Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಮತ್ತೊಂದು ಸಿಹಿ ಸುದ್ದಿ ನೀಡಿದ ನಮ್ಮನೆ ಯುವರಾಣಿ ಧಾರಾವಾಹಿ ತಂಡ, ಅಭಿಮಾನಿಗಳು ದಿಲ್ ಕುಶ್. ಏನು ಗೊತ್ತೇ??

2,287

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆ ಧಾರವಾಹಿಗಳು ಕನ್ನಡ ಪ್ರೇಕ್ಷಕರು ಎಷ್ಟರಮಟ್ಟಿಗೆ ಇಷ್ಟವಾಗುತ್ತಿವೆ ಎಂಬುದನ್ನು ಕಿರುತೆರೆ ಕ್ಷೇತ್ರದ ಬೆಳವಣಿಗೆ ನೋಡಿ ನಿಮಗೆ ತಿಳಿಯಬಹುದು. ಇನ್ನು ಇಂದಿನ ವಿಚಾರದಲ್ಲಿ ನಾವು ಮಾತನಾಡುತ್ತಿರುವುದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರವಾಹಿಯ ಕುರಿತಂತೆ.

2019 ರಲ್ಲಿ ಪ್ರಾರಂಭವಾದ ಅಂತಹ ನಮ್ಮನೆ ಯುವರಾಣಿ ಧಾರಾವಾಹಿ ಈಗಾಗಲೆ ಮೂರು ವರ್ಷಗಳನ್ನು ಪೂರೈಸಿದೆ. ಪ್ರಾರಂಭದಿಂದಲೂ ಕೂಡ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ಧಾರವಾಹಿ ಅನಿಕೇತ್ ಸಾಕೇತ್ ಅಹಲ್ಯ ಹಾಗೂ ಮೀರಾ ಪಾತ್ರದಾರಿಗಳ ಸುತ್ತ ನಡೆಯುತ್ತದೆ. ಸದ್ಯಕ್ಕೆ ಕಥೆಯನ್ನು ವುದು ಏಳು ವರ್ಷಗಳ ಕಾಲ ಮುಂದೆ ಸಾಗಿದ್ದು ಚಿಕ್ಕ ಪ್ರಣಮ್ ಈಗ ಬೆಳೆದು ದೊಡ್ಡವನಾಗಿದ್ದಾನೆ.

ಇವೆಲ್ಲದರ ನಡುವೆ ನಮ್ರತಾ ಪಾತ್ರಧಾರಿಯಾಗಿರುವ ಪ್ರಕೃತಿ ಪ್ರಸಾದ್ ರವರು ವೈಯಕ್ತಿಕ ಕಾರಣಗಳಿಂದಾಗಿ ಧಾರವಾಹಿಯಿಂದ ಹೊರನಡೆದಿದ್ದಾರೆ. ಅವರ ನಮೃತಾ ಪಾತ್ರವನ್ನು ಈಗ ಕ್ಷಮಾ ರವರು ನಿರ್ವಹಿಸುತ್ತಿದ್ದಾರೆ. ನಮ್ಮನೆ ಯುವರಾಣಿ ಧಾರವಾಹಿಯಲ್ಲಿ ಬದಲಾಗಿರುವ ಇನ್ನೊಂದು ಬದಲಾವಣೆಯೆಂದರೆ ಮೊದಲು ಈ ಧಾರವಾಹಿ 6.30 ಕ್ಕೆ ಪ್ರಸಾರವಾಗುತ್ತಿತ್ತು. ಆದರೆ ಈಗ ನಮ್ಮನೆ ಯುವರಾಣಿ ಧಾರಾವಾಹಿ 5.30 ಕ್ಕೆ ಪ್ರಸಾರವಾಗುತ್ತಿದೆ.

ನಮ್ಮನೆ ಯುವರಾಣಿ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಂಕಿತ ಅಮರ್ ರಾಘವೇಂದ್ರ ದೀಪಕ್ ಗೌಡ ಕಾವ್ಯ ಮಹದೇವ್ ಜ್ಯೋತಿ ಕಿರಣ್ ಪ್ರಕೃತಿ ಪ್ರಸಾದ್ ಹೀಗೆ ಹಲವಾರು ಕಲಾವಿದರಿಗೆ ಕರ್ನಾಟಕದಾದ್ಯಂತ ಜನಪ್ರಿಯತೆಯನ್ನು ಗಳಿಸಿಕೊಟ್ಟಂತಹ ಧಾರವಾಹಿ ನಮ್ಮನೆ ಯುವರಾಣಿ. ಈ ಎಲ್ಲಾ ಕಲಾವಿದರಿಗೂ ಕೂಡ ಕಿರುತೆರೆ ಕ್ಷೇತ್ರದಲ್ಲಿ ಬೇಡಿಕೆಯನ್ನು ಸೃಷ್ಟಿಸಿದಂತಹ ಧಾರಾವಾಹಿ ನಮ್ಮನೆ ಯುವರಾಣಿ.

ಮೀರಾ ಪಾತ್ರಧಾರಿಯಾಗಿರುವ ಅಂಕಿತ ಅಮರ್ ರವರು ನಮ್ಮನೆ ಯುವರಾಣಿ ಧಾರಾವಾಹಿ ಮೂರುವರ್ಷ ಆಗಿರುವ ಹಿನ್ನೆಲೆಯಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ. ಮೀರಾ ಪಾತ್ರಕ್ಕಾಗಿ ನಾನು ಅತ್ತಿದ್ದೇನೆ ನಕ್ಕಿದ್ದೇನೆ. ಈ ಧಾರಾವಾಹಿಯ ಪಯಣದಲ್ಲಿ ಯಾರೆಲ್ಲಾ ನನಗೆ ಬೆಂಬಲವನ್ನು ನೀಡಿದ್ದೀರೋ ನಿಮಗೆಲ್ಲರಿಗೂ ನನ್ನ ಧನ್ಯವಾದಗಳು ಎಂಬುದಾಗಿ ಕೂಡ ಹೇಳಿಕೊಂಡಿದ್ದಾರೆ.

ನಮ್ಮನೆ ಯುವರಾಣಿ ಧಾರಾವಾಹಿ ಆರಂಭವಾಗಿ ಮೂರು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಟ ರಾಘುರವರು ಕೂಡ ದಾರವಾಹಿಯ ತಂಡದ ಜೊತೆಗೆ ಇರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡು ನಿಮಗೆಲ್ಲರಿಗೂ ದೇವರು ಒಳ್ಳೆಯ ಕೆಲಸವನ್ನು ನೀಡಲು ಒಳ್ಳೆಯದು ಮಾಡಲಿ ಎಂಬುದಾಗಿ ಶುಭ ಹಾರೈಸಿದ್ದಾರೆ. ಧಾರಾವಾಹಿಗಾಗಿ ಹಗಲು-ರಾತ್ರಿಯೆನ್ನದೆ ಶ್ರಮಿಸಿರುವ ಎಲ್ಲಾ ತಂತ್ರಜ್ಞರಿಗೂ ಕೂಡ ಶುಭ ಹಾರೈಸಿದ್ದಾರೆ.

ಈಗಾಗಲೇ ಮೂರು ವರ್ಷವನ್ನು ಪೂರೈಸಿರುವ ನಮ್ಮನೆ ಯುವರಾಣಿ ಧಾರವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮಾತ್ರವಲ್ಲದೆ ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಟಾಪ್ ಧಾರವಾಹಿ. ಇತ್ತೀಚಿಗೆ ಸಾಕಷ್ಟು ಬದಲಾವಣೆ ಮಾಡಿಕೊಂಡಿರುವ ನಮ್ಮನೆ ಯುವರಾಣಿ ಧಾರಾವಾಹಿ ಯನ್ನು ಪ್ರೇಕ್ಷಕರು ಅದೇ ಮಟ್ಟದ ಪ್ರೀತಿಯನ್ನು ನೀಡಿ ಮತ್ತೊಮ್ಮೆ ಸ್ವಾಗತಿಸಬೇಕಾಗಿದೆ. ಇನ್ನಷ್ಟು ವರ್ಷಗಳನ್ನು ನಮ್ಮನೆ ಯುವರಾಣಿ ಧಾರಾವಾಹಿ ಪೂರೈಸಲಿ ಎಂಬುದಾಗಿ ಹಾರೈಸೋಣ.

Leave A Reply

Your email address will not be published.