ರಶ್ಮಿಕಾ ರವರು ಸಂಭಾವನೆ ಹೆಚ್ಚಿಸಿಕೊಂಡ ಬೆನ್ನಲ್ಲೇ ತನ್ನ ಸಂಭಾವನೆ ಕೂಡ ಹೆಚ್ಚಿಸಿಕೊಂಡ ವಿಜಯ್ ದೇವರಕೊಂಡ, ಒಂದು ಸಿನೆಮಾಗೆ ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ರಶ್ಮಿಕ ಮಂದಣ್ಣ ನವರು ಈಗಾಗಲೇ ಪುಷ್ಪ ಚಿತ್ರದ ಯಶಸ್ಸಿನ ನಂತರ ಭಾರತೀಯ ಚಿತ್ರರಂಗದ ಪ್ರತಿಯೊಂದು ಭಾಷೆಗಳಲ್ಲಿ ಕೂಡ ತಮ್ಮ ಬೇಡಿಕೆಯನ್ನು ಹಾಗೂ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ಪುಷ್ಪಾ ಚಿತ್ರದ ಎರಡನೇ ಭಾಗಕ್ಕೆ ರಶ್ಮಿಕಾ ಮಂದಣ್ಣ ನವರು ತಮ್ಮ ಸಂಭಾವನೆಯ ಹೆಚ್ಚಳಕ್ಕಾಗಿ ಬೇಡಿಕೆ ಇಟ್ಟಿರುವುದು ಕೂಡ ಬಹಳಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಪುಷ್ಪ ಚಿತ್ರದ ಮೊದಲ ಭಾಗಕ್ಕಾಗಿ ರಶ್ಮಿಕ ಮಂದಣ್ಣ ನವರು ಎರಡು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಪುಷ್ಪ ಚಿತ್ರದ ಅಭೂತಪೂರ್ವ ಯಶಸ್ಸಿನ ಹಿಂದೆ ರಶ್ಮಿಕ ಮಂದಣ್ಣ ನವರ ಪಾತ್ರ ಕೂಡ ಪ್ರಮುಖವಾಗಿತ್ತು. ಹೀಗಾಗಿ ಪುಷ್ಪ ಚಿತ್ರದ ಎರಡನೇ ಭಾಗಕ್ಕಾಗಿ ರಶ್ಮಿಕಾ ಮಂದಣ್ಣ ನವರು ಮೂರು ಕೋಟಿ ರೂಪಾಯಿ ಸಂಭಾವನೆಗಾಗಿ ಬೇಡಿಕೆ ಇಟ್ಟಿದ್ದಾರೆ. ಇದರ ಬೆನ್ನಲ್ಲೇ ಅವರ ಪ್ರಿಯತಮ ಎಂದು ಸುದ್ದಿಯಲ್ಲಿರುವ ವಿಜಯ್ ದೇವರಕೊಂಡ ರವರು ಕೂಡ ತಮ್ಮ ಮುಂದಿನ ಚಿತ್ರವಾಗಿರುವ ಲೈಗರ್ ಗೆ ದುಪ್ಪಟ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೌದು ಗೆಳೆಯರೆ ವಿಜಯ ದೇವರಕೊಂಡ ರವರ ಚೊಚ್ಚಲ ಹಿಂದಿ ಸಿನಿಮಾ ವಾಗಿರುವ ಲೈಗರ್ ಅನ್ನು ಪುರಿಜಗನ್ನಾಥ್ ರವರು ನಿರ್ದೇಶಿಸುತ್ತಿದ್ದು ಕರಣ್ ಜೋಹರ್ ಹಾಗೂ ಚಾರ್ಮಿ ರವರು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅನನ್ಯ ಪಾಂಡೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಹಿಂದಿನ ಡಿಯರ್ ಕಾಮ್ರೆಡ್ ಚಿತ್ರಕ್ಕಿಂತ ದುಪ್ಪಟ್ಟು ಸಂಭಾವನೆಯನ್ನು ಲೈಗರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ರವರು ಪಡೆದುಕೊಳ್ಳಲಿದ್ದಾರಂತೆ. ಗೆಳೆಯರೇ ಲೈಗರ್ ಸಿನಿಮಾಕ್ಕಾಗಿ ವಿಜಯ್ ದೇವರಕೊಂಡ ರವರು ಪಡೆದುಕೊಳ್ಳುತ್ತಿರುವ ಸಂಭಾವನೆ ಬರೋಬ್ಬರಿ 20 ಕೋಟಿ ರೂಪಾಯಿ. ಈ ಸಿನಿಮಾದಲ್ಲಿ ಮಾಜಿ ವಲ್ಡ್ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಆಗಿರುವ ಮೈಕ್ ಟೈಸನ್ ರವರು ಕೂಡ ಕಾಣಿಸಿಕೊಂಡಿದ್ದಾರೆ. ಸಿನಿಮಾ ಆಗಸ್ಟ್ 25ರಂದು ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿವೆ.
Comments are closed.