Neer Dose Karnataka
Take a fresh look at your lifestyle.

ಯುವ ನಟಿಯ ಜೊತೆ ಹೃತಿಕ್ ರೋಷನ್ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿದ ತಕ್ಷಣ ನಟಿ ಸಬಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದೆಗೆ ಗೊತ್ತೇ??

31

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ಸೆಲೆಬ್ರಿಟಿಗಳ ಕುರಿತಂತೆ ನಾನಾ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಅದರಲ್ಲೂ ಇತ್ತೀಚಿಗೆ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿರುವ ಹೃತಿಕ್ ರೋಷನ್ ರವರ ಕುರಿತಂತೆ ಕೆಲವೊಂದು ವಿಚಾರಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಬಾಲಿವುಡ್ ಚಿತ್ರರಂಗದ ಟಾಪ್ ನಟರಲ್ಲಿ ಹೃತಿಕ್ ರೋಷನ್ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ನಟನೆ ನೃತ್ಯ ಸಾಹಸ ದೃಶ್ಯಗಳು ಯಾವುದೇ ಇರಲಿ ಎಲ್ಲದರಲ್ಲೂ ಕೂಡ ಮಾಸ್ಟರ್ ಆಗಿದ್ದಾರೆ. ಬಾಲಿವುಡ್ ಚಿತ್ರರಂಗದ ಗ್ರೀಕ್ ಗಾಡ್ ಎಂದು ಹೃತಿಕ್ ರೋಷನ್ ರವರನ್ನು ಕರೆಯಲಾಗುತ್ತದೆ.

ಸದ್ಯಕ್ಕೆ ಹೃತಿಕ್ ರೋಷನ್ ರವರು ಸುದ್ದಿಯಾಗುತ್ತಿರುವುದು ಬಾಲಿವುಡ್ ಚಿತ್ರರಂಗದ ಯುವನಟಿ ಒಬ್ಬರನ್ನು ಡೇಟ್ ಮಾಡುತ್ತಿರುವ ಕುರಿತಂತೆ. ಹಿಂದೆ ಹೃತಿಕ್ ರೋಷನ್ ರವರು ಸುಸಾನೆ ಖಾನ್ ರವರನ್ನು 2000ದಲ್ಲಿ ಮದುವೆಯಾಗಿದ್ದರು. ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದು 2014 ರಲ್ಲಿ ಈ ಜೋಡಿ ವಿವಾಹ ವಿಚ್ಛೇದನಕ್ಕೆ ಒಳಗಾಗಿದ್ದಾರೆ. ಇನ್ನು ಇವರ ಹೆಸರು ನಟಿ ಕಂಗನಾ ರಣಾವತ್ ರವರ ಜೊತೆಗೂ ಕೂಡ ಹಲವಾರು ಬಾರಿ ಕೇಳಿಬಂದಿತ್ತು.

ಈಗ ಹೃತಿಕ್ ರೋಷನ್ ರವರ ಹೆಸರು ಕೇಳಿಬರುತ್ತಿರುವುದು ಬಾಲಿವುಡ್ ಚಿತ್ರರಂಗದ ನಟಿ ಆಗಿರುವ ಸಬಾ ಆಜಾದ್ ಅವರ ಜೊತೆಗೆ. ಇವರಿಬ್ಬರು ಹಲವಾರು ಬಾರಿ ಒಟ್ಟಿಗೆ ಫೋಟೋಗಳಲ್ಲಿ ಕಾಣಿಸಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ಹೃತಿಕ್ ರೋಷನ್ ರವರ ಮನೆಯ ಮುಂದೆ ಪಾಪರಾಜಿಗಳು ಏನಾದರೂ ಸುದ್ದಿ ಸಿಗುತ್ತದೆ ಎಂಬುದಾಗಿ ಕಾಯುತ್ತಲೇ ಇರುತ್ತಾರೆ. ಇನ್ನು ಈಗ ಹೃತಿಕ್ ರೋಷನ್ ಅವರನ್ನು ಡೇಟ್ ಮಾಡುತ್ತಿದ್ದೀರಾ ಎಂಬುದಾಗಿ ಮಾಧ್ಯಮಗಳು ಸಬಾರವರ ಮುಂದೆ ನೇರವಾಗಿ ಪ್ರಶ್ನೆ ಇಟ್ಟಿದ್ದಾರೆ. ಇದಕ್ಕೆ ಜಾಣ್ಮೆಯನ್ನು ತೋರಿಸಿರುವ ನಟಿ ಸಬಾ ರವರು ಈ ಪ್ರಶ್ನೆಗೆ ಉತ್ತರಿಸದೆ ಮೌನವಹಿಸಿದ್ದಾರೆ. ಇವರಿಬ್ಬರ ಕುರಿತಂತೆ ಹರಿದಾಡುತ್ತಿರುವ ಫೋಟೋಗಳು ಹಾಗೂ ಸುದ್ದಿಗಳನ್ನು ಅವಲೋಕಿಸಿದ ನಂತರ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave A Reply

Your email address will not be published.