ನಾಯಕನಾಗಿ ಮೊದಲ ಸರಣಿಯಲ್ಲಿಯೇ ಸೋಲನ್ನು ಕಂಡ ರಾಹುಲ್, ಬಳಿಕ ಹೇಳಿದ್ದೇನು ಗೊತ್ತೇ??ಭೇಷ್ ಎಂದ ನೆಟ್ಟಿಗರು.
ನಮಸ್ಕಾರ ಸ್ನೇಹಿತರೇ ಹಲವಾರು ನೀರಿಕ್ಷೆಗಳ ಮೂಟೆ ಹೊತ್ತು ಮಹತ್ವದ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಭಾರತ ಈಗ ನಿರಾಸೆಯ ಸಾಗರದಲ್ಲಿ ಮುಳುಗಿದೆ. ಅನೀರಿಕ್ಷಿತ ಎಂಬಂತೆ ಟೆಸ್ಟ್ ಸರಣಿಯಲ್ಲಿಯೂ ಸಹ ಸೋತಿತ್ತು. ಗಾಯದ ಮೇಲೆ ಉಪ್ಪು ಸವರಿದಂತೆ, ಟೆಸ್ಟ್ ಕ್ರಿಕೇಟ್ ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದರು. ಈಗ ಎರಡು ಏಕದಿನ ಪಂದ್ಯಗಳಲ್ಲಿ ಭಾರತ ತಂಡ ಸೋತು, ಸರಣಿ ದಕ್ಷಿಣ ಆಫ್ರಿಕಾದ ಕೈ ವಶವಾಗಿದೆ. ಎರಡು ಪಂದ್ಯಗಳಲ್ಲಿಯೂ ಭಾರತಧ ಬೌಲರ್ ಗಳ ನಿಸ್ತೇಜ ಪ್ರದರ್ಶನದ ಜೊತೆಜೊತೆಗೆ, ಟೆಸ್ಟ್ ಕ್ರಿಕೇಟ್ ನಂತೆಯೇ, ಭಾರತ ತಂಡ ಏಕದಿನ ಕ್ರಿಕೇಟ್ ನಲ್ಲಿಯೂ ಮಧ್ಯಮ ಕ್ರಮಾಂಕದ ದಯನೀಯ ವೈಫಲ್ಯ ಎದ್ದು ಕಾಣುತ್ತಿದೆ.
ಪಂದ್ಯ ಸೋತ ನಂತರ ಮಾತನಾಡಿದ ಹಂಗಾಮಿ ನಾಯಕ ರಾಹುಲ್ ಸಹ ಈ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಎರಡು ಪಂದ್ಯಗಳನ್ನು ನಾವು ಗೆಲ್ಲುವ ಸ್ಥಿತಿಯಲ್ಲಿದ್ದೇವು. ಆದರೇ ಧೀಢಿರ್ ಎಂದು ಮಧ್ಯಮ ಕ್ರಮಾಂಕ ಕುಸಿತಗೊಂಡ ಕಾರಣ ನಾವು ಸೋಲಬೇಕಾಯಿತು. ನಾನು ಸೋಲಿಗೆ ಇಂತಹವರೇ ಕಾರಣ ಎಂದು ಬೊಟ್ಟು ಮಾಡುವುದಿಲ್ಲ. ಆದರೇ ನಮ್ಮ ತಂಡದಲ್ಲಿ ಉತ್ತಮ ಜೊತೆಯಾಟಗಳು ಬರಲಿಲ್ಲ, ಆದರೇ ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸಮನ್ ಗಳು ಎರಡು ಪಂದ್ಯಗಳಲ್ಲಿ ಉತ್ತಮ ಜೊತೆಯಾಟವಾಡಿದರು.
ಹಾಗಾಗಿ ಅವರು ಗೆಲ್ಲುವಂತಾಯಿತು ಎಂದರು. ಇದರ ನಡುವೆ ಟೀಮ್ ಇಂಡಿಯಾಕ್ಕೆ ಒಂದಿಷ್ಟು ಧನಾತ್ಮಕ ಅಂಶಗಳು ಇವೆ. ಮೊದಲ ಪಂದ್ಯದಲ್ಲಿ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಮತ್ತು ಎರಡನೇ ಪಂದ್ಯದಲ್ಲಿ ರಿಷಭ್ ಪಂತ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದು ನಮಗೆ ಒಳ್ಳೆಯದಾಗಿದೆ. ಚಾಹಲ್ ಹಾಗೂ ಬುಮ್ರಾ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದಾರೆ. ಸರಣಿಯ ಕೊನೆಯ ಪಂದ್ಯ ಜಯಿಸಿ, ಉತ್ತಮ ಈ ಸರಣಿಯನ್ನು ಕೊನೆಗೊಳಿಸುವ ವಿಶ್ವಾಸ ಇದೆ ಎಂದು ರಾಹುಲ್ ಹೇಳಿದರು. ಸರಣಿಯ ಕೊನೆಯ ಪಂದ್ಯ ಭಾನುವಾರ ನಡೆಯಲಿದೆ. ಕಳಪೆ ಪ್ರದರ್ಶನ ತೋರಿದ ಭುವನೇಶ್ವರ್ ಕುಮಾರ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ ಬದಲು ಬೇರೆ ಆಟಗಾರರು ಸ್ಥಾನ ಪಡೆಯುವ ನೀರಿಕ್ಷೆ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.