Neer Dose Karnataka
Take a fresh look at your lifestyle.

ಕೈ ಕಾಲು ಸರಿ ಇದ್ದಾಗಲೇ ಎಲ್ಲರೂ ಕಾಶಿ ಗೆ ಹೋಗಿ ಬನ್ನಿ ಎಂದ ಸೋನುಗೌಡ, ಹೀಗೆ ಹೇಳಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ನಟ ಹಾಗೂ ನಟಿಯರು ಕೇವಲ ನಟನೆಯಲ್ಲಿ ಬ್ಯುಸಿಯಾಗಿರುತ್ತಾರೆ. ಇಂದು ನಾವು ಹೇಳಲು ಹೊರಟಿರುವುದು ನಟಿ ಸೋನು ಗೌಡ ರವರ ಕುರಿತಂತೆ. ಇತ್ತೀಚಿಗಷ್ಟೇ ಕಾಶಿ ಯಾತ್ರೆ ಮಾಡುತ್ತಿರುವ ನಟಿ ಸೋನು ಗೌಡ ರವರು ಒಂದು ವಿಚಾರ ಹೇಳಿರುವುದು ಈಗ ಜನರಲ್ಲಿ ಸಂಚಲನವನ್ನು ಸೃಷ್ಟಿಸಿದೆ ಎಂದು ಹೇಳಬಹುದು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಜೀವನದ ಎಲ್ಲಾ ಸುಖ-ದುಃಖಗಳನ್ನು ಕಂಡ ನಂತರ ಇಳಿವಯಸ್ಸಿನಲ್ಲಿ ತಮ್ಮ ಪಾಪ ಪರಿಹಾರಕ್ಕಾಗಿ ಕಾಶಿಗೆ ಎಲ್ಲರೂ ತೆರಳುತ್ತಾರೆ.

ಆದರೆ ನಟಿ ಸೋನುಗೌಡ ರವರು ಹೇಳುವುದೇನೆಂದರೆ ಕೈಕಾಲು ಗಟ್ಟಿ ಇರುವಾಗಲೇ ಕಾಶಿಗೆ ಬನ್ನಿ ಎಂಬುದಾಗಿ. ತಮ್ಮ ತಂಗಿ ಆಗಿರುವ ನೇಹಾ ಗೌಡ ಅವರ ಜೊತೆಗೆ ಕಾಶಿಯಾತ್ರೆಗೆ ಹೋಗಿದ್ದಾರೆ ಸೋನುಗೌಡ ರವರು. ಇಲ್ಲಿ ತಾವು ಅನುಭವಿಸಿರುವ ಅಂತಹ ಅನುಭವವನ್ನು ಲೇಖನದ ಮೂಲಕ ಹಂಚಿಕೊಂಡಿದ್ದಾರೆ. ಜನಜಂಗುಳಿ ಇದ್ದರೂ ಕೂಡ ಇಲ್ಲಿ ಒಂದು ರೀತಿಯ ಪ್ರಶಾಂತತೆಯನ್ನು ವುದು ಅಡಗಿಕೊಂಡಿದೆ. ಒಂದು ಕಡೆಯಲ್ಲಿ ಆರೋಗ್ಯವಂತ ಜೀವನಕ್ಕಾಗಿ ದೇವರಲ್ಲಿ ಜನರು ಪ್ರಾರ್ಥಿಸುತ್ತಿದ್ದರೆ ಇನ್ನೊಂದು ಕಡೆ ಘಾಟಿನಲ್ಲಿ ರಾಶಿರಾಶಿ ನಿರ್ಜೀವ ದೇಹಗಳನ್ನು ದಹಿಸುತ್ತಿದ್ದಾರೆ. ದೇಹದ 2 ಭಾಗಗಳನ್ನು ಒಂದೇ ಪ್ರದೇಶದಲ್ಲಿ ಕಂಡಂತಹ ಅನುಭವವಾಗಿದೆ.

ಬದುಕು ಎನ್ನುವುದು ಎಷ್ಟೊಂದು ಸುಂದರವಾಗಿದೆ ಎಂಬುದನ್ನು ಕಾಶಿ ನಿಮಗೆ ಅರ್ಥ ಮಾಡಿಸುತ್ತದೆ. ಇಲ್ಲಿಗೆ ಬರಲು ಯಾವುದು ನಿಯಮಗಳೆಲ್ಲ ವಸ್ತ್ರಸಂಹಿತೆ ಗಳಿಲ್ಲ ಕೇವಲ ಆಧ್ಯಾತ್ಮವನ್ನು ಮನದಲ್ಲಿ ತುಂಬಿಕೊಂಡರೆ ಸಾಕು. ಇಲ್ಲಿನ ಗಾಯಕರಂತೆ ಜೀವನ ಹಾಡುಗಳನ್ನು ಹಾಡುವ ಮೂಲಕ ಇಲ್ಲಿನ ಸಂಸ್ಕೃತಿಯ ಸೊಗಸನ್ನು ಎಲ್ಲರ ಮನದಾಳದಲ್ಲಿ ಹೊಗ್ಗುವಂತೆ ಮಾಡುತ್ತಾರೆ. ಕಾಶಿಯ ಗಲ್ಲಿಗಲ್ಲಿಗಳಲ್ಲಿ ಸಿಗುವಂತಹ ಲಸ್ಸಿ ರಸಗುಲ್ಲ ಟೊಮೆಟೊ ಚಾಟ್ಸ್ ಇತ್ಯಾದಿ ತಿನಿಸುಗಳು ಇನ್ನಷ್ಟು ಈ ಜಾಗದ ಕುರಿತಂತೆ ಪ್ರೀತಿಯನ್ನು ಮೂಡುವಂತೆ ಮಾಡುತ್ತದೆ. ಬೇರೆ ಪ್ರದೇಶಗಳಲ್ಲಿ ನಿರ್ಜೀವ ದೇಹಗಳನ್ನು ದಾನಮಾಡಿದರೆ ವಾಸನೆ ಬರುತ್ತದೆ ಆದರೆ ಮಣಿಕರ್ಣಿಕಾ ಘಾಟ್ ನಲ್ಲಿ ಅಂತಹ ಯಾವುದೇ ವಾಸನೆಗಳು ಕೂಡ ಬರಲಿಲ್ಲ. ಇದೇ ಜಾಗದಲ್ಲಿ ಕರ್ನಾಟಕ ಮೂಲದ ಗಾಂಧಿ ರವರ ಅನುಯಾಯಿಗಳಿಂದ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಕುರಿತಂತೆ ತಿಳಿದೆವು. ಅವರ ತಂದೆಯವರ ಮನೆಗೆ ಕೂಡ ಬೇಟಿನೀಡಿ ಬಂದೆವು ಎಂಬುದಾಗಿ ಸೋನುಗೌಡ ರವರು ತಮ್ಮ ಕಾಶಿಯಾತ್ರೆಯ ಸುಂದರ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Comments are closed.