ಬಿಗ್ ನ್ಯೂಸ್: ಬಿಡುಗಡೆಯಾಯಿತು ಮತ್ತೊಂದು ಮಹಾ ಸಮೀಕ್ಷೆ, ಇಂದು ಚುನಾವಣೆ ನಡೆದರೇ ದೆಹಲಿ ಗದ್ದುಗೆ ಯಾರಿಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಮೂಡ್ ಆಫ್ ದಿ ನೇಷನ್ ಎಂಬುದು ಇಂಡಿಯಾ ಟುಡೇ ಗ್ರೂಪ್ ರಾಷ್ಟ್ರವ್ಯಾಪಿ ನಡೆಸಿದ ಸಮೀಕ್ಷೆ. ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಫಲಿತಾಂಶಗಳನ್ನು ಸಾಮಾನ್ಯವಾಗಿ ಪ್ರತಿ ಜನವರಿ ಮತ್ತು ಆಗಸ್ಟ್‌ನಲ್ಲಿ ನೀಡುತ್ತದೆ.ಈ ಸಮೀಕ್ಷೆಯಲ್ಲಿ ಮುಖ್ಯವಾದ ವಿಷಯಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಒಳಗೊಂಡ ಫಲಿತಾಂಶವಿರುತ್ತದೆ. ಈ ಸಮೀಕ್ಷೆಯು ರಾಜಕೀಯ, ಅರ್ಥಶಾಸ್ತ್ರ, ಸಮಾಜ, ಕ್ರೀಡೆ, ಸಿನಿಮಾ ಮತ್ತು ವಿದೇಶಾಂಗ ವ್ಯವಹಾರಗಳನ್ನು ವಿವರಿಸುತ್ತಿದೆ. ಈ ಬಾರಿಯ ರಾಜಕೀಯ ಸಮೀಕ್ಷೆಯಲ್ಲಿ ರಾಷ್ಟ್ರದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮತ ಬರಲಿವೆ ಎಂಬುದನ್ನು ಸಮೀಕ್ಷಿಸಲಾಗಿದೆ.
ಸಮೀಕ್ಷೆಯಲ್ಲಿ, ಪಂಜಾಬ್ ನ್ನು ಬಿಟ್ಟು ಎಲ್ಲಾ ಚುನಾವಣೆಗೆ ಒಳಪಟ್ಟ ನಾಲ್ಕು ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಅಂಕಗಳನ್ನು ಪಡೆದಿದ್ದಾರೆ. ಉತ್ತರಪ್ರದೇಶದಲ್ಲಿ ಪ್ರಧಾನಿ ಮೋದಿಯವರ ಸಾಧನೆಯು ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಜನರ ಅಭಿಪ್ರಾಯದ ಮೇರೆಗೆ ಉತ್ತಮ ವಿಭಾಗದಲ್ಲಿ ಶೇಕಡಾ 75ರಷ್ಟು, ಸರಾಸರಿ ವಿಭಾಗದಲ್ಲಿ ಶೇಕಡ ಒಂಭತ್ತು ಹಾಗೂ ಕಳಪೆ ವಿಭಾಗದಲ್ಲಿ ಶೇಕಡಾ 16ರಷ್ಟು ಮತಗಳನ್ನು ಪಡೆದಿದ್ದಾರೆ.
ಹಾಗೆಯೇ ಉತ್ತರಾಖಂಡದಲ್ಲಿ ಪ್ರಧಾನಿಯವರ ಉತ್ತಮ ವಿಭಾಗದಲ್ಲಿ ಶೇ.59, ಸರಾಸರಿ ವಿಭಾಗದಲ್ಲಿ ಶೇ.16 ಮತ್ತು ಕಳಪೆ ವಿಭಾಗದಲ್ಲಿ ಶೇ.20 ಮತ ಗಳಿಸಿದೆ. ಗೋವಾದಲ್ಲಿ ಶೇ.67ರಷ್ಟು ಪಾಲು ಪ್ರಧಾನಿ ಮೋದಿಯವರ ಕಾರ್ಯಕ್ಷಮತೆ ಉತ್ತಮವಾಗಿದೆ ಎಂದು ಅಭಿಪ್ರಾಯವಾಗಿದ್ದರೆ ಶೇ.13ರಷ್ಟು ಸರಾಸರಿ ವರ್ಗದಲ್ಲಿ ಮತ್ತು ಶೇ.20ರಷ್ಟು ಕಳಪೆ ಎಂದು ಫಲಿತಾಂಶ ಸಿಕ್ಕಿದೆ. ಮಣಿಪುರದಲ್ಲಿ 73 ಪ್ರತಿಶತ ಜನರು ಪ್ರಧಾನಿ ಮೋದಿಯವರ ಕಾರ್ಯವೈಖರಿಯು ಉತ್ತಮವಾಗಿದೆ ಎಂದಿದ್ದಾರೆ ಆದರೆ ಶೇಕಡಾ 8 ಜನರು ಸರಾಸರಿ ಎಂದು ಭಾವಿಸಿದ್ದರೆ ಶೇಕಡಾ 18ರಷ್ಟು ಜನರು ಮಾತ್ರ ಕಳಪೆ ಎಂದು ಮತ ನೀಡಿದ್ದಾರೆ.
ಮೇಲಿನ ರಾಜ್ಯಗಳಲಿ ಪ್ರಧಾನಿಯವರ ಕಾರ್ಯಕ್ಷಮತೆಗೆ ಹೆಚ್ಚಿನ ಅಂಕ ಸಿಕ್ಕರೆ, ಪಂಜಾಬ್‌ನಲ್ಲಿ ಮಾತ್ರ ಕೇವಲ 37 ಪ್ರತಿಶತ ಜನರು ಪ್ರಧಾನಿ ನರೇಂದ್ರ ಮೋದಿಯವರ ಕೆಲಸದ ಬಗ್ಗೆ ಉತ್ತಮ ಅಭಿಪ್ರಾಯ ಸೂಚಿಸಿದ್ದಾರೆ ಶೇಕಡಾ 44ರಷ್ಟು ಜನರು ಕಳಪೆ ಎಂದು ವೋಟ್ ಮಾಡಿದ್ದಾರೆ. ದೇಶದಲ್ಲಿ ಲೋಕಸಭೆ ಚುನಾವಣೆ ನಡೆದರೆ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 296 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ. ಆದರೆ ಬಿಜೆಪಿಯು ವೈಯಕ್ತಿಕವಾಗಿ 271 ಸ್ಥಾನಗಳನ್ನು ಗಳಿಸಬಹುದಿತ್ತು ಎಂದು ಇಂಡಿಯಾ ಟುಡೇನ ನೇಷನ್ ಪೋಲ್‌ನ ಮೂಡ್ ಸಮೀಕ್ಷೆ ವರದಿ ಮಾಡಿದೆ.
Comments are closed.