ಧನುಷ್ ಹಾಗೂ ಐಶ್ವರ್ಯ ರವರು ವಿಚ್ಚೇದನ ಪಡೆಯುತ್ತಿದ್ದಂತೆ ಷಾಕಿಂಗ್ ಹೇಳಿಕೆ ನೀಡಿದ ರಾಮ್ ಗೋಪಾಲ್ ವರ್ಮಾ. ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿ ಜೋಡಿಗಳು ವಿವಾಹ ವಿಚ್ಛೇದನವನ್ನು ಪಡೆಯುವಲ್ಲಿ ಮಗ್ನರಾಗಿದ್ದಾರೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಯಾಕೆಂದರೆ ಇತ್ತೀಚಿಗಷ್ಟೇ ತೆಲುಗು ಚಿತ್ರರಂಗದ ಖ್ಯಾತ ಜೋಡಿಗಳು ಆಗಿರುವ ಸಮಂತ ಹಾಗೂ ನಾಗಚೈತನ್ಯ ವಿವಾಹ ವಿಚ್ಛೇದನ ಪಡೆದ ಬೆನ್ನಲ್ಲೇ ಮತ್ತೊಂದು ಸ್ಟಾರ್ ಜೋಡಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದೆ. ಹೌದು ನಾವು ಮಾತನಾಡುತ್ತಿರುವುದು ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯ ಹಾಗೂ ಮಗಳು ಆಗಿರುವ ಧನುಷ್ ಹಾಗೂ ಐಶ್ವರ್ಯ ರವರ ಕುರಿತಂತೆ. ಧನುಷ್ ಹಾಗೂ ಐಶ್ವರ್ಯ ರವರು ಪ್ರೀತಿಸಿ ಮದುವೆಯಾಗಿದ್ದರು.
ಆದರೆ ಮೊನ್ನೆಯಷ್ಟೇ ತಮ್ಮ 18 ವರ್ಷಗಳ ದೀರ್ಘಕಾಲದ ದಾಂಪತ್ಯ ಜೀವನಕ್ಕೆ ವಿವಾಹ ವಿಚ್ಛೇದನದ ಮೂಲಕ ಫುಲ್ ಸ್ಟಾಪ್ ನೀಡಿದ್ದಾರೆ. ಇದು ಚಿತ್ರರಂಗದ ಹಲವಾರು ಗಣ್ಯರು ಸೇರಿದಂತೆ ಅವರ ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಹಲವಾರು ಕಲಾವಿದರು ಹಾಗೂ ಸೆಲೆಬ್ರಿಟಿಗಳು ರಜನಿಕಾಂತ್ ಕುಟುಂಬಕ್ಕೆ ಸೇರಿದಂತಹ ಎಲ್ಲರಿಗೂ ಕೂಡ ಸಾಂತ್ವನವನ್ನು ಹೇಳಿದ್ದರು. ಆದರೆ ಈ ಹಿನ್ನೆಲೆಯಲ್ಲಿ ಭಾರತೀಯ ಚಿತ್ರರಂಗದ ವಿಶಿಷ್ಟ ನಿರ್ದೇಶಕರಾಗಿರುವ ರಾಜಗೋಪಾಲ್ ವರ್ಮಾ ರವರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ಇವರು ನೇರವಾಗಿ ಇಲ್ಲಿ ಯಾರನ್ನು ಕೂಡ ಹೆಸರನ್ನು ಹೇಳಿ ಟ್ವಂಟ್ ಮಾಡಿಲ್ಲವಾದರೂ ಈ ಟ್ವೀಟ್ ಗಳು ಬಂದಿದ್ದು ಮಾತ್ರ ಧನುಶ್ ರವರ ವಿವಾಹ ವಿಚ್ಛೇದನದ ನಂತರವೇ. ಮದುವೆಯೆನ್ನುವುದು ಪ್ರೀತಿಯನ್ನು ಮುಗಿಸು ವಂತಹ ಕಾರ್ಯ. ಪ್ರೀತಿಯನ್ನು ಉಳಿಸಲು ಕೇವಲ ಪ್ರೀತಿಯನ್ನು ಮಾತ್ರ ಮಾಡಬೇಕು ಮದುವೆ ಎನ್ನುವ ಜೈಲಿಗೆ ಸೇರಬಾರದು ಎಂಬುದಾಗಿ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಸೆಲೆಬ್ರಿಟಿಗಳ ಸರಣಿ ವಿವಾಹ ವಿಚ್ಛೇದನಗಳ ಸುದ್ದಿ ಯುವಜನತೆಗೆ ಮದುವೆ ಮಾಡಿಕೊಳ್ಳಬಾರದು ಎಂಬುದರ ಅಪಾಯದ ಗಂಟೆ ಎಂಬುದಾಗಿ ಕೂಡಾ ರಾಜ್ ಗೋಪಾಲ್ ವರ್ಮಾ ಅವರು ತಮ್ಮ ಟ್ವಿಟರ್ ಮುಖಾಂತರ ತಿಳಿಸಿದ್ದಾರೆ. ವಿವಾಹ ವಿಚ್ಛೇದನ ಗಳನ್ನು ಆನಂದಿಸಬೇಕು ಎಂಬುದಾಗಿ ಕೂಡ ಹೇಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳಿ.
Comments are closed.