Neer Dose Karnataka
Take a fresh look at your lifestyle.

ಇದಪ್ಪ ಹವಾ ಅಂದ್ರೆ, ಆಹಾದಲ್ಲಿ ಪ್ರಸಾರವಾಗುವ ಟಾಕ್ ಶೋ ನ 2ನೇ ಸೀಸನ್ ಗೆ ಬಾಲಯ್ಯ ಪಡೆಯುತ್ತಿರುವ ಸಂಭಾವನೆ ಕೇಳಿದರೆ ತಲೆ ತಿರುಗುತ್ತೆ.

ನಮಸ್ಕಾರ ಸ್ನೇಹಿತರೇ ಚಿಕ್ಕ ಪರದೆ ಮೇಲೆ ಇತ್ತೀಚಿನ ದಿನಗಳಲ್ಲಿ ಕಾರ್ಯಕ್ರಮಗಳು ದೊಡ್ಡಮಟ್ಟದಲ್ಲಿ ಯಶಸ್ಸನ್ನು ಕಂಡು ಪ್ರೇಕ್ಷಕರಿಗೆ ಓಟಿಟಿಯತ್ತ ಬರಲು ಆಕರ್ಷಣೆಯಾಗಿದೆ ಎಂದರೆ ಕಂಡಿತವಾಗಿ ತಪ್ಪಾಗಲಾರದು. ಅದರಲ್ಲೂ ಚಿತ್ರರಂಗದ ಲೆಜೆಂಡರಿ ನಟರು ಯಾವುದಾದರೂ ಕಾರ್ಯಕ್ರಮವನ್ನು ನಡೆಸಲು ಬರುತ್ತಾರೆ ಎಂದರೆ ಖಂಡಿತವಾಗಿ ಪ್ರೇಕ್ಷಕರು ಕಾರ್ಯಕ್ರಮವನ್ನು ನೋಡಲು ಸಾಕಷ್ಟು ಉತ್ಸುಕರಾಗಿರುತ್ತಾರೆ.

ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಕೂಡ ತೆಲುಗು ಚಿತ್ರರಂಗದ ಓಟಿಟಿ ಪ್ಲಾಟ್ಫಾರ್ಮ್ ಆಗಿರುವ ಆಹಾ ದಲ್ಲಿ ಲೆಜೆಂಡರಿ ನಟನಾಗಿರುವ ನಂದಮೂರಿ ಬಾಲಕೃಷ್ಣ ರವರು ನಡೆಸಿಕೊಡುವ ಟಾಕ್ ಶೋ ಆಗಿರುವ ದ ಅನ್ ಸ್ಟಾಪೇಬಲ್ ಬಾಲಯ್ಯ ಕಾರ್ಯಕ್ರಮದ ಕುರಿತಂತೆ. ಈ ಕಾರ್ಯಕ್ರಮದ ಮೊದಲ ಸೀಸನ್ ಈಗಾಗಲೇ ಮುಗಿದಿದ್ದು ಬಾಲಯ್ಯ ರವರು ತಮ್ಮದೇ ಆದಂತಹ ಶೈಲಿಯಲ್ಲಿ ಬಂದ ಅತಿಥಿಗಳನ್ನು ಸಂದರ್ಶನ ಮಾಡಿ ಅವರ ಕುರಿತಂತೆ ಪ್ರೇಕ್ಷಕರಿಗೆ ಇನ್ನಷ್ಟು ಸವಿಸ್ತಾರವಾಗಿ ಹಾಗೂ ರಸವತ್ತಾಗಿ ತಿಳಿಸಿಕೊಡುವ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಇತ್ತೀಚಿಗೆ ಬಾಲಯ್ಯ ರವರ ಅಖಂಡ ಚಿತ್ರ ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ಬಾಕ್ಸಾಫೀಸಿನಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡಿದ್ದು ಕೂಡ ಈಗಾಗಲೆ ಅವರ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.

ನಿಮಗೆ ಗೊತ್ತಾಗ ಬೇಕಾಗಿರುವ ಇನ್ನೊಂದು ವಿಚಾರವೆಂದರೆ ಮೊದಲ ಸೀಸನ್ ಗಾಗಿ ಬಾಲಯ್ಯ ರವರು ಸಂಭಾವನೆಯಾಗಿ ಪ್ರತಿ ಎಪಿಸೋಡ್ ಗೆ 25 ಲಕ್ಷ ರೂಪಾಯಿ ಹಾಗೂ ಪೂರ್ತಿ ಶೋ ನಡೆಸಿಕೊಡಲು 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಆದರೆ ಮೊದಲ ಸೀಸನ್ ನ ಯಶಸ್ಸಿನಿಂದಾಗಿ ಕಾರ್ಯಕ್ರಮದ ನಿರ್ಮಾಪಕರು ಎರಡನೇ ಆವೃತ್ತಿಯನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಯ್ಯ ರವರ ಸಂಭಾವನೆ ಕೂಡ ದ್ವಿಗುಣಗೊಂಡಿದೆ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ಬಾಲಯ್ಯ ರವರಿಗೆ ಎರಡನೇ ಸೀಸನ್ನು ನಡೆಸಿ ಕೊಡುವುದಕ್ಕಾಗಿ ನಿರ್ಮಾಪಕರು ಪ್ರತಿ ಎಪಿಸೋಡಿಗೆ ಬರೋಬ್ಬರಿ 40 ಲಕ್ಷ ರೂಪಾಯಿ ನೀಡಲು ಸಜ್ಜಾಗಿದ್ದಾರೆ. ಈ ವಿಚಾರಗಳ ಕುರಿತಂತೆ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ.

Comments are closed.