ದೊಡ್ಡ ಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸಿದ್ದಾರೆ ಕನ್ನಡ ಚಿತ್ರರಂಗದ ಈ ಖ್ಯಾತ ನಟನ ಮಗಳು; ಯಾರು ಮತ್ತು ಯಾಕೆ ಗೊತ್ತಾ??
ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಪ್ರತಿಭೆಗಳು ಬರುತ್ತಲೇ ಇದ್ದಾರೆ ಎಂಬುದನ್ನು ನೀವು ಇತ್ತೀಚಿನ ಸಿನಿಮಾರಂಗದ ಬೆಳವಣಿಗೆಯಲ್ಲಿ ನೋಡಿರುತ್ತೀರಿ. ಇನ್ನು ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕ ಆಗಿರುವ ದುನಿಯಾ ವಿಜಯ್ ಅವರ ಕುರಿತಂತೆ ಹೇಳುವುದಾದರೆ ಅವರು ಮೊದಲು ಕನ್ನಡ ಚಿತ್ರರಂಗದಲ್ಲಿ ಸಾಹಸ ಪಟು ಆಗಿದ್ದರು. ನಂತರ ದುನಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಟನಾಗಿ ಎಂಟ್ರಿ ನೀಡಿದರು. ಇದಾದ ನಂತರ ಅವರು ಹಿಂದಿರುಗಿ ನೋಡಿದ್ದೇ ಇಲ್ಲ.
ಪ್ರತಿಭೆ ಒಂದಿದ್ದರೆ ಸಾಕು ಜೀವನದಲ್ಲಿ ಖಂಡಿತವಾಗಿಯೂ ಯಶಸ್ಸನ್ನು ಸಾಧಿಸಬಹುದು ಎಂದು ದುನಿಯಾ ವಿಜಯ್ ರವರ ಜೀವನ ಸಾಧನೆಯನ್ನು ನೋಡಿದರೆ ಖಂಡಿತವಾಗಿ ಹೇಳಬಹುದಾಗಿದೆ. ಇತ್ತೀಚಿಗಷ್ಟೇ ಸಲಗ ಚಿತ್ರದ ಯಶಸ್ಸಿನಿಂದಾಗಿ ದುನಿಯಾ ವಿಜಯ್ ಅವರ ಬೇಡಿಕೆಯನ್ನುವುದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಹೆಚ್ಚಾಗಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಪ್ರೇಕ್ಷಕರು ದುನಿಯಾ ವಿಜಯ್ ರವರ ಬಳಿ ಸಲಗ 2 ಕೂಡ ಮಾಡಿ ಎಂಬುದಾಗಿ ಬೇಡಿಕೆಯಿಟ್ಟಿದ್ದಾರೆ. ಪರಭಾಷೆಗಳಲ್ಲಿ ಕೂಡ ದುನಿಯಾ ವಿಜಯ್ ಅವರ ಬೇಡಿಕೆ ಹೆಚ್ಚಾಗಿದೆ ಎನ್ನುವುದಕ್ಕೆ ಉತ್ತಮ ಉದಾಹರಣೆಯೆಂದರೆ ಇತ್ತೀಚೆಗಷ್ಟೇ ಅವರು ತೆಲುಗು ಚಿತ್ರರಂಗದ ಲೆಜೆಂಡರಿ ನಟರಾಗಿರುವ ನಂದಮೂರಿ ಬಾಲಕೃಷ್ಣ ರವರ 107ನೇ ಚಿತ್ರಕ್ಕೆ ಆಯ್ಕೆಯಾಗಿರುವುದು. ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ದುನಿಯಾ ವಿಜಯ್ ರವರು ನಿರ್ದೇಶಕನಾಗಿ ಕೂಡ ದೊಡ್ಡಮಟ್ಟದಲ್ಲಿ ಹೆಸರನ್ನು ಮಾಡಲಿದ್ದಾರೆ ಎಂಬುದಕ್ಕೆ ಸಲಗ ಚಿತ್ರದ ಯಶಸ್ಸು ಉತ್ತಮ ಉದಾಹರಣೆ ಎಂದು ಹೇಳಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ದುನಿಯಾ ವಿಜಯ್ ರವರ ಮಗಳು ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಹೌದು ಗೆಳೆಯರೇ ವಿಜಯ್ ರವರ ಎರಡನೇ ಮಗಳಾಗಿರುವ ಮೋನಿಷ ನೋಡಲು ಹಿಂದಿಗಿಂತ ಸಾಕಷ್ಟು ಸೌಂದರ್ಯವತಿ ಯಾಗಿದ್ದಾರೆ. ಈಗಾಗಲೇ ಇವರು ಫ್ಯಾಶನ್ ಡಿಸೈನರ್ ಆಗಿದ್ದು ಮಾಡೆಲ್ ಆಗಿ ಕೂಡ ಪ್ರಖ್ಯಾತಿಯನ್ನು ಹೊಂದಿದ್ದಾರೆ. ಶುಗರ್ ಬೈ ಮೋನಿಷಾ ಎನ್ನುವ ಹೊಸ ಬ್ರಾಂಡ್ ಅನ್ನು ಕೂಡ ಸ್ಥಾಪಿಸಿದ್ದು ಇದಕ್ಕಾಗಿ ತನ್ನ ಸಹೋದರಿ ಆಗಿರುವ ಮೋನಿಕ ಹಾಗೂ ಇತರ ಗೆಳತಿಯರ ಸಹಾಯವನ್ನು ಪಡೆಯುತ್ತಿದ್ದಾರೆ. ಹೊಸ ಡಿಸೈನ್ ಗಳನ್ನು ಕೂಡ ಬಿಡುಗಡೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಫೋಟೋ ನೋಡಿರುವ ಅಭಿಮಾನಿಗಳು ನೀವು ಕೂಡ ಚಿತ್ರರಂಗಕ್ಕೆ ಬನ್ನಿ ಎಂಬುದಾಗಿ ಬೇಡಿಕೆಯನ್ನು ಇಟ್ಟಿದ್ದಾರೆ.
Comments are closed.