Neer Dose Karnataka
Take a fresh look at your lifestyle.

ಕಳೆದ ಬಾರಿ ಟ್ರಿಪ್ ಹೋಗಿದ್ದಾಗ ಅಸಲಿ ಬಾಸ್ ದರ್ಶನ್ ರವರ ಪತ್ನಿ ಹಿಡಿದುಕೊಂಡಿರುವ ಪರ್ಸ್ ಬೆಲೆ ಎಷ್ಟು ಲಕ್ಷ ಗೊತ್ತೇ?? ಖಂಡಿತಾ ಶಾಕ್ ಆಗ್ತೀರಾ.

ನಮಸ್ಕಾರ ಸ್ನೇಹಿತರೇ ಸದ್ಯದ ಮಟ್ಟಿಗೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಎಂದು ನಿಸ್ಸಂಶಯವಾಗಿ ಹೇಳಬಹುದಾಗಿದೆ. ಅದರಲ್ಲೂ ಮಾಸ್ ವಿಭಾಗದಲ್ಲಿ ದರ್ಶನ್ ರವರಿಗೆ ಅತ್ಯಂತ ಹೆಚ್ಚು ಅಭಿಮಾನಿಗಳಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟನ ಮಗನಾಗಿದ್ದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ತಮ್ಮ ಸ್ವಂತ ಪರಿಶ್ರಮ ಹಾಗೂ ಪ್ರತಿಭೆಯ ಮೂಲಕ ತಮ್ಮನ್ನು ತಾವು ಸಾಬೀತುಪಡಿಸಿ ಜನರ ಮೆಚ್ಚುಗೆಯಿಂದ ನಾಯಕನಟನಾಗಿ ಮೂಡಿ ಬಂದವರು.

ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಯಾರಾದರೂ ಹೊಸಬರು ಬಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತುಂಬು ಹೃದಯದಿಂದ ಸ್ವಾಗತಿಸುತ್ತಾರೆ. ಕಷ್ಟ ಎಂದು ಬಂದವರಿಗೆ ತಮ್ಮ ಕೈಲಾದ ಸಾಹಸವನ್ನು ಮಾಡುತ್ತಾರೆ. ಇನ್ನು 2021 ರ ಆರಂಭದಲ್ಲಿ ಬಿಡುಗಡೆ ಆದಂತಹ ಡಿ ಬಾಸ್ ನಟನೆಯ ರಾಬರ್ಟ್ ಚಿತ್ರ ಕಳೆದ ವರ್ಷ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ವಿ ಹರಿಕೃಷ್ಣ ನಿರ್ದೇಶನದ ಕ್ರಾಂತಿ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಈ ಮಧ್ಯ ಸಮಯಸಿಕ್ಕಾಗ ತಮ್ಮ ಕುಟುಂಬದೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಮಯವನ್ನು ಕಳೆದಿದ್ದರು. ಈ ಸಂದರ್ಭದಲ್ಲಿ ತಮ್ಮ ಪತ್ನಿ ಹಾಗೂ ಮಗನೊಂದಿಗೆ ವಿದೇಶ ಪ್ರವಾಸ ಹಾಗೂ ಕಬಿನಿ ಅರಣ್ಯದಲ್ಲಿ ಸಫಾರಿ ಯನ್ನು ಮಾಡಿದರು. ಈ ಸಂದರ್ಭದಲ್ಲಿ ವೈರಲ್ ಆಗಿರುವ ಫೋಟೋವೊಂದರಲ್ಲಿ ದರ್ಶನ್ ರವರ ಮಡದಿಯಾಗಿರುವ ವಿಜಯಲಕ್ಷ್ಮಿಯವರು ಹಿಡಿದುಕೊಂಡಿರುವ ಪರ್ಸ್ ನ ಬೆಲೆ ಕೇಳಿ ಎಲ್ಲರೂ ಬೆರಗಾಗಿದ್ದಾರೆ. ಹೌದು ಗೆಳೆಯರೇ ಈ ಫೋಟೋದಲ್ಲಿ ದರ್ಶನ್ ರವರ ಪತ್ನಿ ವಿಜಯಲಕ್ಷ್ಮಿಯವರು ಹಿಡಿದುಕೊಂಡಿರುವ ಪರ್ಸ್ ನ ಬೆಲೆ ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು. ಈಗ ಇದೇ ವಿಚಾರದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡದಾಗಿ ಸುದ್ದಿಯಾಗುತ್ತಿದೆ.

Comments are closed.