ಬಿಡುಗಡೆಯಾಯಿತು ಬಹು ನಿರೀಕ್ಷಿತ ಟಿಆರ್ಪಿ ಲಿಸ್ಟ್, ಈ ವಾರದ ಟಾಪ್ ಧಾರವಾಹಿ ಯಾವುದು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ಸಮಯದಲ್ಲಿ ಕನ್ನಡ ಸಿನಿಮಾ ಗಳಿಗಿಂತ ಹೆಚ್ಚಾಗಿ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಅಂತಹ ಧಾರವಾಹಿಗಳು ಕನ್ನಡ ಪ್ರೇಕ್ಷಕರನ್ನು ಹೆಚ್ಚಾಗಿ ತಲುಪುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಈಗ ಇರುವ ಪರಿಸ್ಥಿತಿಯಲ್ಲಿ ನಿಮಗೆ ತಿಳಿದಿರುವಂತೆ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಹೋಗಿ ನೋಡಲು ಪ್ರೇಕ್ಷಕರು ಭಯಪಡುತ್ತಾರೆ. ಆದರೆ ಧಾರವಾಹಿಗಳನ್ನು ಮನೆಯಲ್ಲೇ ಕುಟುಂಬಸಮೇತರಾಗಿ ಕೂತು ವೀಕ್ಷಿಸಿ ಆನಂದಿಸಬಹುದಾಗಿದೆ.
ಹೀಗಾಗಿಯೇ ಸಿನಿಮಾಗಳಿಗಿಂತ ಹೆಚ್ಚಾಗಿ ದಾರವಾಹಿಗಳು ಈಗಾಗಲೇ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದಕ್ಕೆ ಪ್ರಾರಂಭಿಸಿರುವುದು. ಸಿನಿಮಾಗಳನ್ನು ಹೇಗೆ ಬಾಕ್ಸಾಫೀಸ್ ಕಲೆಕ್ಷನ್ ವಿಚಾರದಲ್ಲಿ ಅದರ ಗೆಲುವು ಹಾಗೂ ಸೋಲನ್ನು ನಿರ್ಧರಿಸುತ್ತಾರೋ ಹಾಗೆ ಧಾರಾವಾಹಿಗಳನ್ನು ಕೂಡ ಅವುಗಳ ಟಿಆರ್ ಪಿ ವೀಕ್ಷಣೆಯ ಆಧಾರದ ಮೇಲೆ ಅವುಗಳ ಜನಪ್ರಿಯತೆಯನ್ನು ಲೆಕ್ಕಾಚಾರ ಹಾಕುತ್ತಾರೆ. ಹಾಗಾದರೆ ಸದ್ಯಕ್ಕೆ ಅಂದರೆ ಈ ವಾರದಲ್ಲಿ ನಂಬರ್ ಒನ್ ಪಟ್ಟವನ್ನು ಅಲಂಕರಿಸಿರುವ ಧಾರವಾಹಿ ಯಾವುದು ಎಂಬುದರ ಕುರಿತಂತೆ ವಿವರವಾಗಿ ತಿಳಿಯೋಣ ಬನ್ನಿ.
ಹೌದು ಗೆಳೆಯರೇ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಉಮಾಶ್ರೀಯವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜೀ ಕನ್ನಡ ವಾಹಿನಿಯ ಪುಟ್ಟಕ್ಕನ ಮಕ್ಕಳು ಧಾರವಾಹಿ ಕಾಣಿಸುತ್ತದೆ. ಬೆಂಗಳೂರು ನಗರ, ಕರ್ನಾಟಕದ ಗ್ರಾಮಾಂತರ ಪ್ರದೇಶಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿ ಈ ಧಾರವಾಹಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಗಟ್ಟಿಮೇಳ, ಹಿಟ್ಲರ್ ಕಲ್ಯಾಣ, ಸರಿಗಮಪ ಚಾಂಪಿಯನ್ ಹಾಗೂ ನಂಬರ್ 1 ಸೊಸೆ ಕಾರ್ಯಕ್ರಮಗಳು ಕಾಣಿಸಿ ಕೊಳ್ಳುತ್ತವೆ. ಇನ್ನು ಬಹು ನಿರೀಕ್ಷಿತ ಧಾರಾವಾಹಿಗಳಾದ ಸತ್ಯ ಹಾಗೂ ಜೊತೆ ಜೊತೆಯಲಿ ಧಾರಾವಾಹಿಗಳು ಏಳು ಮತ್ತು ಎಂಟನೇ ಸ್ಥಾನಗಳಲ್ಲಿ ಇವೆ. ಇವುಗಳಲ್ಲಿ ನಿಮ್ಮ ನೆಚ್ಚಿನ ಕಾರ್ಯಕ್ರಮಗಳು ಯಾವುವು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.