ಭಿಕ್ಷುಕನೊಬ್ಬ ವೇಷ ಬದಲಿಸಿ ಶ್ರೀಮಂತ ದುರಹಂಕಾರಿ ಮಗಳ ಜತೆ ಮದುವೆ ಮಾಡಿಕೊಂಡ ಆಮೇಲೆ ಏನಾಯ್ತು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಾವು ಇಂದು ಹೇಳುತ್ತಿರುವುದು ಹಲವಾರು ವರ್ಷಗಳ ಹಿಂದೆ ನಡೆದಂತಹ ನೈಜ ಘಟನೆಯ ಕುರಿತಂತೆ. ಒಂದು ರಾಜ್ಯದಲ್ಲಿ ರಾಜನ ಮಗಳು ಬಹಳ ದುರಹಂಕಾರಿ ಆಗಿದ್ದಳು. ಆಕೆ ಹೆಸರು ರಾಣಿ ವೆರೋನಿಕಾ ಎಂಬುದಾಗಿ. ಹಾಕಿದೆ ತನ್ನ ಸೌಂದರ್ಯದ ಬಗ್ಗೆ ಸಾಕಷ್ಟು ಅಹಂಕಾರ ಇತ್ತು. ಅವಳನ್ನು ಮದುವೆಯಾಗುವ ದೃಷ್ಟಿಯಿಂದ ನೋಡಲು ಬರುವ ಹುಡುಗರನ್ನು ಅವಮಾನಿಸಿ ಅಥವಾ ರೇಗಿಸಿ ಕಳುಹಿಸುತ್ತಿದ್ದಳು. ಇನ್ನು ಮಹಾರಾಜ ತನ್ನ ಮಗಳಿಗಾಗಿ ಸ್ವಯಂವರ ಏರ್ಪಾಡು ಮಾಡುತ್ತಾನೆ ಇದಕ್ಕಾಗಿ ದೂರದೂರದ ದೇಶಗಳಿಂದ ರಾಜರು ಬರುತ್ತಾರೆ.
ಆಗ ಸ್ವಯಂವರಕ್ಕೆ ಬಂದಿದ್ದ ಪ್ರತಿಯೊಬ್ಬರನ್ನು ಕೂಡ ವೆರೋನಿಕಾ ಧಡೂತಿ ದೇಹ ಉದ್ದನೆಯ ಕಂಬದಂತೆ ಇದ್ದಾನೆ ಇದ್ದಾನೆ ಎಂಬುದಾಗಿ ರೇಗಿಸುತ್ತಾ ಹೋಗುತ್ತಾಳೆ. ಇನ್ನೊಬ್ಬ ಗಡ್ಡ ಬಿಟ್ಟುಕೊಂಡಿರುತ್ತಾನೆ ಆತನನ್ನು ಸನ್ಯಾಸಿ ಎಂಬುದಾಗಿ ಟೀಕಿಸುತ್ತಾಳೆ. ಆಗ ಇದನ್ನು ಕಂಡ ಆಕೆಯ ತಂದೆ ಮಹಾರಾಜ ಕೋಪಗೊಂಡು ತನ್ನ ಮಗಳನ್ನು ಭಿಕ್ಷುಕನ ಜೊತೆಗೆ ಮದುವೆ ಮಾಡಿಸುತ್ತೇನೆ ಎಂಬುದಾಗಿ ಘೋಷಿಸುತ್ತಾನೆ. ಆಗ ಸ್ವಯಂವರಕ್ಕೆ ಬಂದಿದ್ದ ಎಲ್ಲಾ ರಾಜಮಹಾರಾಜರು ತಮ್ಮ ರಾಜ್ಯಗಳಿಗೆ ತೆರಳುತ್ತಾರೆ. ಆಗ ಅವರ ಅರಮನೆಯ ಕೆಳಗಡೆ ಭಿಕ್ಷುಕನೊಬ್ಬ ಭಿಕ್ಷೆ ಬೇಡಿಕೊಂಡು ಬರುತ್ತಾನೆ. ಹೊರಗೆ ನಿಂತುಕೊಂಡು ಹಾಡು ಹೇಳಲು ಪ್ರಾರಂಭಿಸುತ್ತಾನೆ ಆತನ ಹಾಡನ್ನು ಕೇಳಿ ಮಹಾರಾಜ ಸೇವಕರನ್ನು ಕರೆದು ಶಿಕ್ಷಕನನ್ನು ಒಳಗೆ ತರಲು ಹೇಳುತ್ತಾನೆ.
ಬಿಕ್ಷುಕ ಬಂದವನೇ ಇನ್ನಷ್ಟು ಚೆನ್ನಾಗಿ ಹಾಡುತ್ತಾನೆ ಆತನ ವಿಚಾರದಲ್ಲಿ ಮಹಾರಾಜ ನನಗೆ ದೊಡ್ಡ ಬಹುಮಾನ ಉಡುಗೊರೆಯಾಗಿ ನೀಡಬಹುದು ಎಂಬುದಾಗಿತ್ತು. ಆದರೆ ಮಹಾರಾಜ ಭಿಕ್ಷುಕರಿಗೆ ನೀನು ಕನಸಿನಲ್ಲಿ ಕೂಡ ಉಳಿಸಿಕೊಳ್ಳಲಾರದಂತಹ ಉಡುಗೊರೆ ಅಂದರೆ ನನ್ನ ಮಗಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ ಎಂಬುದಾಗಿ ಹೇಳುತ್ತಾನೆ ಅದಕ್ಕೆ ಖುಷಿಯಾಗುತ್ತಾನೆ. ವೆರೋನಿಕಾ ಎಷ್ಟೇ ನಿರಾಕರಿಸಿದರು ಕೂಡ ಮಹಾರಾಜ ಒಪ್ಪದೇ ನಾನು ನಿನ್ನನ್ನು ಭಿಕ್ಷುಕನಿಗೆ ಮದುವೆ ಮಾಡಿಸಿಕೊಡುತ್ತೇನೆ ಎಂಬುದಾಗಿ ಅತಿಥಿಗಳಿಗೆ ಮಾತುಕೊಟ್ಟಿದ್ದೆ ಅದನ್ನು ಈಗ ನಾನು ನಿರ್ವಹಿಸಬೇಕು ಎಂಬುದಾಗಿ ಹೇಳಿ ಮದುವೆ ಮಾಡಿಕೊಟ್ಟು ನಿನ್ನ ಗಂಡನ ಜೊತೆಗೆ ಬಾಳು ಎಂಬುದಾಗಿ ಹೇಳುತ್ತಾ ಆಕೆಯನ್ನು ಅರಮನೆಯಿಂದ ಹೊರಹಾಕುತ್ತಾನೆ.
ಇನ್ನು ಭಿಕ್ಷುಕ ಗಂಡನೊಂದಿಗೆ ಹೋಗುತ್ತಿರಬೇಕಾದರೆ ಒಂದು ಅರಮನೆ ಉದ್ಯಾನವನ ಶ್ರೀಮಂತ ನಗರಗಳು ಸಿಕ್ಕುತ್ತವೆ. ಇದು ಯಾರಿಗೆ ಸೇರಿದ್ದು ಎಂಬುದಾಗಿ ವೆರೋನಿಕ ತನ್ನ ಬಿಕ್ಷುಕ ಗಂಡನಲ್ಲಿ ಕೇಳಿದಾಗ ಇದು ಸ್ವಯಂವರಕ್ಕೆ ಬಂದಿದ್ದಂತಹ ಅದೇ ಗಡ್ಡದ ಮಹಾರಾಜನನ್ನು ಎಂಬುದಾಗಿ ಹೇಳುತ್ತಾನೆ. ಆಗ ವೇರೋನಿಕ ನಾನು ಸುಮ್ಮನೆ ಆತನನ್ನು ಮದುವೆ ಆಗಬೇಕಾಗಿತ್ತು ಎಂಬುದಾಗಿ ಗೊಣಗುತ್ತಾಳೆ. ಇನ್ನೂ ಸ್ವಲ್ಪ ಮುಂದೆ ಹೋದಾಗ ಒಂದು ಗುಡಿಸಲು ಕಾಣಿಸುತ್ತದೆ ಇದು ಯಾರು ಎಂದು ಕೇಳಿದಾಗ ಇದೇ ನನ್ನ ಮನೆ ಎಂಬುದಾಗಿ ಬಿಕ್ಷುಕ ಹೇಳಿ ಅಡಿಗೆ ಮಾಡು ಎಂಬುದಾಗಿ ವೆರೋನಿಕಾಗೆ ಹೇಳುತ್ತಾನೆ. ಆದರೆ ಆಕೆಗೆ ಅಡುಗೆ ಮಾಡಲು ಬರುತ್ತಿರಲಿಲ್ಲ ಭಿಕ್ಷುಕನ ಆಕೆಗೆ ಅಡುಗೆ ಮಾಡಲು ಸಹಾಯ ಮಾಡುತ್ತಾನೆ. ಇನ್ನು ಭಿಕ್ಷುಕ ಆತನಿಗೆ ಮನೆಯ ಕೆಲಸವನ್ನೆಲ್ಲ ಮಾಡು ಎಂಬುದಾಗಿ ಹೇಳುತ್ತಾನೆ.
ಹೀಗೆ ದಿನಾಲು ಬಿಕ್ಷುಕ ವೆರೋನಿಕಾ ಗೆ ಬೈಯ್ಯುತ್ತಲೇ ಇರುತ್ತಾನೆ. ಒಂದು ದಿನ ಭಿಕ್ಷುಕ ಮನೆಯಲ್ಲಿರುವ ದುಡ್ಡು ಖಾಲಿಯಾಗಿದೆ ನಾನು ನಿನಗೆ ಬಿದಿರನ್ನು ತಂದುಕೊಡುತ್ತೇನೆ ಬುಟ್ಟಿ ಮಾಡು ಎನ್ನುವುದಾಗಿ ಹೇಳುತ್ತಾನೆ. ಆದರೆ ಬುಟ್ಟಿ ಕೆಲಸ ಮಾಡಲು ಬರದೆ ಆಕೆ ಕೈಗೆ ಗಾ’ಯ ಮಾಡಿಕೊಳ್ಳುತ್ತಾಳೆ. ಇದು ನಿನ್ನ ಕೈಯಲ್ಲಿ ಆಗುವುದಿಲ್ಲ ಎಂದು ಹೇಳಿ ನೂಲನ್ನು ತಂದುಕೊಡುತ್ತಾನೆ ಬಟ್ಟೆಯನ್ನು ತಯಾರಿಸಲು ಹೇಳುತ್ತಾನೆ. ಅದು ಕೂಡ ವೆರೋನಿಕಾ ಕೈಯಲ್ಲಿ ಆಗುವುದಿಲ್ಲ. ಮತ್ತೆ ಬಿಕ್ಷುಕ ಬಯ್ಯುತ್ತಾ ಮಣ್ಣಿನ ಪಾತ್ರೆಗಳನ್ನು ಕೊಡುತ್ತಾನೆ ಇದನ್ನು ಹೋಗಿ ಮಾರಾಟ ಮಾಡಿಕೊಂಡು ಬಾ ಎಂಬುದಾಗಿ ಹೇಳುತ್ತಾರೆ. ಆಗ ಆಕೆ ನನ್ನ ರಾಜ್ಯದ ಜನರ ನನ್ನನ್ನು ನೋಡಿದರೆ ಅಪಹಾಸ್ಯ ಮಾಡುತ್ತಾರೆ ನನ್ನ ಕೈಯಲ್ಲಿ ಆಗುವುದಿಲ್ಲ ಎಂದು ಹೇಳಿದಾಗ ಉಪವಾಸದಿಂದ ಇರಬೇಕು ಎಂದು ಅನಿಸಿದರೆ ಮಾಡಬೇಡ ಎಂದು ಹೇಳುತ್ತಾನೆ. ಆಗ ವೆರೋನಿಕಾ ಮಾರುಕಟ್ಟೆಯಲ್ಲಿ ಮಣ್ಣಿನ ಪಾತ್ರೆಯ ವ್ಯಾಪಾರವನ್ನು ಮಾಡಲು ಪ್ರಾರಂಭಿಸುತ್ತಾಳೆ.
ಸುಂದರ ಯುವತಿ ಮಾರುಕಟ್ಟೆಯ ಕುಳಿತಿದ್ದನ್ನು ನೋಡಿ ಎಲ್ಲರೂ ಕೂಡ ಆಕೆ ಬಳಿ ಬಂದು ಪಾತ್ರೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಒಮ್ಮೆ ಒಬ್ಬ ಸೈನಿಕ ಅವಳು ಮಧ್ಯ ರಸ್ತೆಯಲ್ಲಿ ಪಾತ್ರೆ ಮಾಡುತ್ತಿದ್ದುದನ್ನು ನೋಡಿ ಆಕೆ ಬಳಿ ಒಂದು ಪಾತ್ರೆಯನ್ನು ಖರೀದಿಸಿ ನಂತರ ಆಕೆಯ ಕೆನ್ನೆಗೆ ಒಂದೇಟು ಹೊಡೆದು ಮಧ್ಯ ರಸ್ತೆಯಲ್ಲಿ ವ್ಯಾಪಾರ ಮಾಡಬೇಡ ಎಂಬುದಾಗಿ ಹೇಳುತ್ತಾನೆ. ಆಗ ವೆರೋನಿಕ ಮನೆಗೆ ಬಂದು ಬಿಕ್ಷುಕನ ಬಳಿ ಎಲ್ಲವನ್ನು ಹೇಳುತ್ತಾಳೆ. ಆಗದು ನಿನ್ನದೇ ತಪ್ಪು ಮಧ್ಯ ರಸ್ತೆಯಲ್ಲಿ ಯಾಕೆ ವ್ಯಾಪಾರ ಮಾಡುತ್ತಿದ್ದೇ ಎಂಬುದಾಗಿ ಹೇಳುತ್ತಾನೆ.
ನನಗೆ ಕೆಲಸವಾಗುವುದಿಲ್ಲ ನಾನು ಮಹಾರಾಜರ ಅರಮನೆಯಲ್ಲಿ ನಿನಗಾಗಿ ಒಂದು ಅಡುಗೆ ಸಹಾಯಕಿ ಕೆಲಸವನ್ನು ಹುಡುಕಿಕೊಂಡು ಬಂದಿದ್ದೇನೆ ನಾಳೆಯಿಂದ ಅದನ್ನಾದರೂ ಮಾಡುವ ನಮ್ಮ ಹೊಟ್ಟೆ ತುಂಬಬಹುದು ಎಂಬುದಾಗಿ ಹೇಳುತ್ತಾನೆ. ಅದೇ ರೀತಿ ವೆರೋನಿಕಾ ಮಹಾರಾಜರ ಮನೆಗೆ ಹೋಗಿ ಆತನ ಅರಮನೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿ ಸಂಜೆ ಬರುವಾಗ ಉಳಿದ ಊಟವನ್ನು ತೆಗೆದುಕೊಂಡು ಬಂದು ತಾನು ಹಾಗೂ ತನ್ನ ಬಿಕ್ಷುಕ ಗಂಡನೊಂದಿಗೆ ಊಟ ಮಾಡುತ್ತಿದ್ದಳು. ಆದರೆ ಒಂದು ದಿನ ಅರಮನೆಯಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಎಂದಿನಂತೆ ತನ್ನ ಪಾಡಿಗೆ ಕೆಲಸ ಮಾಡಿಕೊಂಡು ಮಿಕ್ಕ ಊಟವನ್ನು ತೆಗೆದುಕೊಂಡು ಹೋಗುತ್ತಿರಬೇಕಾದರೆ ಮಹಾರಾಜರು ಆಕೆಯನ್ನು ಕರೆದುಕೊಂಡು ಹೋಗುತ್ತಾನೆ.
ಹಾಗಾಗಿ ಕೈಯಲ್ಲಿದ್ದ ಮಿಕ್ಕ ಊಟದ ಪಾತ್ರೆಗಳು ಕೆಳಗೆ ಬಿದ್ದಾಗ ಅಲ್ಲಿದ್ದವರೆಲ್ಲರೂ ನಗುತ್ತಾರೆ. ಆಗ ವೆರೋನಿಕಾ ಅವಮಾನದಿಂದ ಕುಗ್ಗಿ ಹೋಗುತ್ತಾಳೆ. ಹಾಗಾಗಿ ಓದಲು ಪ್ರಾರಂಭಿಸಿದಾಗ ಮತ್ತೆ ಆ ರಾಜ ತಡೆದು ನಿಲ್ಲಿಸಿ ನಿನಗೆ ನಾನು ಕೇವಲ ಗಡ್ಡದ ರಾಜ ಎಂಬುದಾಗಿ ಮಾತ್ರ ತಿಳಿದಿದೆ ಆದರೆ ನಾನು ನಿನ್ನೊಂದಿಗೆ ಇಷ್ಟು ದಿನ ಜೀವಿಸಿದ್ದ ಭಿಕ್ಷುಕ ಕೂಡ ಹೌದು ಎಂಬುದಾಗಿ ಹೇಳುತ್ತಾನೆ. ನಿನಗೆ ಬುದ್ಧಿ ಕಲಿಸಲು ಇದೆಲ್ಲ ಮಾಡಿದೆ ಎಂಬುದಾಗಿ ಕೂಡ ಹೇಳುತ್ತಾನೆ.
ಇಷ್ಟು ಮಾತುಗಳ ಇವತ್ತು ನಮ್ಮ ಮದುವೆ ಅಧಿಕಾರಿ ಅರಮನೆಯಲ್ಲಿ ಮದುವೆ ತಯಾರಿ ನಡೆದಿದೆ ಎಂದು ಹೇಳಿ ಆಕೆಗೆ ರಾಣಿಯರು ಹಾಕಿಕೊಳ್ಳುವ ಪೋಷಾಕು ಹಾಗೂ ಆಭರಣಗಳನ್ನು ತೊಡಿಸುತ್ತಾನೆ. ಅಲ್ಲಿ ಹೋಗಿ ನೋಡಿದಾಗ ಆಕೆಯ ತಂದೆ ತಾಯಿ ಸೇರಿದಂತೆ ಎಲ್ಲಾ ಸಂಬಂಧಿಕರು ಕೂಡ ಬಂದಿದ್ದರು. ಗಡ್ಡದ ರಾಜ ಹಾಗೂ ವೆರೋನಿಕಾಳ ಮದುವೆ ಅದ್ದೂರಿಯಾಗಿ ನಡೆಯಿತು. ಇನ್ನೆಂದು ಕೂಡ ವೆರೋನಿಕಾ ಅಹಂಕಾರದಿಂದ ವರ್ತಿಸಲಿಲ್ಲ. ಕೆಲವೊಮ್ಮೆ ಕೆಟ್ಟ ಗುಣಗಳು ಜೀವನದ ಪಾಠಗಳಿಂದಾಗಿ ಹೊರಟು ಹೋಗುತ್ತವೆ ಎಂಬುದನ್ನು ಕಥೆ ಮೂಲಕ ನಾವು ತಿಳಿಯಬಹುದು.
Comments are closed.