ಯಾವ ತಂಡ ಖರೀದಿ ಮಾಡಲ್ಲ ಎಂದುಕೊಂಡು ಹರಾಜಿನಲ್ಲಿ ಕಡಿಮೆ ಬೆಲೆಗೆ ತಮ್ಮನ್ನು ನಿಗದಿಪಡಿಸಿಕೊಂಡ ಟಾಪ್ 5 ಭಾರತೀಯರು ಯಾರ್ಯಾರು ಗೊತ್ತೇ?
ನಮಸ್ಕಾರ ಸ್ನೇಹಿತರೇ ಐಪಿಎಲ್ ಆಟಗಾರರ ಮೆಗಾ ಹರಾಜು ಫೆಬ್ರವರಿ 12 ಹಾಗೂ 13 ರಂದು ನಡೆಯಲಿದೆ. ಈಗಾಗಲೇ ಹರಾಜಿನಲ್ಲಿ ಭಾಗವಹಿಸುವ ಆಟಗಾರರ ಪಟ್ಟಿ ಹಾಗೂ ಅವರ ಮೂಲಬೆಲೆಯನ್ನು ಬಿಸಿಸಿಐ ನಿಗದಿಪಡಿಸಿದೆ. ಆದರೇ ಆಟಗಾರರ ಮೂಲಬೆಲೆ ಜಾಸ್ತಿ ಇದ್ದರೇ ಕೆಲವೊಮ್ಮೆ ಆಟಗಾರರು ಹರಾಜಾಗದೇ ಉಳಿದುಬಿಡುತ್ತಾರೆ. ಆ ಕಾರಣಕ್ಕೆ ಭಾರತದ ಕೆಲ ಆಟಗಾರರು ತಮ್ಮ ಮೂಲ ಬೆಲೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ. ಬನ್ನಿ ಅಂತಹ ಟಾಪ್ 5 ಆಟಗಾರರು ಯಾರು ಎಂಬುದನ್ನು ತಿಳಿಯೋಣ.
ಟಾಪ್ 1 : ಅಜಿಂಕ್ಯ ರಹಾನೆ – ಒಂದು ಕಾಲದ ಐಪಿಎಲ್ ನ ಹೀರೋ ಅಜಿಂಕ್ಯಾ ರಹಾನೆ ಈಗ ಸಂಪೂರ್ಣ ಔಟ್ ಆಫ್ ಫಾರ್ಮ್ ಆಗಿದ್ದಾರೆ. ಒಂದು ಕಾಲದಲ್ಲಿ ರಹಾನೆ ರಾಜಸ್ತಾನ ರಾಯಲ್ಸ್ ತಂಡದ ನಾಯಕರಾಗಿದ್ದರು. ಆದರೇ ಈಗ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಸಹ ಅವರಿಗೆ ಸಿಗುತ್ತಿಲ್ಲ. ಹಾಗಾಗಿ ಈ ಭಾರಿ ಅವರು ಹರಾಜಿನಲ್ಲಿ ತಮ್ಮ ಮೂಲ ಬೆಲೆಯನ್ನು ಕೇವಲ ಒಂದು ಕೋಟಿಯೆಂದು ನಿಗದಿಪಡಿಸಿಕೊಂಡಿದ್ದಾರೆ.
ಟಾಪ್ 2 : ಐಪಿಎಲ್ ನಲ್ಲಿ ಮೊದಲ ಶತಕ ಭಾರಿಸಿದ್ದ ಮನೀಶ್ ಪಾಂಡೆ ಸಹ ತಮ್ಮ ಮೂಲಬೆಲೆಯನ್ನು ಒಂದುವರೆ ಕೋಟಿಗೆ ಇಳಿಸಿಕೊಂಡಿದ್ದಾರೆ. ಈ ಭಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ರನ್ ಗಳಿಸಿದ್ದರೂ, ಪಾಂಡೆ ತಮ್ಮ ಮೂಲ ಬೆಲೆ ಕಡಿಮೆ ಮಾಡಿಕೊಂಡಿರುವುದು ಆಶ್ಚರ್ಯವಾಗಿದೆ.
ಟಾಪ್ 3 : ವಾಷಿಂಗ್ಟನ್ ಸುಂದರ್ – ತೀರಾ ಇತ್ತಿಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೇಟ್ ಗೆ ಪದಾರ್ಪಣೆ ಮಾಡಿದ ದೇವದತ್ ಪಡಿಕಲ್ ಹಾಗೂ ಹರ್ಷಲ್ ಪಟೇಲ್ ತಮ್ಮ ಮೂಲಬೆಲೆಯನ್ನು ಎರಡು ಕೋಟಿಗೆ ನಿಗದಿಪಡಿಸಿಕೊಂಡರೇ, ಅನುಭವಿ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಮಾತ್ರ ತಮ್ಮ ಮೂಲಬೆಲೆಯನ್ನು ಒಂದುವರೆ ಕೋಟಿಗೆ ಇಳಿಸಿಕೊಂಡಿದ್ದಾರೆ. ಸದ್ಯ ಉತ್ತಮ ಫಾರ್ಮ್ ನಲ್ಲಿ ಇಲ್ಲದೇ ಇರುವುದು ಸಹ ಇದಕ್ಕೆ ಕಾರಣವಾಗಿರಬಹುದು.
ಟಾಪ್ 4 : ನಿತೀಶ್ ರಾಣಾ – ಕೆಕೆಆರ್ ಪರ ಭರವಸೆಯ ಬ್ಯಾಟಿಂಗ್ ನಡೆಸಿದರೂ, ನಿತೀಶ್ ರಾಣಾ ತಮ್ಮ ಮೂಲಬೆಲೆಯನ್ನು ಒಂದು ಕೋಟಿಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಹರಾಜಿನಲ್ಲಿ ಇವರಿಗೆ ಹೆಚ್ಚು ಬೇಡಿಕೆ ಬರುವ ಸಂಭವ ಇದೆ.
ಟಾಪ್ 5 : ಕುಲದೀಪ್ ಯಾದವ್ – ಚೈನಾಮನ್ ಸ್ಪಿನ್ನರ್ ಆಗಿರುವ ಕುಲದೀಪ್ ಯಾದವ್ ಗೆ ಈಗ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶವೇ ದೊರೆಯುತ್ತಿಲ್ಲ. ಹಾಗಾಗಿ ಕುಲದೀಪ್ ಯಾದವ್ ತಮ್ಮ ಮೂಲಬೆಲೆಯನ್ನು ಇಳಿಸಿಕೊಂಡಿರುವ ಸಾಧ್ಯತೆ ಇದೆ. ಅವಕಾಶ ಸಿಕ್ಕರೇ ಕುಲದಿಪ್ ಮತ್ತೊಮ್ಮೆ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮ ಬಹುದು.
Comments are closed.