ತಾಯಿಯಾಗುತ್ತಿರುವ ಅಮೂಲ್ಯ ರವರನ್ನು ಭೇಟಿಯಾದ ಬಾಲ್ಯದ ಗೆಳತಿ ವೈಷ್ಣವಿ ಗೌಡ ರವರು ನೀಡಿದ ದುಬಾರಿ ಉಡುಗೊರೆ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಟಿ ಅಮೂಲ್ಯ ರವರು ಚಿಕ್ಕವಯಸ್ಸಿನಿಂದಲೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರಂತಹ ಸಿನಿಮಾಗಳಲ್ಲಿ ಬಾಲನಟಿಯಾಗಿ ಮಿಂಚಿರುವಂತಹ ಪ್ರತಿಭೆ. 2007 ರಲ್ಲಿ ಬಿಡುಗಡೆಯಾದಂತಹ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಚೆಲುವಿನ ಚಿತ್ತಾರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪಾದಾರ್ಪಣೆ ಮಾಡುತ್ತಾರೆ.
ಈ ಚಿತ್ರದ ಯಶಸ್ಸಿನ ನಂತರ ನಟಿ ಅಮೂಲ್ಯ ಅವರು ಮತ್ತೆಂದೂ ಹಿಂದಿರುಗಿ ನೋಡಿದ್ದೇ ಇಲ್ಲ. ಇದರ ಯಶಸ್ಸಿನ ನಂತರ ಒಂದಾದಮೇಲೊಂದರಂತೆ ಸೂಪರ್ ಸ್ಟಾರ್ ನಟರ ಚಿತ್ರಗಳು ಅಮೂಲ್ಯರ ಅವರನ್ನು ಹುಡುಕಿಕೊಂಡು ಬಂದಿತ್ತು. ನಟಿ ಅಮೂಲ್ಯ ರವರು ಬಹುತೇಕ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರೊಂದಿಗೆ ಕೂಡ ತೆರೆಯನ್ನು ಹಂಚಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದ ಸಮಯದಲ್ಲೇ ರಾಜಕೀಯ ಹಿನ್ನೆಲೆಯುಳ್ಳಂತಹ ಜಗದೀಶ್ ರವರನ್ನು 2017 ರಲ್ಲಿ ವಿವಾಹವಾಗುತ್ತಾರೆ. ಮದುವೆ ನಂತರ ಬಹುತೇಕ ನಟಿ ಅಮೂಲ್ಯ ಅವರು ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಇದ್ದರು. ನಾಲ್ಕು ವರ್ಷಗಳ ನಂತರ ನಟಿ ಅಮೂಲ್ಯ ರವರು ಮೊದಲ ಮಗುವಿನ ತಾಯಿಯಾಗುವ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡು ಎಲ್ಲರಿಗೂ ಸಂತೋಷವನ್ನು ನೀಡಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಬಹುತೇಕ ಸೆಲೆಬ್ರಿಟಿಗಳು ಅಮೂಲ್ಯ ರವರಿಗೆ ಶುಭ ಹಾರೈಸಿದ್ದಾರೆ. ಇವರಲ್ಲಿ ಈಗ ವೈಷ್ಣವಿ ಗೌಡರವರು ಕೂಡ ಸೇರಿದ್ದಾರೆ. ಚಿಕ್ಕವಯಸ್ಸಿನಿಂದಲೂ ಕೂಡ ಅಮೂಲ್ಯ ಹಾಗೂ ವೈಷ್ಣವಿ ಗೌಡರವರು ಸ್ನೇಹಿತರಾಗಿದ್ದವರು. ಅಮೂಲ್ಯ ರವರು ಸಿನಿಮಾರಂಗದಲ್ಲಿ ಹೆಸರನ್ನು ಸಂಪಾದಿಸಿದರೆ ಈ ಕಡೆ ವೈಷ್ಣವಿ ಗೌಡ ಅವರು ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿಕೊಳ್ಳುತ್ತಾರೆ. ಇನ್ನು ತಾಯಿಯಾಗುತ್ತಿರುವ ಅಮೂಲ್ಯ ರವರಿಗೆ ಪುಟಾಣಿ ಚಿನ್ನದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಗರ್ಭಿಣಿ ಮಹಿಳೆಯರಿಗೆ ಶುಭವನ್ನು ತರುತ್ತದೆ ಎಂಬ ಪ್ರತೀತಿ ಕೂಡ ಇದೆ. ಈ ವರ್ಷದ ಬೇಸಿಗೆಯಲ್ಲಿ ಅಮೂಲ್ಯ ರವರು ತಮ್ಮ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
Comments are closed.