ಕೇವಲ ಒಂದೇ ಒಂದು ಎಪಿಸೋಡಿಗೆ ವಿಜಯ್ ರಾಘವೇಂದ್ರ ರವರು ಪಡೆಯುವ ಸಂಭಾವನೆ ಎಷ್ಟು ಗೊತ್ತೇ?? ದಾಖಲೆ ಸೃಷ್ಟಿ ಮಾಡಿದ ವಿಜಯ್ ಸರ್. ಎಷ್ಟು ಲಕ್ಷ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಟ ವಿಜಯ್ ರಾಘವೇಂದ್ರ ಅವರನ್ನು ನೀವು ಚಿಕ್ಕವಯಸ್ಸಿನಿಂದ ಬಲ್ಲಿರೆಂದು ನನಗೆ ತಿಳಿದಿದೆ. ಚಿಕ್ಕವಯಸ್ಸಿನಿಂದಲೂ ಕೂಡ ಬಾಲನಟನಾಗಿ ವಿಜಯ್ ರಾಘವೇಂದ್ರ ರವರು ಕನ್ನಡ ಚಿತ್ರರಂಗದಲ್ಲಿ ಚಿರಪರಿಚಿತರು. ಕನ್ನಡ ಚಿತ್ರರಂಗದ ಮೋಸ್ಟ್ ಅಂಡರ್ ರೇಟೆಡ್ ನಟರಲ್ಲಿ ವಿಜಯ್ ರಾಘವೇಂದ್ರ ರವರು ಕೂಡ ಕಂಡುಬರುತ್ತಾರೆ. ಅವರು ಅಣ್ಣಾವ್ರ ಪತ್ನಿಯಾಗಿರುವ ಪಾರ್ವತಮ್ಮನವರ ಸಹೋದರ ನಾಗಿರುವ ಚಿನ್ನೆ ಗೌಡರ ಪುತ್ರ.
ಇಷ್ಟೊಂದು ಫ್ಯಾಮಿಲಿ ಬ್ಯಾಗ್ರೌಂಡ್ ಸಪೋರ್ಟ್ ಇದ್ದರೂ ಕೂಡ ವಿಜಯ್ ರಾಘವೇಂದ್ರ ಅವರು ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮೆರೆದದ್ದು ಮಾತ್ರ ತಮ್ಮ ಸ್ವಂತ ಪರಿಶ್ರಮ ಹಾಗೂ ಪ್ರತಿಭೆಯಿಂದಾಗಿ. ಯಾವುದೇ ಪಾತ್ರೆಗಳು ಇರಲಿ ಅದನ್ನು ನೀರು ಕುಡಿದಷ್ಟೇ ಸುಲಭವಾಗಿ ಮಾಡುತ್ತಾರೆ ನಮ್ಮ ಚಿನ್ನಾರಿ ಮುತ್ತ. ನಟನೆಯಲ್ಲಾಗಲಿ ಡೈಲಾಗ್ ಡೆಲಿವರಿಯಲ್ಲಿ ಆಗಲಿ ಸಾಹಸ ದೃಶ್ಯಗಳಲ್ಲಿ ಆಗಲಿ ಅಥವಾ ಡ್ಯಾನ್ಸ್ ನಲ್ಲಾಗಲಿ ವಿಜಯ್ ರಾಘವೇಂದ್ರ ರವರು ಎಲ್ಲದರಲ್ಲೂ ಕೂಡ ಸವ್ಯಸಾಚಿ ಪ್ರತಿಭೆಯನ್ನು ತೋರಿಸುವ ನಟ. ಆದರೆ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಇವರಿಗೆ ಸಿಗುತ್ತಿರುವ ಅವಕಾಶಗಳು ಕಡಿಮೆ ಎಂದು ಹೇಳಬಹುದು. ಆದರೂ ಅವರು ನಟಿಸಿರುವ ಎಲ್ಲ ಚಿತ್ರಗಳು ಕೂಡ ಫ್ಯಾಮಿಲಿ ಆಡಿಯನ್ಸ್ ನೋಡುವಂತಹ ಉತ್ತಮ ಸದಭಿರುಚಿಯ ಚಿತ್ರಗಳೆಂದು ಹೇಳಬಹುದು.
ಇನ್ನು ಇತ್ತೀಚಿಗೆ ವಿಜಯರಾಘವೇಂದ್ರ ರವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್ ರಾಘವೇಂದ್ರ ರವರ ಮಾತು ಹಾಗೂ ತೀರ್ಪುಗಾರಿಕೆ ಎನ್ನುವುದು ಕಿರುತೆರೆ ಪ್ರೇಕ್ಷಕರಿಗೆ ಬಹಳಷ್ಟು ಇಷ್ಟ. ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಒಂದು ಎಪಿಸೋಡಿಗೆ ವಿಜಯ್ ರಾಘವೇಂದ್ರ ರವರು ಎಷ್ಟು ಸಂಭಾವನೆ ಪಡೆಯುತ್ತಿರುವುದು ಎಂಬುದು ಕೆಲವರ ಕುತೂಹಲದ ಮಾತಾಗಿದೆ. ಅದಕ್ಕೆ ಉತ್ತರ ನಮ್ಮಲ್ಲಿದೆ. ಹೌದು ಸ್ನೇಹಿತರೆ ವಿಜಯ್ ರಾಘವೇಂದ್ರ ರವರು ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಒಂದು ಎಪಿಸೋಡಿಗೆ ಬರೋಬ್ಬರಿ 1.6 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ನೀವು ಕೂಡ ವಿಜಯ್ ರಾಘವೇಂದ್ರ ರವರ ತೀರ್ಪುಗಾರಿಕೆಯನ್ನು ಇಷ್ಟಪಡುತ್ತಿದ್ದರೆ ಕಾಮೆಂಟ್ ಮೂಲಕ ತಿಳಿಸಿ.
Comments are closed.