ತನ್ನನ್ನು ಮದುವೆಯಾಗುವ ಗಂಡು ಆ ಬಾಲಿವುಡ್ ಸ್ಟಾರ್ ತರಹ ಇರಬೇಕು ಎಂದ ಅನನ್ಯ ಪಾಂಡೆ; ಯಾರದು ಗೊತ್ತಾ?? ಬೇಡವೇ ಬೇಡ ಎಂದ ನೆಟ್ಟಿಗರು.
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ಸದಾಕಾಲ ಒಂದಲ್ಲ ಒಂದು ವಿಚಾರದ ಕುರಿತಂತೆ ಸುದ್ದಿ ಹಾಗೂ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಮದುವೆ ವಿಚಾರಕ್ಕಾಗಿ ನಡೆದರೆ ಇನ್ನು ಕೆಲವೊಮ್ಮೆ ವಿಚಾರಕ್ಕಾಗಿ ನಡೆಯುತ್ತವೆ. ಕೆಲವೊಮ್ಮೆ ಅಸಹಜ ಘಟನೆಗಳಿಗಾಗಿ ಬಾಲಿವುಡ್ ಚಿತ್ರರಂಗ ಸದಾ ಸುದ್ದಿಯಲ್ಲಿರುತ್ತದೆ. ಇಂದಿನ ಬಾಲಿವುಡ್ ನ ಟ್ರೆಂಡಿಂಗ್ ಟಾಪಿಕ್ ಆಗಿರೋದು ಅನನ್ಯ ಪಾಂಡೆ. 23ವರ್ಷದ ಅನನ್ಯ ಪಾಂಡೆ ಈಗ ಬಾಲಿವುಡ್ ಚಿತ್ರರಂಗದಲ್ಲಿ ಯುವ ಉದಯೋನ್ಮುಖ ನಟಿಯಾಗಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ಚಿತ್ರರಂಗದ ಖ್ಯಾತ ಹಿರಿಯ ನಟ ಆಗಿರುವ ಚಂಕಿ ಪಾಂಡೆ ರವರ ಮಗಳಾಗಿರುವ ಅನನ್ಯ ಪಾಂಡೆ ರವರು ಈ ಹಿಂದೆ ನೆಪೋಟಿಸಂ ವಿಚಾರದಲ್ಲಿ ಸುದ್ದಿಯಲ್ಲಿದ್ದರು. ಕರಣ್ ಜೋಹರ್ ನಿರ್ಮಾಣದ ಸ್ಟೂಡೆಂಟ್ ಆಫ್ ದ ಇಯರ್ 2 ಸಿನಿಮಾದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಅನನ್ಯ ಪಾಂಡೆ ರವರು ಪಾದಾರ್ಪಣೆ ಮಾಡಿದ್ದಾರೆ. ತಮ್ಮ ಮಾಡರ್ನ್ ಡ್ರೆಸ್ ಸ್ಟೈಲ್ ಹಾಗೂ ಮಾತುಗಳಿಂದಾಗಿ ಅನನ್ಯ ಪಾಂಡೆ ರವರು ಸುದ್ದಿಯಲ್ಲಿರುತ್ತಾರೆ. ಸದ್ಯಕ್ಕೆ ಪುರಿಜಗನ್ನಾಥ ನಿರ್ದೇಶಿಸಿರುವ ಕರನ್ ಜೋಹರ್ ಹಾಗೂ ಚಾರ್ಮಿ ಕೌರ್ ನಿರ್ಮಾಣದ ವಿಜಯ್ ದೇವರಕೊಂಡ ನಟಿಸಿರುವ ಪಂಚಭಾಷೆ ಚಿತ್ರವಾಗಿರುವ ಲೈಗರ್ ಚಿತ್ರೀಕರಣದಲ್ಲಿ ಬ್ಯುಹಿಯಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ಸಿದ್ಧಾಂತ ಚತುರ್ವೇದಿ ಹಾಗೂ ದೀಪಿಕಾ ಪಡುಕೋಣೆ ನಟಿಸಿರುವ ಗೆಹರಿಯಾನ್ ಎನ್ನುವ ಇಂದಿನ ಜನರೇಷನ್ ನ ಪ್ರೀತಿಯ ಕುರಿತಂತೆ ತಿಳಿಹೇಳುವ ಚಿತ್ರದ ಅನನ್ಯ ಪಾಂಡೆ ರವರು ಕಾಣಿಸಿಕೊಳ್ಳುತ್ತಾರೆ.
ಈ ಚಿತ್ರದ ಬಿಡುಗಡೆಗಾಗಿ ಕೂಡ ಎದುರು ನೋಡುತ್ತಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ನನ್ನನ್ನು ಮದುವೆಯಾಗುವ ಗಂಡು ಆ ಬಾಲಿವುಡ್ ಸ್ಟಾರ್ ತರಹ ಇರಬೇಕು ಎಂಬುದಾಗಿ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಅನನ್ಯ ಪಾಂಡೆ ರವರು ಯಾವ ರೀತಿಯ ಗಂಡನ್ನು ಇಷ್ಟಪಡಬಹುದು ಎಂಬ ಕುರಿತಂತೆ ಈಗ ಎಲ್ಲರಿಗೂ ತಿಳಿದುಬಂದಿದೆ. ಹೌದು ಚಿಕ್ಕವಯಸ್ಸಿನಿಂದಲೂ ಅನನ್ಯ ಪಾಂಡೆ ರವರು ಬಾಲಿವುಡ್ ನ ಕಿಂಗ್ ಖಾನ್ ಎಂದೇ ಖ್ಯಾತರಾಗಿರುವ ಶಾರುಖ್ ಖಾನ್ ಅವರ ಸಿನಿಮಾಗಳನ್ನು ನೋಡಿಕೊಂಡು ಬಂದವರು. ಹೀಗಾಗಿ ತನ್ನನ್ನು ಮದುವೆಯಾಗುವ ಗಂಡು ಕೂಡ ಶಾರುಖ್ ಖಾನ್ ರವರಂತೆ ಇರಬೇಕು ಎಂಬುದಾಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.