡಿ ಆಡಬೇಕು. ಬದಲಾವಣೆ ಜಗದ ನಿಯಮ. ಆದರೇ ಆ ಬದಲಾವಣೆಗೆ ವಿರಾಟ್ ಆದಷ್ಟು ಬೇಗ ಒಗ್ಗಿಕೊಳ್ಳಬೇಕು ಎಂದರು. ಹಿರಿಯ ಆಟಗಾರನಾಗಿ ವಿರಾಟ್ ಗೆ ಸಾಕಷ್ಟು ಜವಾಬ್ದಾರಿಗಳು ಇರುತ್ತವೆ. ಟೀಮ್ ಇಂಡಿಯಾದಲ್ಲಿ ಸಚಿನ್ ತೆಂಡೂಲ್ಕರ್ ನಿರ್ವಹಿಸಿದ ಜವಾಬ್ದಾರಿಯನ್ನ ವಿರಾಟ್ ನಿರ್ವಹಿಸಿ ಭಾರತವನ್ನು ವಿಶ್ವ ಚಾಂಪಿಯನ್ ಪಟ್ಟಕ್ಕೆ ಏರಿಸಬೇಕು ಎಂದು ಹೇಳಿದರು. ಸದ್ಯ ನಾಯಕತ್ವದ ತಲೆನೋವನ್ನು ಇಳಿಸಿಕೊಂಡಿರುವ ವಿರಾಟ್ ಮೂರು ಏಕದಿನ ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಬೇಕು. ಆಗ ಮಾತ್ರ ಭವಿಷ್ಯ ಸ್ಪಷ್ಟವಾಗುತ್ತದೆ ಎಂದು ಹೇಳಿದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.