ಇರುವುದನ್ನು ಹೇಳಲು ನಾಚಿಕೆ ಇಲ್ಲ, ದ.ಆಫ್ರಿಕಾ ವಿರುದ್ಧದ ಸೋಲಿಗೆ ಕಾರಣ ಯಾರೆಂಬುದನ್ನು ಬಹಿರಂಗವಾಗಿ ಬಿಚ್ಚಿಟ್ಟ ರಾಹುಲ್.
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಆದಂತಹ ಸಾಕಷ್ಟು ದೊಡ್ಡ ಮಟ್ಟದ ಬದಲಾವಣೆಗಳಿಂದಾಗಿ ಭಾರತೀಯ ಕ್ರಿಕೆಟ್ ತಂಡ ಇನ್ನೂ ಕೂಡ ಸುಧಾರಿಸಿಕೊಳ್ಳುವುದರಲ್ಲಿದೆ. ಮೊದಲಿಗೆ ಭಾರತೀಯ ಕ್ರಿಕೆಟ್ ತಂಡ ಟೆಸ್ಟ್ ಸರಣಿಯಲ್ಲಿ 1-2 ಅಂತರದಿಂದ ಸೋತಿದ್ದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ನಿರಾಸೆಯನ್ನುಂಟು ಮಾಡಿತ್ತು. ಯಾಕೆಂದರೆ ಭಾರತ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಸೌತ್ ಆಫ್ರಿಕದ ನೆಲದಲ್ಲಿ ಇತಿಹಾಸ ಸೃಷ್ಟಿಸಲು ಉತ್ತಮವಾದ ಅವಕಾಶವಿತ್ತು.
ಆದರೆ ಭಾರತೀಯ ಕ್ರಿಕೆಟ್ ತಂಡ ಇದನ್ನು ಕೂಡ ಮಾಡಿದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಂಡಿತ್ತು. ನಂತರ ಕೆಎಲ್ ರಾಹುಲ್ ರವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಏಕದಿನ ಸರಣಿಯಲ್ಲಿ ಸೌತ್ ಆಫ್ರಿಕಾ ತಂಡವನ್ನು ಎದುರಿಸಿತ್ತು. ಆದರೆ ಭಾರತೀಯ ಕ್ರಿಕೆಟ್ ತಂಡ ಟೆಸ್ಟ್ ಸರಣಿ ಗಿಂತ ಹೆಚ್ಚಾಗಿ ಏಕದಿನ ಸರಣಿಯಲ್ಲಿ ಮುಖಭಂಗ ಎದುರಿಸಿತು ಎಂದರೆ ತಪ್ಪಾಗಲಾರದು. ಮೂರರಲ್ಲಿ ಮೂರು ಪಂದ್ಯವನ್ನು ಕೂಡ ಸೌತ್ ಆಫ್ರಿಕಾದ ವಿರುದ್ಧ ಭಾರತೀಯ ಕ್ರಿಕೆಟ್ ತಂಡ ಸೋತಿತ್ತು. ಒಂದು ಲೆಕ್ಕದಲ್ಲಿ ಹೇಳುವುದಾದರೆ ಏಕದಿನ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವಿರುದ್ಧ ವೈಟ್ ವಾಶ್ ಮುಖಭಂಗವನ್ನು ಅನುಭವಿಸಿದೆ.
ಅದರಲ್ಲೂ ಕೂಡ ಮೂರು ಪಂದ್ಯಗಳಲ್ಲಿ ಗೆಲ್ಲುವ ಅವಕಾಶವನ್ನು ಭಾರತೀಯ ಕ್ರಿಕೆಟ್ ತಂಡ ಹೊಂದಿದ್ದರೂ ಕೂಡ ಕೊನೆಯ ಕ್ಷಣದಲ್ಲಿ ಎಲ್ಲಾ ಪಂದ್ಯಗಳಲ್ಲಿ ಎಡವಿರುವುದು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ತಂಡದ ವಿರುದ್ಧ ಅಸಮಾಧಾನ ಉಂಟಾಗಿರುವುದಕ್ಕೆ ಕಾರಣವಾಗಿದೆ. ಇನ್ನು ತಂಡದ ನಾಯಕನಾಗಿರುವ ಕೆಎಲ್ ರಾಹುಲ್ ರವರು ಕೂಡ ತಂಡದ ಸೋಲಿಗೆ ನಿಜವಾದ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತಂತೆ ಮಾತನಾಡುತ್ತಾ ಕೆ ಎಲ್ ರಾಹುಲ್ ಅವರು ತಂಡದ ಸೋಲಿನ ಕಾರಣವನ್ನು ಹೇಳಲು ನಾಚಿಕೆ ಪಡಬೇಕಾದ ಅಗತ್ಯವಿಲ್ಲ ಶಾಟ್ ಸೆಲೆಕ್ಷನ್ ನಲ್ಲಿ ಬ್ಯಾಟ್ಸ್ಮನ್ಗಳು ಎಡವಿದ್ದಾರೆ. ದೀಪಕ್ ಚಹರ್ ಅವರು ಕೊನೆಯ ಪಂದ್ಯದಲ್ಲಿ ತಮ್ಮ ಅದ್ಭುತವಾದ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲ್ಲಿಸುವ ಭರವಸೆಯನ್ನು ಮೂಡಿಸಿದ್ದರು ಆದರೆ ನಮ್ಮ ತಂಡ ಅದನ್ನು ಉಳಿಸಿಕೊಳ್ಳಲು ವಿಫಲವಾಯಿತು. ನಮ್ಮ ಆಟಗಾರರ ತಪ್ಪಿದೆ ಎಂದು ಹೇಳಲು ಬಯಸುವುದಿಲ್ಲ ಆದರೆ ಎದುರಾಳಿ ತಂಡದ ಮೇಲೆ ಒತ್ತಡವನ್ನು ಹೇರಲು ನಾವು ವಿಫಲರಾದೆವು ಎಂಬುದಾಗಿ ಪರೋಕ್ಷವಾಗಿ ಆಟಗಾರರ ಅಸಂಘಟಿತ ಪ್ರದರ್ಶನದ ಕುರಿತಂತೆ ಹೇಳಿದ್ದಾರೆ.
Comments are closed.