ವಿರಾಟ್ – ಕೆ.ಎಲ್.ರಾಹುಲ್ ನಡುವೆ ದೊಡ್ಡ ಮನಸ್ತಾಪವಿದೆ ಇದಕ್ಕೆ ಪಂದ್ಯದಲ್ಲಿ ನಡೆದ ಘಟನೆಯ ಸಾಕ್ಷಿ ಎಂದ ದಾನಿಶ್ ಕನೇರಿಯ. ಸಾಕ್ಷಿ ಎಂದು ತೋರಿಸಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವ ವಹಿಸಿದ ಮೊದಲನೇ ಪಂದ್ಯದಲ್ಲಿಯೇ ಭಾರತ ತಂಡ ದಕ್ಷಿಣ ಆಫ್ರಿಕಾದ ವಿರುದ್ದ ಸೋಲನ್ನು ಅನುಭವಿಸಿತ್ತು. ಭಾರತ ತಂಡ ಸಂಘಟಿತವಾಗಿ ಒಂದು ತಂಡವಾಗಿ ಆಡಲೇ ಇಲ್ಲ. ಹಾಗಾಗಿ ಸೋಲನ್ನು ಅನುಭವಿಸಬೇಕಾಯಿತು. ಈಗ ಭಾರತದ ಈ ಸೋಲಿಗೆ ಥರೇಹವಾರಿ ಕಾರಣಗಳನ್ನು ಮಾಜಿ ಕ್ರಿಕೇಟಿಗರು ಒಬ್ಬೊಬ್ಬರಾಗಿ ನೀಡುತ್ತಿದ್ದಾರೆ. ಇದಕ್ಕೆ ಈಗ ಪಾಕಿಸ್ತಾನದ ಮಾಜಿ ಆಟಗಾರ ದ್ಯಾನಿಶ್ ಕನೇರಿಯಾ ಸಹ ಎಲ್ಲರೂ ಅಚ್ಚರಿ ಪಡುವಂತಹ ಒಂದು ಹೇಳಿಕೆಯನ್ನು ನೀಡಿದ್ದಾರೆ.
ಹೌದು ಕನೇರಿಯಾ ಪ್ರಕಾರ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಹಾಲಿ ನಾಯಕ ರಾಹುಲ್ ಮಧ್ಯೆ ದೊಡ್ಡದಾದ ಮನಸ್ತಾಪ ಇದೆ. ಇದರ ಜೊತೆ ಟೀಮ್ ಇಂಡಿಯಾದಲ್ಲಿ ಈಗ ಎರಡು ಬಣಗಳಿವೆ. ಹಾಗಾಗಿ ತಂಡದ ತಾಳ-ಮೇಳ ಸರಿಯಾಗುತ್ತಿಲ್ಲ. ಇದಲ್ಲದೇ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಅನುಭವವನ್ನ ಧಾರೆ ಎರೆಯುತ್ತಿಲ್ಲ. ರಾಹುಲ್ ಗೆ ನಾಯಕತ್ವದ ಬಗ್ಗೆ ಸೂಕ್ತ ಸಲಹೆ ಹಾಗೂ ಸೂಚನೆ ನೀಡುತ್ತಿಲ್ಲ. ಇದಲ್ಲದೇ ರಾಹುಲ್ ನಾಯಕತ್ಶದಲ್ಲಿ ಸತ್ವವಿಲ್ಲ.
ಸೂಕ್ತ ಬೌಲಿಂಗ್ ಬದಲಾವಣೆಯನ್ನು ಹೇಗೆ ಮಾಡುವುದೆಂಬುದು ಅವರು ಕಲಿತಿಲ್ಲ. ಆ ಕಾರಣಕ್ಕಾಗಿಯೇ ದಕ್ಷಿಣ ಆಫ್ರಿಕಾ ದೊಡ್ಡ ಮೊತ್ತಗಳಿಸಿತು ಎಂದು ಹೇಳಿದರು. ಇನ್ನು ಡ್ರೆಸ್ಸಿಂಗ್ ರೂಮ್ ನಲ್ಲಿಯೂ ಸಹ ಭಾರತ ತಂಡ ಒಟ್ಟಾಗಿಲ್ಲ. ರಾಹುಲ್ ಬಣ ಒಂದು ಕಡೆ ಕುಳಿತಿದ್ದರೇ, ವಿರಾಟ್ ಬಣ ಮತ್ತೊಂದು ಕಡೆ ಕುಳಿತಿತ್ತು. ಟೀಮ್ ಇಂಡಿಯಾ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳದಿದ್ದರೇ, ಭಾರತದ ಕ್ರಿಕೇಟ್ ಗೆ ದೊಡ್ಡ ಆಘಾತವಾಗುತ್ತದೆ ಎಂದು ಪಾಕಿಸ್ತಾನದ ಮಾಜಿ ಆಟಗಾರ ದ್ಯಾನಿಶ್ ಕನೇರಿಯಾ ಎಚ್ಚರಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.