Neer Dose Karnataka
Take a fresh look at your lifestyle.

ಮುಂಬೈ ಏರ್ ಪೋರ್ಟ್ ನಲ್ಲಿ ಕತ್ರಿನಾ ಕೈಫ್ ಧರಿಸಿದ್ದ ಹಸಿರು ಪೈಜಾಮದ ಬೆಲೆ ಕೇಳಿದರೆ ನೀವು ಕೂಡ ಶಾಕ್ ಆಗ್ತೀರಾ?? ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕತ್ರಿನಾ ಕೈಫ್ ರವರು ಸಾಕಷ್ಟು ವಿಚಾರಗಳಿಗಾಗಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಮದುವೆ ವಿಚಾರದಿಂದ ಪ್ರಾರಂಭವಾಗಿ ಇಂದಿನವರೆಗೂ ಕೂಡ ಪತ್ರಿಕಾ ಮಾಧ್ಯಮಗಳಲ್ಲಿ ಅವರ ಹೆಸರು ಮುಂಚೂಣಿಯಲ್ಲಿ ಇರುತ್ತದೆ. ಈ ಮೊದಲು ವಿಕ್ಕಿ ಕೌಶಲ್ ರವರೊಂದಿಗೆ ರಹಸ್ಯವಾಗಿ ಮದುವೆಯಾಗಿದ್ದು ಸುದ್ದಿಯಾಗಿತ್ತು‌. ನಂತರ ಕೇವಲ ನಾಲ್ಕೇ ದಿನಗಳಲ್ಲಿ ಮಾಲ್ಡೀವ್ಸ್ ನಲ್ಲಿ ಹನಿಮೂನ್ ಮುಗಿಸಿಕೊಂಡು ಬಂದಿದ್ದು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದಾದ ನಂತರ ಕತ್ರಿನಾ ಕೈಫ್ ರವರು ಪಂಜಾಬಿ ಭಾಷೆ ಹಾಗೂ ಪಂಜಾಬಿ ಮಾದರಿಯ ಖಾದ್ಯಗಳನ್ನು ಅಡುಗೆಗಳನ್ನು ಕಲಿಯುವುದರಲ್ಲಿ ದೊಡ್ಡಮಟ್ಟದ ಸುದ್ದಿ ಮಾಡಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಕತ್ರಿನಾ ಕೈಫ್ ರವರಿಗೆ ಮಿಲಿಯನ್ ಗಟ್ಟಲೆ ಅಭಿಮಾನಿಗಳು ಇರುವ ಕಾರಣದಿಂದಾಗಿ ಅವರು ಏನೇ ಮಾಡಿದರು ಕೂಡ ಸುದ್ದಿ ಆಗಿಯೇ ಆಗುತ್ತದೆ. ಇನ್ನು ನಿಮಗೆ ತಿಳಿದಿರುವಂತೆ ಸೆಲೆಬ್ರೆಟಿಗಳು ಅಂದಮೇಲೆ ಫ್ಯಾಶನ್ ಕುರಿತಂತೆ ವಿಶೇಷವಾದ ಕಾಳಜಿಯನ್ನು ವಹಿಸುತ್ತಾರೆ. ಅವರ ಫ್ಯಾಶನ್ ಡ್ರೆಸ್ ಗಳು ಕೂಡ ಸಾಕಷ್ಟು ದುಬಾರಿ ಬೆಲೆಯಲ್ಲಿ ಇರುತ್ತವೆ. ಇತ್ತೀಚೆಗಷ್ಟೇ ಕತ್ರಿನಾ ಕೈಫ್ ರವರು ಮುಂಬೈ ಏರ್ಪೋರ್ಟ್ನಲ್ಲಿ ಹಸಿರು ಬಣ್ಣದ ಪೈಜಾಮವನ್ನು ಧರಿಸಿಕೊಂಡು ಬಂದು ಎಲ್ಲರ ಗಮನವನ್ನು ಸೆಳೆದಿದ್ದರು.

ಹಸಿರು ಬಣ್ಣದ ಪೈಜಾಮವನ್ನು ಧರಿಸುವುದರಲ್ಲಿ ವಿಶೇಷತೆ ಏನಿದೆ ಎಂದು ಕೇಳಬಹುದು. ವಿಶೇಷತೆ ಇರುವುದು ಪೈಜಾಮ ದಲ್ಲಿ ಅಲ್ಲ ಅಥವಾ ಬಣ್ಣದಲ್ಲಿ ಕೂಡ ಅಲ್ಲ ಬದಲಾಗಿ ಅದರ ಬೆಲೆಯಲ್ಲಿ. ಹೌದು ಗೆಳೆಯರೇ ಕತ್ರಿನಾ ಕೈಫ್ ರವರು ಧರಿಸಿರುವ ಹಸಿರು ಪೈಜಾಮದ ಬೆಲೆ ಈಗಾಗಲೇ ದೊಡ್ಡಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ. ಕತ್ರಿನಾ ಕೈಫ್ ರವರು ಮುಂಬೈ ಏರ್ಪೋರ್ಟ್ನಲ್ಲಿ ಧರಿಸಿದ್ದ ಹಸಿರು ಪೈಜಾಮದ ಬೆಲೆ ಕೇಳಿದರೆ ನೀವು ಕೂಡ ಹೌಹಾರೋದು ಗ್ಯಾರಂಟಿ. ಹಸಿರು ಪೈಜಾಮದ ಬೆಲೆ ಬರೋಬ್ಬರಿ 1,07,600 ರೂಪಾಯಿ ಬೆಲೆ. ಇದು ವಿಕ್ಟೋರಿಯಾ ಬೇಕನ್ ಕಂಪನಿಯ ಪೈಜಾಮ ವಾಗಿದೆ. ಇಷ್ಟೊಂದು ದುಬಾರಿ ಬೆಲೆಯ ವಸ್ತ್ರವನ್ನು ಧರಿಸಿಕೊಂಡು ಹೋಗಿದ್ದು ಈಗ ಎಲ್ಲರ ಬಾಯಿಮಾತಿಗೆ ಕಾರಣವಾಗಿದೆ.

Comments are closed.